ಚಾಮರಾಜನಗರ ದ.ಭಾರತದಲ್ಲೇ ಕೊರೋನಾ ಮುಕ್ತ ಏಕೈಕ ಜಿಲ್ಲೆ!

By Kannadaprabha NewsFirst Published Jun 3, 2020, 5:42 PM IST
Highlights

ಒಂದೇ ಒಂದು ಕೊರೋನಾ ಕೇಸ್‌ ಇಲ್ಲದೇ ಇದುವರೆಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ಜಿಲ್ಲೆ| ಈಗ ಇಡೀ ಉತ್ತರ ಭಾರತದಲ್ಲೇ ಕೊರೋನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದ ಕರ್ನಾಟಕದ ಗಡಿ ಜಿಲ್ಲೆ| ಮುಖ್ಯಮಂತ್ರಿಗಳು ಕಾಲಿಡಲು ಹೆದರುವ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಲ್ಲ

ಚಾಮರಾಜನಗರ(ಜೂ.03): ಒಂದೇ ಒಂದು ಕೊರೋನಾ ಕೇಸ್‌ ಇಲ್ಲದೇ ಇದುವರೆಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಇದೀಗ ದಕ್ಷಿಣ ಭಾರತದಲ್ಲಿಯೇ ಏಕೈಕ ಕೊರೋನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಹಸಿರು ವಲಯವಾಗಿ ಕೊರೋನಾ ಮುಕ್ತ ಜಿಲ್ಲೆಯಾಗಿಯೇ ಉಳಿದಿರುವುದು ಚಾಮರಾಜನಗರ ಎಂಬುದು covid19india.org ನೀಡಿರುವ ಅಧಿಕೃತ ಅಂಕಿ ಅಂಶಗಳಿಂದ ಖಚಿತವಾಗಿದೆ. ಇದುವರೆಗೂ ತೆಲಂಗಾಣದ ವಾರಂಗಲ್‌ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಕೊರೋನಾ ಕಂಡುಬಂದಿರಲಿಲ್ಲ. ಆದರೆ, ತೆಲಂಗಾಣದ ವಾರಂಗಲ್‌ ಗ್ರಾಮೀಣ ಜಿಲ್ಲೆಯಲ್ಲಿ ಮಂಗಳವಾರ ಕೊರೋನಾ ಪ್ರಕರಣ ಪತ್ತೆಯಾಗಿದೆ.

ಕೋರೋನಾ ಮಹಾದೇವನ ಚಮತ್ಕಾರ, ಇಲ್ಲಿ ಒಬ್ಬರಿಗೂ ಸೋಂಕಿಲ್ಲ!

ಹೀಗಾಗಿ ಚಾಮರಾಜನಗರ ದಕ್ಷಿಣ ಭಾರತದ ಕೊರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹಿರಿಮೆ ಪಾತ್ರವಾಗಿದೆ. ಚಾಮರಾಜನಗರ ತಮಿಳುನಾಡು, ಕೇರಳ ಗಡಿಯನ್ನು ಹಂಚಿಕೊಳ್ಳುವ ಜೊತೆಗೆ ಸುತ್ತಮುತ್ತಲಿನ ನೆರೆಯ ಮೈಸೂರು, ಮಂಡ್ಯ, ರಾಮನಗರ, ಕೊಡಗು ಜಿಲ್ಲೆಯ ಜೊತೆ ಗಡಿಯನ್ನು ಹಂಚಿಕೊಂಡಿದೆ.

ಇನ್ನು ಚಾಮರಾಜನಗರ ನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೌಢ್ಯತೆ ಕರ್ನಾಟಕ ರಾಜಕೀಯ ವಲಯದಲ್ಲಿದೆ. ಮುಖ್ಯಮಂತ್ರಿಗಳೇ ಕಾಲಿಡಲು ಅನೇಕ ಬಾರಿ ಯೋಚಿಸುವ ರಾಜ್ಯದ ಈ ಜಿಲ್ಲೆ ಈಗ ರಾಷ್ಟ್ರ ಮಟ್ಟದಲ್ಲೇ ಹೆಸರುವಾಸಿಯಾಗಿದೆ.

click me!