ಕೋವಿಡ್ : ಬೆಂಗಳೂರಿಂದ ಬರುವವರಿಗೆ ಇಲ್ಲ ಗ್ರಾಮಕ್ಕೆ ಎಂಟ್ರಿ

By Kannadaprabha News  |  First Published Apr 28, 2021, 8:02 AM IST

ಬೆಂಗಳೂರಿನಿಂದ ಆಗಮಿಸುವ ವಲಸಿಗರು ನೇರವಾಗಿ ಊರು ಪ್ರವೇಶಿಸುವುದರಿಂದ ಕೋವಿಡ್‌ ಹರಡಬಹುದು ಎನ್ನುವ ಆತಂಕ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಅವರಿಗೆ ಪ್ರವೇಶ ಅವಕಾಶ ನೀಡುತ್ತಿಲ್ಲ. 


ಚಿತ್ರದುರ್ಗ (ಏ.28): ಜನತಾ ಕರ್ಫ್ಯೂ ಜಾರಿಯಿಂದಾಗಿ ಬೆಂಗಳೂರಿನಿಂದ ಆಗಮಿಸುವ ವಲಸಿಗರು ನೇರವಾಗಿ ಊರು ಪ್ರವೇಶಿಸುವುದರಿಂದ ಕೋವಿಡ್‌ ಹರಡಬಹುದು ಎನ್ನುವ ಆತಂಕ ಹಿನ್ನೆಲೆಯಲ್ಲಿ ತಾಲೂಕಿನ ಹಂಪಯ್ಯನಮಾಳಿಗೆಯಲ್ಲಿ ರಸ್ತೆಗೆ ಜಾಲಿ ಮುಳ್ಳು ಹರವಿದ ಘಟನೆ ನಡೆದಿದೆ.

ಗ್ರಾಮದ 23ಕ್ಕೂ ಹೆಚ್ಚು ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದಾರೆ. ಇದೀಗ ಎಲ್ಲರೂ ವಾಪಸ್‌ ಬರುತ್ತಿದ್ದು, ಯಾವಾಗ ಊರು ಪ್ರವೇಶಿಸುತ್ತಾರೋ ಗೊತ್ತಾಗುತ್ತಿಲ್ಲ. ಅವರು ಸೋಂಕು ಅಂಟಿಸಿಕೊಂಡು ಊರು ಪ್ರವೇಶಿಸುವ ಬದಲು ಪರೀಕ್ಷೆ ಮಾಡಿಸಿಕೊಂಡು ಬರಲಿ ಎಂಬ ಉದ್ದೇಶ ನಮ್ಮದು. ಹಾಗಾಗಿ, ಜಾಲಿ ಮುಳ್ಳನ್ನು ರಸ್ತೆಗೆ ಹರಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

Latest Videos

undefined

ಜನತಾ ಕರ್ಫ್ಯೂ, 4 ಲಕ್ಷಕ್ಕೂ ಅಧಿಕ ಮಂದಿ ಗ್ರಾಮಗಳಿಗೆ ದೌಡು: ಹಳ್ಳಿಗೂ ಸೋಂಕು ವಲಸೆ? .

ಚಿತ್ರದುರ್ಗದಿಂದ ಹದಿನೈದು ಕಿ.ಮೀ ದೂರದಲ್ಲಿ ಹಂಪಯ್ಯನ ಮಾಳಿಗೆ ಗ್ರಾಮವಿದ್ದು, ಹೂ ಹಾಗೂ ಈರುಳ್ಳಿ ಹೆಚ್ಚಾಗಿ ಬೆಳೆಯುತ್ತಾರೆ. ಈವರೆಗೂ ಗ್ರಾಮದಲ್ಲಿ ಕೋವಿಡ್‌ ಸೋಂಕು ಪಸರಿಸಿಲ್ಲ. ಬೆಂಗಳೂರಿನಲ್ಲಿ ಅತಿಯಾದ ಸೋಂಕು ಇದ್ದು ಆದೇನಾದರೂ ಹಳ್ಳಿಗೆ ಬಂದರೆ ಇಡೀ ಹಳ್ಳಿ ವಾತಾವರಣ ಹಾಳಾಗಿ ಹೋಗುತ್ತದೆ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಬೆಂಗಳೂರಿನಿಂದ ಯಾರೇ ಬಂದರೂ ಕೋವಿಡ್‌ ತಪಾಸಣೆ ಕಡ್ಡಾಯ ಎಂದು ಅವರು ಹೇಳುತ್ತಾರೆ.

click me!