JDSನಿಂದ ಯಾರನ್ನೇ ನಿಲ್ಸಿದ್ರೂ 50 ಸಾವಿರ ಗ್ಯಾರಂಟಿ: ರೇವಣ್ಣ ವಿಶ್ವಾಸ

Published : Nov 17, 2019, 11:06 AM IST
JDSನಿಂದ ಯಾರನ್ನೇ ನಿಲ್ಸಿದ್ರೂ 50 ಸಾವಿರ ಗ್ಯಾರಂಟಿ: ರೇವಣ್ಣ ವಿಶ್ವಾಸ

ಸಾರಾಂಶ

ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದಿಂದ ಯಾರನ್ನೇ ನಿಲ್ಲಿಸಿದ್ದರೂ 50,000 ವೋಟ್‌ ಗ್ಯಾರಂಟಿ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ನುಡಿದಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದಾಯಿತು. ಈಗ ಜನರು ತೀರ್ಪು ನೀಡೋ ಸಮಯ ಬಂದಿದೆ. ಹೀಗಾಗಿ ಇಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಮೈಸೂರು(ನ.17): ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದಿಂದ ಯಾರನ್ನೇ ನಿಲ್ಲಿಸಿದ್ದರೂ 50,000 ವೋಟ್‌ ಗ್ಯಾರಂಟಿ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ನುಡಿದಿದ್ದಾರೆ.

ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಯಾಕೆ ಬಂದಿದೆ ಅನ್ನೋದು ಜನರಿಗೆ ಗೊತ್ತಿದೆ. ಇದು ದೇವರಾಜ್ ಅರಸ್‌ ಇದ್ದಂತ ಊರು. ವಿಶ್ವನಾಥ್‌ ನಮ್ಮ ಪಕ್ಷದಿಂದ ಗೆದ್ದು ಅಧಿಕಾರ ಅನುಭವಿಸಿ, ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದಾಯಿತು. ಈಗ ಜನರು ತೀರ್ಪು ನೀಡೋ ಸಮಯ ಬಂದಿದೆ. ಹೀಗಾಗಿ ಇಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

JDS ಅಭ್ಯರ್ಥಿ ಸೋಮಶೇಖರ್‌ ನಾಮಪತ್ರ ಸಲ್ಲಿಕೆ: ರಾಹುಕಾಲ ಮುಗಿಯೋವರೆಗೆ ಮೆರವಣಿಗೆ

ರಾಹುಲ್ ಗಾಂಧಿ ನಮ್ಮನ್ನು ಬಿಜೆಪಿಯ ಬಿ ಟೀಂ ಅಂದಿದ್ದರು. ಇಲ್ಲವಾಗಿದ್ರೆ ನಾವು 60 ಸ್ಥಾನ ಗೆಲ್ಲುತ್ತಿದ್ದೆವು. ಚುನಾವಣೆ ಮಗಿದ ಮೇಲೆ ಅದೇ ಬಿ.ಟೀಂ ಅನ್ನು ಬಂದು ತಬ್ಬಿಕೊಂಡರು. ಯಾರ ಸ್ಟ್ಯಾಂಡ್‌ ಯಾರ ಪರ ಎಂಬುದು ಗೊತ್ತಾಗಲಿದೆ. ಚುನಾವಣೆ ಮುಗಿದ ಬಂದು ಮೇಲೆ 5 ವರ್ಷ ನೀವೇ ಇರಿ ಅಂದಿದ್ದರು. ನಂತರ ಕಾಂಗ್ರೆಸ್‌ನವರು ತಮ್ಮ ಶಾಸಕರನ್ನೇ ಉಳಿಸಿಕೊಳ್ಳೋಕೆ ಆಗಲಿಲ್ಲ. ಈಗ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ದೇವೆಗೌಡರು ಯಾರಿಂದಲೂ ಕಲಿಯುವ ಅಗತ್ಯವಿಲ್ಲ. ಕಾಂಗ್ರೆಸ್‌ನವರು ಅವರ ಪಕ್ಷ ಉಳಿಸಿಕೊಳ್ಳಲಿ ಸಾಕು. ಜಿ.ಟಿ. ದೇವೇಗೌಡರನ್ನು ಸರಿ ಮಾಡ್ತಿವಿ ಇರಿ ಎಂದರು.

ಬಲಗಾಲಿಟ್ಟು ಒಳಗಡೆ ಬನ್ನಿ

ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೋಮಶೇಖರ್‌ ನಾಮಪತ್ರ ಸಲ್ಲಿಸುವ ವೇಳೆ ಬಲಗಾಲಿಟ್ಟು ಒಳಗಡೆ ಬನ್ನಿ ಎನ್ನುವ ಮೂಲಕ ಮಾಜಿ ಸಚಿವ ಎಚ್‌.ಡಿ. ರೇವಣ್ಣ ನುಡಿದರು. ಎಡಗಾಲಿಟ್ಟು ಒಳಹೋಗಿದ್ದ ವಕೀಲರೊಬ್ಬರನ್ನ ಎಳೆದು ಹೊರಗೆ ಕರೆದು ಮತ್ತೆ ಒಳಗೆ ಬಲಗಾಲಿಟ್ಟು ಹೋಗುವಂತೆ ಸೂಚನೆ ನೀಡಿದರು. ನಂತರ ಮತ್ತೊಬ್ಬ ಬೆಂಬಲಿಗನ್ನು ಹಾಗೇ ಹೊರ ಕರೆದು ಒಳಗೆ ಕಳುಹಿಸಿದ ಘಟನೆಯೂ ನಡೆಯಿತು.

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!

PREV
click me!

Recommended Stories

Photos: ಕಾರವಾರ ಕರಾವಳಿ ಉತ್ಸವದಲ್ಲಿ ಶ್ವಾನಗಳ ದರ್ಬಾರ್: 25 ತಳಿ ನಾಯಿಗಳಿಂದ ಅದ್ಭುತ ಸಾಹಸ ಪ್ರದರ್ಶನ!
ಬಂಡೀಪುರ: ಹುಲಿ ಪಂಜದ ಒಂದೇ ಏಟಿಗೆ ಉಸಿರು ನಿಲ್ಲಿಸಿದ ವಾಚರ್!