ರಾಜ್ಯದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರ ಇದೀಗ ರಾಜೀನಾಮೆ ನೀಡಿದ್ದಾರೆ. ನೊಂದು ತಮ್ಮ ವೃತ್ತಿ ಬಿಡುತ್ತಿರುವುದಾಗಿ ಹೇಳಿದ್ದಾರೆ
ಬಳ್ಳಾರಿ (ಅ.25): ಬಳ್ಳಾರಿ ವಲಯ ಐಜಿಪಿ ನಂಜುಂಡಸ್ವಾಮಿ ಅವರ ನಡೆ ವಿರೋಧಿಸಿ ರಾಜೀನಾಮೆ ನೀಡಿರುವ ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶೀಗೌಡ ಅವರನ್ನು ಮನವೊಲಿಸುವ ಕಾರ್ಯ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಎಸ್ಪಿ ಸೈದುಲು ಅದಾವತ್ ಅವರು ಡಿವೈಎಸ್ಪಿ ಅವರನ್ನು ಮನವೊಲಿಸಿದರೂ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯಲು ಹಂಪಿ ಡಿವೈಎಸ್ಪಿ ಅವರು ವಿನಮ್ರವಾಗಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು
ಶನಿವಾರ ಸುದ್ದಿಗಾರರ ಜತೆ ಶನಿವಾರ ಸಂಜೆ ಮಾತನಾಡಿದ ಕಾಶೀಗೌಡ, ರಾಜೀನಾಮೆ ಹಿನ್ನೆಲೆಯಲ್ಲಿ ಎಸ್ಪಿ ಅವರು ನನ್ನನ್ನು ಕರೆಸಿದ್ದರು. ಯಾವುದೇ ಹಿರಿಯ ಅಧಿಕಾರಿಗಳು ಕರೆದರೂ ನಾನು ಹೋಗುತ್ತೇನೆ.
ಅವರ ಸಲಹೆಗಳನ್ನು ಗೌರವವಾಗಿ ಕೇಳುತ್ತೇನೆ. ಅವರು ನೀಡುವ ಸಲಹೆ ನನಗೆ ಸೂಕ್ತ ಎನಿಸಿದರೆ ರಾಜೀನಾಮೆ ಹಿಂಪಡೆಯುತ್ತೇನೆ. ಸಮಂಜಸ ಎನಿಸಿಲ್ಲ ಎಂದಾದರೆ ರಾಜೀನಾಮೆ ಹಿಂಪಡೆಯುವುದಿಲ್ಲ. ಏನೇನಾಗಿದೆ ಎಂಬುದು ಎಸ್ಪಿ ಅವರಿಗೆ ತಿಳಿಸಿರುವೆ ಎಂದು ಹೇಳಿದರು.