ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೋನಾ/ ಸಿಎಂ ನೇತೃತ್ವದಲ್ಲಿ ಅಧಿಕಾಳಿಗಳು ಸಚಿವರ ಸಭೆ/ ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇಲ್ಲ/ ಸಿನಿಮಾ ಮಂದಿರ ನಿರ್ಭಧದ ಬಗ್ಗೆ ತೀರ್ಮಾನ ಇಲ್ಲ/ ಮಾಸ್ಕ್ ದಂಡ ಕಟ್ಟುನಿಟ್ಟು/ ಜನರು ನಿಯಮಗಳನ್ನು ಪಾಲಿಸಬೇಕು
ಬೆಂಗಳೂರು(ಮಾ. 29) ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಕೊರೋನಾ ಪ್ರಕರಕಣಗಳು ಏರಿಕೆಯಾಗುತ್ತಿರುವ ಕಾರಣ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಿಎಂ ಬಿಎಸ್ ಯಡಿಯೂರಪ್ಪ ಎರಡು ಗಂಟೆ ಕಾಲ ಚರ್ಚೆ ನಡೆಸಿದರು.
ಬೆಂಗಳೂರಿನ ಪರಿಸ್ಥಿತಿ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಮುಂದಿನ 15 ದಿನ ರಾಜ್ಯದಲ್ಲಿ ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
undefined
ಕೋವಿಡ್ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಈಗಾಗಲೇ 150 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ವಹಿಸಲೇಬೇಕು. ಇವತ್ತಿನಿಂದ ಇನ್ನು ಹದಿನೈದು ದಿನ ಯಾವುದೇ ರೀತಿ ಸತ್ಯಾಗ್ರಹ, ಚಳವಳಿಗೆ ಅವಕಾಶ ಇಲ್ಲ. ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಮಾಡಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಬೆಂಗಳೂರು ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲಾಯ್ತು. ಮಾರ್ಚ್ ನಿಂದ ಪಾಸಿಟಿವ್ ಪ್ರಮಾಣ ಹೆಚ್ಚಾಗ್ತಿದೆ. ಶೇಕಡ 90 ಕ್ಕೂ ಹೆಚ್ಚು ಆರ್ ಟಿ ಪಿಸಿ ಆರ್ ಪರೀಕ್ಷೆ ಮಾಡಲಾಗುತ್ತಿದೆ..
ಕೋವಿಡ್ ಕೇರ್ ಸೆಂಟರ್ ಗಳನ್ನ ತೆರಯಲಾಗಿದೆ. ಅಗತ್ಯತಕ್ಕೆ ತಕ್ಕಂತೆ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯ ನೆರವು ಸಹ ಪಡೆಲಾಗುವುದು. ಕೋವಿಡ್ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.
ಫ್ಲಾಟ್ ಗಳಲ್ಲಿ ಪಾರ್ಟಿಗಳಿಗೂ ಬ್ರೇಕ್ ಹಾಕಲಾಗುವುದು. ಇನ್ನು ಮುಂದೆ ಪಾರ್ಟಿ ಮಾಡೋದಕ್ಕೆ ಅವಕಾಶವಿಲ್ಲ. ಯಾವುದೇ ರೀತಿಯ ಲಾಕ್‌ಡೌನ್ ಇಲ್ಲ. ಮಾಸ್ಕ್ ಧರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ .ಅವರ ಸಲಹೆ ಗಳನ್ನ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಶಾಲಾ ಕಾಲೇಜುಗಳನ್ನ ಮುಚ್ಚುವುದಿಲ್ಲ. ಪರೀಕ್ಷೆ ಇಲ್ಲದೆ ಪಾಸ್ ಮಾಡೋದಿಲ್ಲ. ಕಡ್ಡಾಯ ಪಾಸ್ ಮಾಡುವ ಬಗ್ಗೆ ನಿರ್ಧಾರ ಇಲ್ಲ. ಚುನಾವಣಾ ಪ್ರಚಾರದ ಮೆರೆವಣಿಗೆ ಮೇಲೂ ಬಿಗಿ ಕ್ರಮ ಕೈಗೊಳ್ಳುತ್ತೇವೆ. ಮದುವೆಗಳಲ್ಲಿ ಕೋವಿಡ್ ನಿಯಮಗಳನ್ನ ಪಾಲಿಸದಿದ್ದರೆ. ಕಲ್ಯಾಣ ಮಂಟಪವನ್ನೇ ಆರು ತಿಂಗಳು ಕ್ಲೋಸ್ ಮಾಡಲಾಗುತ್ತದೆ. ಕಲ್ಯಾಣ ಮಂಟಪದ ಮಾಲೀಕರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಥಿಯೇಟರ್ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಆದ ರೀತಿಯ ಸ್ಥಿತಿ ನಮಗೆ ಬರಬಾರದು. ಹಾಗಾಗಿ ಕಠಿಣ ಕ್ರಮ ಅನಿವಾರ್ಯ. ನಾಗರಿಕರು ಸಹಕತರಿಸಬೇಕು ಎಂದು ಕೇಳಿಕೊಂಡಿದರು.
ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಸಂಬಂಧಪಟ್ಟ ಸಚಿವರು ಹಾಗೂ ವಲಯ ಉಸ್ತುವಾರಿಗಳೊಂದಿಗೆ ಮುಖ್ಯಮಂತ್ರಿ ರವರು ಗೃಹ ಕಚೇರಿ 'ಕೃಷ್ಣಾ'ದಲ್ಲಿ ಇಂದು ಸಭೆ ನಡೆಸಿದರು. (1/2) pic.twitter.com/HGyMJLEWG9
— CM of Karnataka (@CMofKarnataka)