ಖಾಸಗಿ ಬಸ್‌ ಪ್ರಯಾಣದಲ್ಲಿ ಅಂತರ ಇಲ್ಲದೆ ಸೋಂಕಿಗೆ ಆಹ್ವಾನ!

By Kannadaprabha News  |  First Published Jun 4, 2020, 7:06 AM IST

ಮಂಗಳೂರಿನಲ್ಲಿ ಸೋಮವಾರ ರಸ್ತೆಗಿಳಿದ ಖಾಸಗಿ ಬಸ್‌ಗಳ ಪೈಕಿ ಕೆಲವು ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ಸೋಂಕಿಗೆ ಆಹ್ವಾನ ನೀಡುತ್ತಿರುವ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.


ಮಂಗಳೂರು(ಜೂ. 04): ಮಂಗಳೂರಿನಲ್ಲಿ ಸೋಮವಾರ ರಸ್ತೆಗಿಳಿದ ಖಾಸಗಿ ಬಸ್‌ಗಳ ಪೈಕಿ ಕೆಲವು ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೋನಾ ಸೋಂಕಿಗೆ ಆಹ್ವಾನ ನೀಡುತ್ತಿರುವ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸರ್ಕಾರದ ಸೂಚನೆಯಂತೆ ಅರ್ಧದಷ್ಟುಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಾಗಿ ಹೇಳುತ್ತಿರುವ ಖಾಸಗಿ ಬಸ್‌ಗಳು, ವಾಸ್ತವದಲ್ಲಿ ಪ್ರಯಾಣಿಕರನ್ನು ನಿಂತುಕೊಂಡು ಪ್ರಯಾಣಿಸಲು ಆಸ್ಪದ ನೀಡುತ್ತಿವೆ. ಈ ಕುರಿತು ಮಂಗಳವಾರ ನಗರದ ಖಾಸಗಿ ಬಸ್ಸೊಂದರಲ್ಲಿ ಸಾಮಾಜಿಕ ಅಂತರ ಇಲ್ಲದೆ ಬೇಕಾಬಿಟ್ಟಿಪ್ರಯಾಣಿಕರ ಪ್ರಯಾಣಕ್ಕೆ ಆಸ್ಪದ ನೀಡಿದ ಬಗ್ಗೆ ಫೋಟೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Tap to resize

Latest Videos

undefined

ಜಿಟಿ ಜಿಟಿ ಮಳೆ: ಹುಬ್ಬಳ್ಳಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿ

ಇದು ಉಡುಪಿ-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ ಆಗಿದ್ದು, ಸಾಮಾಜಿಕ ಅಂತರ ಕಾಪಾಡುವ ಸಲುವಾಗಿಯೇ ಉಡುಪಿ-ಮಂಗಳೂರು ಬಸ್‌ ಟಿಕೆಟ್‌ ದರವನ್ನು 67 ರು.ಗಳಿಂದ 80 ರು.ಗೆ ಹೆಚ್ಚಳಗೊಳಿಸಿತ್ತು. ಇದೀಗ ಅಂತರವನ್ನೂ ಕಾಪಾಡದೆ, ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿ ಕೊರೋನಾ ಸೋಂಕನ್ನು ಆಹ್ವಾನಿಸುತ್ತಿದೆ ಎಂದು ಇತರೆ ಪ್ರಯಾಣಿಕರು ದೂರಿದ್ದಾರೆ. ಅಂತರ ರಹಿತ ಪ್ರಯಾಣಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

click me!