ಕೊರೋನಾ ಆತಂಕ: ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸ್ಯಾನಿಟೈಸರ್‌ಗೆ ಹಣವಿಲ್ವಂತೆ!

By Kannadaprabha News  |  First Published Mar 21, 2020, 10:43 AM IST

ಸರ್ಕಾರ ಕೇವಲ ಮಾರ್ಗದರ್ಶಿ ನೀಡಿದೆ, ಆದರೆ ಹಣ ಬಿಡುಗಡೆ ಮಾಡಿಲ್ಲ|ಉಪ ನೋಂದಣಾಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಕೊರೋನಾ ಸೋಂಕು ಭೀತಿ|ಚೌಡಯ್ಯ ಮೆಮೋರಿಯಲ್‌ ಹಾಲ್‌ಗೆ ಸೋಂಕಿತ ಭೇಟಿ?|


ಬೆಂಗಳೂರು[ಮಾ.21]: ಜನದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದ್ದರೂ ಉಪ ನೋಂದಣಾಧಿಕಾರಿಗಳ ಕಚೇರಿಗಳ ಸೇವೆ ಮುಂದುವರೆದಿದೆ. ಆದರೆ, ಇಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲೂ ಹಣವಿಲ್ಲ ಎಂದು ಉಪ ನೋಂದಣಾಧಿಕಾರಿಗಳು ದೂರಿದ್ದಾರೆ.

ಉಪ ನೋಂದಣಾಧಿಕಾರಿಗಳ ಕಚೇರಿಗಳು ತೆರೆದಿರುವುದರಿಂದ ತೀವ್ರ ಜನದಟ್ಟಣೆ ಉಂಟಾಗಿ ಉಪ ನೋಂದಣಾಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಕೊರೋನಾ ಸೋಂಕು ಭೀತಿ ಆವರಿಸಿದೆ. ಉಳಿದಂತೆ ದಾವಣಗೆರೆ, ರಾಯಚೂರು ಸೇರಿದಂತೆ ಒಟ್ಟು ಆರು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಉಪ ನೋಂದಣಾಧಿಕಾರಿಗಳ ಕಚೇರಿಗಳ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ. ಆದರೆ ಕೇಂದ್ರ ಕಚೇರಿಯಿಂದ ಆದೇಶ ಬಾರದ ಹಿನ್ನೆಲೆಯಲ್ಲಿ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಉಪ ನೋಂದಣಾಧಿಕಾರಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

Tap to resize

Latest Videos

ಕೋಲಾರ: ಕೊರೋನಾ ಹಿನ್ನೆಲೆ 3 ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬೀಗ..!

ಆಸ್ತಿ ನೋಂದಣಿ ಸೇರಿದಂತೆ ವಿವಿಧ ಸೇವೆ ಬಯಸಿ ಬರುವವರಿಗೆ ಬಾಗಿಲಲ್ಲೇ ಸ್ಯಾನಿಟೈಸರ್‌ ಒದಗಿಸಬೇಕು. ಇನ್ನು ಆಸ್ತಿ ನೋಂದಣಿಗೆ ಬಯೋಮೆಟ್ರಿಕ್‌ ನೀಡುವಾಗ ಸಾರ್ವಜನಿಕರಿಗೆ ಸ್ಯಾನಿಟೈಸರ್‌ ಬಳಕೆ ಮಾಡಲು ತಿಳಿಸಬೇಕು. ಸಿಬ್ಬಂದಿಯೆಲ್ಲಾ ಮಾಸ್ಕ್‌ ಧರಿಸಬೇಕು. ಶುಚಿತ್ವ ಕಾಪಾಡಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ, ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಸ್ಯಾನಿಟೈಸರ್‌ಗಳಿಗೂ ಸ್ವಂತ ಹಣ ಹಾಕಿಕೊಂಡು ತರುವಂತಾಗಿದೆ ಎಂದು ಉಪ ನೋಂದಣಾಧಿಕಾರಿಗಳು ದೂರಿದ್ದಾರೆ.

ಚೌಡಯ್ಯ ಮೆಮೋರಿಯಲ್‌ ಹಾಲ್‌ಗೆ ಸೋಂಕಿತ ಭೇಟಿ?

ಮಾ.18 ರಂದು ಸೋಂಕು ದೃಢಪಟ್ಟ ಮೂರು ವ್ಯಕ್ತಿಗಳಲ್ಲಿ ಒಬ್ಬರು ಮಾ.12ರಂದು ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಾರು 200 ಜನರು ಸಹ ಸ್ವಯಂ ಪ್ರೇರಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಆಯೋಜಕರು ಕರೆ ನೀಡಿರುವುದಾಗಿ ವರದಿ ಮಾಡಿದೆ.

ಡಬಲ್‌ ಡೆಕ್ಕರ್‌ ರೈಲು ಸಂಚಾರ ಬಂದ್‌..!

ಆದರೆ, ಇದನ್ನು ಆರೋಗ್ಯ ಇಲಾಖೆ ನಿರಾಕರಿಸಿದ್ದು, ಈವರೆಗೆ ನಮಗೆ ಅಂತಹ ಮಾಹಿತಿ ಬಂದಿಲ್ಲ. ಒಂದು ವೇಳೆ ಮಾಹಿತಿ ಬಂದರೆ ಕೊಡಗು ಸೋಂಕಿತನ ಜೊತೆ ಸಂಪರ್ಕ ಸಾಧಿಸಿದ್ದ ಬಸ್ಸು ಪ್ರಯಾಣಿಕರನ್ನು ಸ್ವಯಂ ಪ್ರೇರಿತವಾಗಿ ಮಾಹಿತಿ ನೀಡುವಂತೆ ಕರೆ ನೀಡಿದ ಮಾದರಿಯಲ್ಲೇ ಕರೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

click me!