ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನತಾ ಕರ್ಫ್ಯೂಗಿಂತ ಮೊದಲೇ ಗ್ರಾಮದಲ್ಲಿ ಕರ್ಫ್ಯೂ ಹೇರಲಾಗಿದ್ದು, ಗ್ರಾಮಸ್ಥರೇ ರಸ್ತೆಗಳನ್ನು ಬಂದ್ ಮಾಡಿ ಜನರ ಆರೋಗ್ಯ ಕಾಪಾಡಲು ಮುಂದಡಿ ಇಟ್ಟಿದ್ದಾರೆ.
ಕೊಪ್ಪಳ (ಏ.28): ಕೊರೋನಾ ಆರ್ಭಟಕ್ಕೆ ತಾಲೂಕಿನ ಕಿನ್ನಾಳ ಗ್ರಾಮ ಸ್ತಬ್ಧವಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನತಾ ಕರ್ಫ್ಯೂಗಿಂತ ಮೊದಲೇ ಗ್ರಾಮದಲ್ಲಿ ಕರ್ಫ್ಯೂ ಹೇರಲಾಗಿದ್ದು, ಗ್ರಾಮಸ್ಥರೇ ರಸ್ತೆಗಳನ್ನು ಬಂದ್ ಮಾಡಿ ಜನರ ಆರೋಗ್ಯ ಕಾಪಾಡಲು ಮುಂದಡಿ ಇಟ್ಟಿದ್ದಾರೆ.
ಸುಮಾರು 12 ಸಾವಿರ ಜನಸಂಖ್ಯೆಯ ಈ ಗಾಮದ 3ನೇ ವಾರ್ಡಿನಲ್ಲಿ ಕೊರೋನಾ ಸ್ಫೋಟಗೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸುಮಾರು 750 ಮಂದಿಯನ್ನು ಈವರೆಗೂ ಟೆಸ್ಟ್ ಮಾಡಿದ್ದು, 94 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಆದರೆ, ವಾಸ್ತವದಲ್ಲಿ ಇದರ ಸಂಖ್ಯೆ ಇನ್ನೂ ಅಧಿಕ. ಅನಾರೋಗ್ಯಕ್ಕೆ ತುತ್ತಾದವರೆಲ್ಲರೂ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುತ್ತಲೂ ಇಲ್ಲ. ಆದರೂ ಆರೋಗ್ಯ ಇಲಾಖೆಯೇ ಮುಂದೆ ನಿಂತು ಟೆಸ್ಟ್ ಮಾಡಿಸುತ್ತಿದೆ.
ಜನತಾ ಕರ್ಫ್ಯೂ, 4 ಲಕ್ಷಕ್ಕೂ ಅಧಿಕ ಮಂದಿ ಗ್ರಾಮಗಳಿಗೆ ದೌಡು: ಹಳ್ಳಿಗೂ ಸೋಂಕು ವಲಸೆ? ...
ಹುಬ್ಬಳ್ಳಿಗೆ ಹೋಗಿ ಬಂದಿದ್ದ ಗ್ರಾಮದ ಮಟನ್ ಅಂಗಡಿಯ ಅಜ್ಜಿಯೊಬ್ಬರಿಗೆ ಮೊದಲು ಸೋಂಕು ತಗುಲಿದೆ. ಈ ಕುರಿತು ಯಾವುದೇ ಮಾಹಿತಿ ಇಲ್ಲದ ಅಜ್ಜಿ ಮಾಂಸ ಮಾರಾಟ ಮಾಡಿದ್ದಾರೆ. ಆಕೆಯ ಕುಟುಂಬ ಸದಸ್ಯರನ್ನು ಪರೀಕ್ಷಿಸಿದಾಗ ಅವರಿಗೂ ಸೋಂಕು ದೃಢಪಟ್ಟಿದ್ದು, ಮಾಂಸ ಖರೀದಿಸಿದವರಿಗೂ ಪಾಸಿಟಿವ್ ಆಗಿ ಕೊರೋನಾ ಹರಡಲಾರಂಭಿಸಿದೆ. ಗ್ರಾಮದಲ್ಲಿ ಕೊರೋನಾ ಸ್ಫೋಟ ಆಗುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರು ಗ್ರಾಮಕ್ಕೆ ಭೇಟಿ ನೀಡಿ, ಏ.30ರವರೆಗೂ ಕಫä್ರ್ಯ ಜಾರಿ ಮಾಡಿದ್ದಾರೆ.