Dharwad: ಪಿಎಂ ಯುವಜನೋತ್ಸವಕ್ಕೆ ಯುವಕರಿಗಿಲ್ಲ ಅವಕಾಶ: ಕಾಲೇಜು, ಹಾಸ್ಟೆಲ್‌ಗೆ ರಜೆ ಘೋಷಣೆ

By Sathish Kumar KHFirst Published Dec 29, 2022, 1:02 PM IST
Highlights

 26 ನೇಯ ರಾಷ್ಟ್ರೀಯ ಯುವಜನೋತ್ಸವ ಪ್ರಧಾನಿ ಮೋದಿಯಿಂದ ಚಾಲನೆ ..!
 20 ಕೋಟಿ ಖರ್ಚ ಮಾಡಿ ಮಾಡುತ್ತಿರುವ ಯುವ ಜನೋತ್ಸವ...! ..
 ಯುವಜನೋತ್ಸವಕ್ಕೆ, ಯುವಕರಿಗೇಕೆ ಈ ಶಿಕ್ಷೆ...! 

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಡಿ.29):  ಮುಂದಿನ ತಿಂಗಳು ಜನವರಿ 12 ರಂದು 26 ನೇಯ ರಾಷ್ಟ್ರೀಯ ಯುವಜನೋತ್ಸವ ಆಚರಣೆಯನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಜನೇವರಿ 12 ರಿಂದ 16 ರ ವರೆಗೆ ಯುವಜನೊತ್ಸವ ನಡೆಯಲಿದೆ. ಒಂದು ಕಡೆ ಮಕ್ಕಳಿಗೆ ಯುವಜನೋತ್ಸವ ಮಾಡಿ ಯುವಕರಿಗೆ ಮಾದರಿಯಾಗಬೇಕಾದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಶ್ವವಿದ್ಯಾಲಯದ ಎಲ್ಲ ಕ್ಯಾಂಪಸ್ ಹಾಸ್ಟೆಲ್‌ಗಳು ಮತ್ತು ತರಗತಿಗಳಿಗೆ ರಜೆ ಘೋಷಣೆ ಮಾಡಿ ವಿವಿಯ ಕುಲ ಸಚಿವ ಕೆ.ಬಿ ಗುಡಸಿ ಆದೇಶ ಹೋರಡಿಸಿದ್ದಾರೆ.

ಇನ್ನು ಕವಿವಿಯ ಕ್ಯಾಂಪಸನ್ ಎಲ್ಲ ಹಾಸ್ಟೆಲ್ ಗಳು, ಕರ್ನಾಟಕ ಕಾಲೇಜಿನ ಎಲ್ಲ ಹಾಸ್ಟೆಲ್ ಗಳು, ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಾಸ್ಟೆಲ್ ಗಳನ್ನ ವಸತಿ ಸಮೇತ ಖಾಲಿ ಮಾಡಬೇಕು ಎಂದು ಆದೇಶವನ್ನ ಹೊರಡಿಸಿದೆ ಕವಿವಿ ಆಡಳಿತ ಮಂಡಳಿ..ಒಂದು ಕಡೆ ಕವಿವಿಯ ವ್ಯಾಪ್ತಿಯಲ್ಲಿ ವಿವಿಧ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ನಾವು ಎಂದು ಕವಿವಿ ಕುಲಪತಿ ಗಳಿಗೆ ಬಿಡಿಶಾಪವನ್ನ ಹಾಕುತ್ತಿದ್ದಾರೆ..ಇನ್ನು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಖಾಲಿ ಮಾಡಿ ಹೋಗಿ ಎಂದರೆ ಎಲ್ಲಿ ಹೋಗಬೇಕು ಮಕ್ಕಳು ಎಂದು ಪೋಷಕರು ಕೂಡಾ ಶಾಪವನ್ನ ಹಾಕುತ್ತಿದ್ದಾರೆ.

