Bengaluru: ಝಟ್ಕಾ ಕಟ್‌ ಖ್ಯಾತಿಯ ಹಿಂದವಿ ಮಾಂಸದಂಗಡಿಗೆ ಲೈಸನ್ಸೇ ಇಲ್ಲ

By Girish GoudarFirst Published Apr 20, 2022, 6:44 AM IST
Highlights

*  ಲೈಸೆನ್ಸ್‌ ಇಲ್ಲದ ಹಿಂದವೀ ಮಾಂಸದ ಅಂಗಡಿಗಳಿಗೆ ಬಿಬಿಎಂಪಿ ನೋಟಿಸ್‌
*  ಪರಿಶೀಲನೆ ವೇಳೆ ತ್ಯಾಜ್ಯ ವಿಲೇವಾರಿಯಲ್ಲೂ ನಿರ್ಲಕ್ಷ್ಯ
*  ವಾರದೊಳಗೆ ಪರವಾನಗಿ ಪಡೆಯಲು ಪಾಲಿಕೆ ಸೂಚನೆ
 

ಬೆಂಗಳೂರು(ಏ.20):  ಪರವಾನಗಿ ಪಡೆಯದೆ ಮಾಂಸದ(Meat) ವಹಿವಾಟು ನಡೆಸುತ್ತಿರುವ ಹಿಂದವೀ ಮೀಟ್‌ ಮಾರ್ಟ್‌, ಝಟ್ಕಾ(Jhatka) ಕಟ್‌ ಕುರಿ ಮತ್ತು ಕೋಳಿ ಮಾಂಸದ ಅಂಗಡಿಗಳಿಗೆ ವಾರದೊಳಗೆ ಪರವಾನಗಿ ಪಡೆಯುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ನೋಟಿಸ್‌ ಜಾರಿ ಮಾಡಿದೆ.

ಕಳೆದ ಮೂರು ವಾರಗಳಿಂದ ಹಲಾಲ್‌(Halal) ಮತ್ತು ಝಟ್ಕಾ ಕಟ್‌ ಮಾಂಸದ ಕುರಿತು ವಿವಾದ(Controversy) ಭುಗಿಲೆದ್ದ ಬೆನ್ನಲ್ಲೇ ನಗರದ ಹಲವೆಡೆ ಹಿಂದುವೀ ಮೀಟ್‌ ಮಾರ್ಚ್‌, ಜಟ್ಕಾಕಟ್‌ ಅಂಗಡಿಗಳು ಹುಟ್ಟಿಕೊಂಡಿದ್ದವು. ಕುರಿ, ಕೋಳಿ, ಮೀನು ಮಾಂಸದ ಅಂಗಡಿಗಳು ಕೆಎಂಸಿ ಕಾಯ್ದೆ(KMC Act) ಅನ್ವಯ ಬಿಬಿಎಂಪಿಯಿಂದ ಪರವಾನಗಿ ಪಡೆದು ಮಾಂಸ ಮಾರಾಟ ನಡೆಸಬೇಕು. ಜೊತೆಗೆ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು.

Hassan: ಹಲಾಲ್-ಝಟ್ಕಾ ವಿವಾದದ ಮಧ್ಯೆ ಗುಡ್ಡೆ ಮಾಂಸ ಕಟ್ ದರ್ಬಾರ್‌: ಏನಿದು ಹೊಸ ಪದ್ದತಿ?

ಪಾಲಿಕೆಯ ಎಂಟು ವಲಯಗಳಲ್ಲಿ ಹಲವು ಅಂಗಡಿಗಳಲ್ಲಿ ಪರವಾನಗಿ ಪಡೆಯದೇ ಮಾಂಸ ಮಾರಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಪಾಲಿಕೆಯ ಪಶುಸಂಗೋಪನಾ ವಿಭಾಗದ ಅಧಿಕಾರಿಗಳ ಭೇಟಿ ವೇಳೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಯಲಹಂಕ, ರಾಜರಾಜೇಶ್ವರಿ ನಗರ, ಮಹದೇವಪುರ, ಬೊಮ್ಮನಹಳ್ಳಿ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ದಾಸರಹಳ್ಳಿ ವಲಯಗಳಲ್ಲಿ ಕಾನೂನು ಬಾಹಿರವಾಗಿ ಉದ್ಯಮ ನಡೆಸುತ್ತಿರುವವರಿಗೆ ವಲಯದ ಪಶುಪಾಲನಾ ವಿಭಾಗದ ಸಹಾಯಕ ನಿರ್ದೇಶಕರು ನೋಟಿಸ್‌ ಜಾರಿ ಮಾಡಿದ್ದಾರೆ.

ಮಾಂಸ ಮಾರಾಟ ನಡೆಸುವವರು ಪಾಲಿಕೆಯಿಂದ ಪರವಾನಗಿ ಪಡೆಯಬೇಕು. ಈಗಾಗಲೇ ಪರವಾನಗಿ ಅವಧಿ ಮುಗಿದಿರುವವರು ನವೀಕರಿಸಿಕೊಳ್ಳಬೇಕು. ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಪಾಲಿಕೆಯು ದಂಡ ವಿಧಿಸಲಿದೆ. ಹಾಗೆಯೇ ಪರವಾನಗಿ(License) ಪಡೆಯದಿದ್ದರೆ ಮಾಂಸದ ಉದ್ಯಮವನ್ನು ಬಂದ್‌ ಮಾಡಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಪರವಾನಗಿ ಶುಲ್ಕದ ವಿವರ

ಕೋಳಿ, ಕುರಿ ಮತ್ತು ಮೀನಿನ ಮಾಂಸದ ಅಂಗಡಿಗೆ ಪರವಾನಿ ಪಡೆಯಲು ಅರ್ಜಿಯೊಂದಿಗೆ .2,500 ಶುಲ್ಕ ಪಾವತಿಸಬೇಕು. ಪರವಾನಗಿ ನವೀಕರಣಕ್ಕೆ 2 ಸಾವಿರ ಮತ್ತು ಮಾಂಸದ ಶಿಥಲೀಕರಣ ಘಟಕಕ್ಕೆ .10,500, ನವೀಕರಣಕ್ಕೆ .10 ಸಾವಿರ ಪಾವತಿಸಬೇಕು. ಕ್ಲಿನಿಕ್‌ಗೆ ಒಂದು ಸಾವಿರ ಚದರ ಅಡಿ ಇದ್ದರೆ .2,500, ನವೀಕರಣಕ್ಕೆ .2 ಸಾವಿರ ಶುಲ್ಕ ಪಾವತಿ ಮಾಡಬೇಕು. ಒಂದು ವೇಳೆ 1 ಸಾವಿರ ಚದರ ಅಡಿಗಿಂತ ಜಾಸ್ತಿ ಇದ್ದರೆ .10,500 ಪಾವತಿ ಮಾಡಬೇಕು ಎಂದು ಪಾಲಿಕೆಯ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಚಂದ್ರಯ್ಯ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
 

click me!