ಹೊಸ ವರ್ಷಾಚರಣೆ ಮಾಡಿ ಮೆಟ್ರೋದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಮೆಟ್ರೋದಲ್ಲಿ ಕುಡಿದವರಿಗೆ ಪ್ರವೇಶ ನೀಡುತ್ತಿಲ್ಲ.
ಬೆಂಗಳೂರು [ಡಿ.26]: ಹೊಸ ವರ್ಷಾಚರಣೆ ವೇಳೆ ಮೋಜಿಗಾಗಿ ಮದ್ಯಪಾನ ಮಾಡಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ.
ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಇತರೆ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಮದ್ಯಪಾನ ಮಾಡುವ ಪ್ರಯಾಣಿಕರಿಗೆ ಅವಕಾಶ ಇಲ್ಲ ಎಂದು ಬಿಎಂಆರ್‌ಸಿಎಲ್ ನಿಯಮಗಳಲ್ಲಿ ತಿಳಿಸಲಾಗಿದೆ. ಈ ನಿಯಮವನ್ನು ಡಿಸೆಂಬರ್ 31ರ ರಾತ್ರಿಯಿಂದ ಕಟ್ಟು ನಿಟ್ಟಾಗಿ ಜಾರಿಗೆ ಮುಂದಾಗಿದೆ.
undefined
ಮೆಟ್ರೋದಲ್ಲಿ ಪೇಟಿಎಂ ಪಾವತಿಗೆ ಅಡಚಣೆ..
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಉದ್ಯಾನವನ, ಜಯನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯ.
ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮದ್ಯಪಾನ ಮಾಡಿ ಮೆಟ್ರೋ ರೈಲಿಗೆ ಬಂದರೆ ಅವಕಾಶ ನೀಡುವುದಿಲ್ಲ. ಮದ್ಯಪಾನ ಮಾಡಿ ಸಹ ಪ್ರಯಾಣಿಕರಿಗೆ ತೊಂದರೆ ಮಾಡಿದರೆ ಅಂತಹ ಪ್ರಯಾಣಿಕರನ್ನು ಹೊರಕ್ಕೆ ಕಳುಹಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.