ಫೆ.9ರಿಂದ ಮೆಟ್ರೋ ಟಿಕೆಟ್‌ ದರ ಏರಿಕೆ ಆಗಲ್ಲ: ತಾತ್ಕಾಲಿಕ ಬ್ರೇಕ್‌

Kannadaprabha News   | Kannada Prabha
Published : Feb 09, 2026, 05:03 AM IST
Namma Metro Fares to Rise

ಸಾರಾಂಶ

ತೀವ್ರ ಜನಾಕ್ರೋಶ, ಜನಪ್ರತಿನಿಧಿಗಳ ಒತ್ತಡಕ್ಕೆ ಕೊನೆಗೂ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ, ಸೋಮವಾರದಿಂದ (ಫೆ.9) ಜಾರಿಗೊಳಿಸಲು ಉದ್ದೇಶಿಸಿದ್ದ ಮೆಟ್ರೋ ಟಿಕೆಟ್‌ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ಬೆಂಗಳೂರು : ತೀವ್ರ ಜನಾಕ್ರೋಶ, ಜನಪ್ರತಿನಿಧಿಗಳ ಒತ್ತಡಕ್ಕೆ ಕೊನೆಗೂ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ, ಸೋಮವಾರದಿಂದ (ಫೆ.9) ಜಾರಿಗೊಳಿಸಲು ಉದ್ದೇಶಿಸಿದ್ದ ಮೆಟ್ರೋ ಟಿಕೆಟ್‌ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌ ಹಾಕಿದೆ.

ಕನಿಷ್ಠ ₹1 ರಿಂದ ಗರಿಷ್ಠ ₹5ವರೆಗೆ ಹೆಚ್ಚಿಸುವುದಾಗಿ ತಿಳಿಸಿತ್ತು

ನಿಗಮವು ಪ್ರಯಾಣ ದರವನ್ನು ಕನಿಷ್ಠ ₹1 ರಿಂದ ಗರಿಷ್ಠ ₹5ವರೆಗೆ ಹಾಗೂ ಜತೆಗೆ ಪಾಸ್‌ಗಳ ಬೆಲೆ (ಶೇ.5ರಷ್ಟು) ಹೆಚ್ಚಿಸುವುದಾಗಿ ತಿಳಿಸಿತ್ತು. ಫೆ. 9ರಿಂದ ಜಾರಿಗೆ ತರುವುದಾಗಿ ಈ ಮೊದಲೇ ತಿಳಿಸಿತ್ತು. ಈ ನಡುವೆ ದರ ಏರಿಕೆ ಬಗ್ಗೆ ಭಾನುವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿ ದರ ಏರಿಕೆ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾಗಿ ಮಾಹಿತಿ ನೀಡಿದೆ. ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆ ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದು, ದರ ಏರಿಕೆಯ ತೂಗುಗತ್ತಿ ಪ್ರಯಾಣಿಕರ ಮೇಲಿದೆ.

ಪ್ರಯಾಣ ದರ ಏರಿಕೆ ಬಗ್ಗೆ ವ್ಯಾಪಕ ವಿರೋಧ

ಪ್ರಯಾಣ ದರ ಏರಿಕೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆ ನಿರ್ಧಾರವನ್ನು ಪುನಃ ಪರಿಶೀಲನೆಗೆ ಮುಂದಾಗಿದೆ. ಈ ವಾರವೇ ಬಿಎಂಆರ್‌ಸಿಎಲ್‌ ಮಂಡಳಿಯಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ಲಾಲ್‌ ಕಟ್ಟರ್‌ ಅವರು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ದರ ಏರಿಕೆ ಮಾಡದಂತೆ ಸೂಚಿಸಿದ್ದು, ಸೋಮವಾರ ದರ ಏರಿಕೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ. ಇದರಿಂದ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಶುಕ್ರವಾರ ಸಂಸದ ತೇಜಸ್ವಿ ಸೂರ್ಯ ‘ಎಕ್ಸ್‌’ ನಲ್ಲಿ ತಿಳಿಸಿದ್ದರು.

ಈ ನಡುವೆ ಈ ದರ ಪರಿಷ್ಕರಣಾ ವರದಿಯನ್ನು ತಿರಸ್ಕರಿಸಿ ಪುನಃ ಸಮಿತಿ ರಚಿಸಿ ವೈಜ್ಞಾನಿಕವಾಗಿ ಪರಿಷ್ಕರಿಸುವಂತೆ ಒತ್ತಾಯ ಹೆಚ್ಚಾಗಿದೆ.

PREV
Read more Articles on
click me!

Recommended Stories

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ : ತೇಜಸ್ವಿ ಸೂರ್ಯ
ರಾಸಲೀಲೆ ರಾಮಚಂದ್ರ ರಾವ್ ಸಸ್ಪೆಂಡ್ ಬೆನ್ನಲ್ಲೇ ಮತ್ತೊಬ್ಬ ಪೊಲೀಸ್ ಅಧಿಕಾರಿ ಅಮಾನತು; ಈ ಬಾರಿ ಕಾರಣವನ್ನೇ ತಿಳಿಸಿಲ್ಲ!