JDS ಅಭ್ಯರ್ಥಿ ಸೋಮಶೇಖರ್‌ ನಾಮಪತ್ರ ಸಲ್ಲಿಕೆ: ರಾಹುಕಾಲ ಮುಗಿಯೋವರೆಗೆ ಮೆರವಣಿಗೆ

By Kannadaprabha NewsFirst Published Nov 17, 2019, 10:48 AM IST
Highlights

ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ದೇವರಹಳ್ಳಿ ಸೋಮಶೇಖರ್‌ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಸೋಮಶೇಖರ್‌ ನಾಮಪತ್ರ ಸಲ್ಲಿಸುವ ವೇಳೆ ಹಲವು ವಿಶೇಷ ಘಟನೆಗಳು ಜರುಗಿದವು. ನಾಮಪತ್ರ ಸಲ್ಲಿಸಲು ರಾಹುಕಾಲ ಮುಗಿಯುವವರೆಗೆ ಮೆರವಣಿಗೆ ನಡೆಸಲಾಯಿತು.

ಮೈಸೂರು(ನ.17): ಹುಣಸೂರು ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ದೇವರಹಳ್ಳಿ ಸೋಮಶೇಖರ್‌ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.

ಸೋಮಶೇಖರ್‌ ನಾಮಪತ್ರ ಸಲ್ಲಿಸುವ ವೇಳೆ ಹಲವು ವಿಶೇಷ ಘಟನೆಗಳು ಜರುಗಿದವು. ನಾಮಪತ್ರ ಸಲ್ಲಿಸಲು ರಾಹುಕಾಲ ಮುಗಿಯುವವರೆಗೆ ಮೆರವಣಿಗೆ ನಡೆಸಲಾಯಿತು. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮೆರವಣಿಗೆ ಮುಗಿಸಿ ವಾಪಸ್‌ ಹೋದ ಬಳಿಕ ತಾಲೂಕು ಕಚೇರಿ ಅವರಣದಲ್ಲಿ ಕಾದು ಕುಳಿತ್ತಿದ್ದ ಮಾಜಿ ಸಚಿವ ರೇವಣ್ಣ ಅವರು ನಾಮಪತ್ರ ಸಲ್ಲಿಸಲು ಐದು ಮಂದಿಯನ್ನು ಜಾತಿ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ.

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!

ಈ ವೇಳೆ ಕಚೇರಿ ಪ್ರವೇಶಿಸುವಾಗ ಎಡಗಾಲು ಇಟ್ಟು ಒಳಗೆ ಹೋದವರನ್ನು ವಾಪಸ್‌ ಕರೆಸಿ, ಬಲಗಾಲು ಇಟ್ಟು ಹೋಗುವಂತೆ ಸೂಚಿಸಿದರು. ‘ಏನ್ರಾಪ್ಪ ಬಲಗಾಲು ಹಾಕಿ ಒಳಗೆ ಬನ್ನಿ‘ ಎಂದು ಸೂಚಿಸಿದರು. ನಂತರ ರೇವಣ್ಣ ಸಹಿತ 5 ಮಂದಿ ಸಮ್ಮುಖದಲ್ಲಿ ಸೋಮಶೇಖರ್‌ ನಾಮಪತ್ರ ಸಲ್ಲಿಸಿದ್ದಾರೆ.

ಅಧಿಕಾರಕ್ಕಾಗಿ ಮನೆ ಬಾಗಿಲು ತಟ್ಟಿಲ್ಲ: ರೇವಣ್ಣ

ನಾವು ಅಧಿಕಾರ್ಕಕಾಗಿ ಯಾರ ಮನೆಯ ಬಾಗಿಲು ತಟ್ಟಿಲ್ಲ, ಕುಮಾರಸ್ವಾಮಿ ನಾಯಕತ್ವದಲ್ಲಿ ಕೈಗೊಂಡ ಅಭಿವೃದ್ದಿಯೇ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆ ವೇಳೆಯಲ್ಲಿ ಕಾಂಗ್ರೆಸ್‌ ಪಕ್ಷದವರೆ ನಮ್ಮ ಮನೆಗೆ ಬಂದು ನೀವೆ ಅಧಿಕಾರ ಮಾಡಬೇಕು ಎಂದಿದ್ದರು. ಆಮೇಲೆ ಏನನಾಯಿತು ಏಕೆ ಸರ್ಕಾರ ಬೀದ್ದಿತು, ಈ ಚುನಾವಣೆ ಯಾಕೆ ನಡೆಯುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಹಾಗಾಗೀ ಈ ಉಪ ಚುನಾವಣೆಯಲ್ಲಿ ದೇವರೇ ಶಿಕ್ಷೆ ಕೊಡುತ್ತಾನೆ, ಜನರೆ ತೀರ್ಪು ನೀಡುತ್ತಾರೆ ಕಾದು ನೋಡಿ ಎಂದರು.

ಬಿಜೆಪಿ ಜೊತೆ ಒಪ್ಪಂದವಿಲ್ಲ:

ನಾವು ಬಿಜೆಪಿ ಜೊತೆ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಹೇಳಿಕೆ ಬರೀ ಸುಳ್ಳು, ನಾವು ಯಾರ ಜೊತೆಯಲ್ಲು ಒಪ್ಪಂದ ಮಾಡಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‌ ಪಕ್ಷದಲ್ಲಿ ಸೇವೆ ಮತ್ತು ಅನುಭವಕ್ಕೆ ಬೆಲೆ ಇಲ್ಲದಂತಾಗಿದೆ. ಸ್ಥಳೀಯರಿಗೆ ನೀಡುತ್ತೇವೆ ಎಂದು ಆ ಸಲವೂ ಹಣ ಇದ್ದವರಿಗೆ ಟಿಕೆಟ್‌ ನೀಡಿದ್ದೀರಿ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರು ಏರು ಧ್ವನಿಯಲ್ಲಿ ಕೂಗಾಡಿದರು. ಅಷ್ಟರಲ್ಲಿ ಸಮಧಾನಪಡಿಸಿದ ರೇವಣ್ಣ, ಪಕ್ಷದ ಕಾರ್ಯಕತರು ಒಗ್ಗಟ್ಟಾಗಿ ದುಡಿಯಿರಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದಿದ್ದಾರೆ.

ಬಡವರ ಮನೆ ನಿರ್ಮಾಣಕ್ಕೆ ರಾಮದಾಸ್‌ ಅಡ್ಡಿ: ಆರೋಪ

ಮಾಜಿ ಸಚಿವ ಸಾ.ರಾ. ಮಹೇಶ್‌, ಶಾಸಕರಾದ ಎಂ. ಅಶ್ವಿನ್‌ಕುಮಾರ್‌, ಕೆ. ಮಹದೇವ್‌, ಜಿಪಂ ಸದಸ್ಯ ಎಂ.ಬಿ. ಸುರೇಂದ್ರ, ಮಾಜಿ ಸದಸ್ಯ ಎಚ್‌.ಎಂ. ಫಜಲುಲ್ಲಾ, ಮುಖಂಡರಾದ ಗಣೇಶ್‌ ಗೌಡ, ವಕೀಲ ಶ್ರೀನಿವಾಸ್‌, ಎಚ್‌.ವೈ. ಮಹದೇವ್‌ ಹಾಜರಿದ್ದರು. ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

click me!