ರಾಷ್ಟ್ರೀಯ ಭಾವೈಕ್ಯದ ಸಂಕೇತವಾಗಿ ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಯೋಜನೆ

9 ದಿ‌ನ ಮಕ್ಕಳು ಎಲ್ಲಿಗೆ ಹೋಗಬೇಕು: ಇದೆ ಜನವರಿ 9 ರಿಂದ ಜನೇವರಿ 17 ರವರೆಗೆ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯ ಘಟಕದ ಎಲ್ಲ‌ ಮಹಾ ವಿದ್ಯಾಲಯಗಳಿಗೆ ರಜೆ ಘೋಷಣೆ ಮಾಡಿ ಕುಲ ಸಚಿವ ಕೆ.ಬಿ ಗುಡಸಿ ಅವರು ಆದೇಶವನ್ನ‌ ಹೊರಡಿಸಿದ್ದಾರೆ. ಇದರಿಂದ  9 ದಿ‌ನಗಳವರೆಗೆ ಮಕ್ಕಳು ಎಲ್ಲಿ ಹೋಗಬೇಕು ಎಂದು ದಿಕ್ಕು ತೋಚದಂತಾಗಿದೆ..ಎಂದು ವಿದ್ಯಾರ್ಥಿ ಗಳು ಚಿಂತೇಗಿಡಾಗಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರು ಬರುತ್ತಾರೆ ಎಂಬ ಕಾರಣಕ್ಕೆ ಕೇಂದ್ರ ಸರಕಾರದಿಂದ 10 ಕೋಟಿ, ರಾಜ್ಯ ಸರಕಾರದಿಂದ 10 ಕೋಟಿ ಸೇರಿದಂತೆ 20 ಕೋಟಿ ಹಣವನ್ನ‌ ಯುವಜನೋತ್ಸವಕ್ಕೆ ಖರ್ಚು ಮಾಡಲಾಗುತ್ತಿದೆ..ಆದರೆ ಅದೆ ಖರ್ಚಿನ ಹಣದಲ್ಲಿ ಯುವಜನೋತ್ಸವ ಕ್ಕೆ‌ ಬಂದವರಿಗೆ ಖರ್ಚು ವೆಚ್ಚವನ್ನ ನೋಡಿಕ್ಕೊಳ್ಳಬಹುದಿತ್ತು.

ಜ.12ಕ್ಕೆ ಹುಬ್ಬಳ್ಳಿಗೆ ಪ್ರಧಾನಿ ಮೋದಿ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಹಾಸ್ಟೆಲ್‌ನಲ್ಲಿ ಕಾರ್ಯಕರ್ತರಿಗೆ ತಂಗಲು ವ್ಯವಸ್ಥೆ: ಆದರೆ 20 ಕೋಟಿ ಹಣದಲ್ಲಿ ಬಂದವರಿಗೆ ವಸತಿಗಾಗಿ ಬೇರೆ ಬೇರೆ ಹೊಟೆಲ್ ಗಳಲ್ಲಿ, ಹಾಲ್ ಗಳಲ್ಲಿ ವ್ಯವಸ್ಥೆ ಮಾಡಬಹುದಿತ್ತು. ಆದರೆ ಅದನ್ನ‌ ಹೊರತು ಪಡಿಸಿ ವಿದ್ಯಾರ್ಥಿಗಳಿಗೆ ಸದ್ಯ ಹಾಸ್ಡೆಲ್ ನ ವಸತಿ ಸಮೇತ ಖಾಲಿ ಮಾಡುವಂತೆ‌ ಆದೇಶ ಮಾಡಿದ್ದು ಸರಿ ಅಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು‌ ವಿದ್ಯಾರ್ಥಿಗಳು ಈ ಒಂದು‌ ಆದೇಶ ಪ್ರತಿಯಿಂದ ಕಂಗಾಲಾಗಿದ್ದಾರೆ. ಕೋಟಿ ಕೋಟಿ ಖರ್ಚು ಮಾಡುತ್ತಿದ್ದರು.ವಿವಿ ಮಾತ್ರ ಬಡ ವಿದ್ಯಾರ್ಥಿಗಳನ್ನ‌ ಮನೆಗೆ ಕಳುಹಿಸುವ ಕೆಲಸವನ್ನ ಮಾಡುತ್ತಿದೆ..ಇದರಿಂದ‌  ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ..ಈ ವರದಿಯನ್ನಾದರೂ ನೋಡಿಕ್ಕೋಂಡು ವಿವಿ ಆಡಳಿತ ಮಂಡಳಿ ತನ್ನ‌ ಆದೇಶ ವನ್ನ ವಾಪಸ್ಸು ಪಡೆಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.

click me!