'ಬಾಕಿ ಬಿಲ್‌ ಪಾವತಿಸದಿದ್ದರೆ ಉಚಿತ ವಿದ್ಯುತ್‌ ಇಲ್ಲ'

By Kannadaprabha News  |  First Published Jun 9, 2023, 11:00 PM IST

ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಾಕಿ ಇರುವ ವಿದ್ಯುತ್‌ ಬಿಲ್‌ನ್ನು ಕಡ್ಡಾಯವಾಗಿ ವಸೂಲು ಮಾಡಬೇಕು. ನಮ್ಮ ಇಲಾಖೆಗೆ ಇದು ಅನಿವಾರ್ಯ ಗ್ರಾಹಕರು ತಮ್ಮ ಮನೆಯ ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಸಿಬ್ಬಂದಿ ಅವರ ಮನವೊಲಿಸಿ ಹಣ ಪಾವತಿಸಿಕೊಳ್ಳಬೇಕು. 


ಅಫಜಲ್ಪುರ(ಜೂ.09):  ಗ್ರಾಹಕರು ಹಿಂದಿನ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡರೆ 200 ಯುನಿಟ್‌ ಉಚಿತ ವಿದ್ಯುತ್‌ ಪೂರೈಕೆ ಇಲ್ಲ ಎಂದು ಸರ್ಕಾರ ಹೇಳಿದೆ ಜೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಸಂತೋಷ ಚವ್ಹಾಣ ಅವರು ಜೆಸ್ಕಾಂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಅವರು ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಉಪ ವಿಭಾಗದ ಜೆಸ್ಕಾಂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬಾಕಿ ಇರುವ ವಿದ್ಯುತ್‌ ಬಿಲ್‌ನ್ನು ಕಡ್ಡಾಯವಾಗಿ ವಸೂಲು ಮಾಡಬೇಕು. ನಮ್ಮ ಇಲಾಖೆಗೆ ಇದು ಅನಿವಾರ್ಯ ಗ್ರಾಹಕರು ತಮ್ಮ ಮನೆಯ ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಸಿಬ್ಬಂದಿ ಅವರ ಮನವೊಲಿಸಿ ಹಣ ಪಾವತಿಸಿಕೊಳ್ಳಬೇಕು. ಒಂದು ವೇಳೆ ಗ್ರಾಹಕರು ತಾವು ಬಾಕಿ ಉಳಿಸಿಕೊಂಡ ಮೊತ್ತವನ್ನು ಕಟ್ಟದೇ ಹೋದಲ್ಲಿ ನಮ್ಮ ಗಮನಕ್ಕೆ ತರಬೇಕು. ಕಾನೂನು ಪ್ರಕಾರ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಸರ್ಕಾರ. 200 ಯುನಿಟ್‌ ಉಚಿತ ವಿದ್ಯುತ್‌ ಘೋಷಣೆ ಮಾಡಿದೆ. ಅದು ಜುಲೈ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಈಗಾಗಲೇ ಸರ್ಕಾರ ಘೋಷಿಸಿದೆ. ಆದಷ್ಟುಬೇಗನೆ ಎಲ್ಲ ಗ್ರಾಹಕರ ಮನೆ ಅಂಗಡಿ ಗಿರಣಿ ಸೇರಿದಂತೆ ವಿದ್ಯುತ್‌ ಸ್ಥಾವರದ ಮೀಟರ್‌ ಗಳಿಗೆ ಶೀಲ್‌ ಮುದ್ರೆಗಳನ್ನು ಹಾಕಬೇಕು. ಕೆಲವೊಂದು ಸಿಬ್ಬಂದಿ ವಿರುದ್ಧ ದೂರು ಬಂದಿವೆ. ಅಂತಹವರು ಬಹಳ ಎಚ್ಚರಿಕೆಯಿಂದ ಇರಬೇಕು. ಪದೇಪದೇ ದೂರುಗಳು ಬಂದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

undefined

ಕಲಬುರಗಿ: 940 ಕೋಟಿ ಖರ್ಚಾದರೂ ಸಿಗುತ್ತಿಲ್ಲ ನೀರು

ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ ನಾಗರಾಜ ಶಾಖಾಧಿಕಾರಿ ಮಹಾಂತೇಶ ಪಾಟೀಲ ಸೈಯದ್‌ ಇಸಾ ಸೇರಿದಂತೆ ಇತರರಿದ್ದರು.
 

click me!