ಇಂದಿನಿಂದ 2 ದಿನ ಬೆಂಗ್ಳೂರಲ್ಲಿ ಕರೆಂಟ್‌ ಇರಲ್ಲ: ಬಿಸಿಲಿನ ತಾಪಕ್ಕೆ ಸಿಲಿಕಾನ್‌ ಸಿಟಿ ಜನ ಹೈರಾಣಾಗೋದು ಪಕ್ಕಾ..!

Published : May 26, 2022, 12:21 PM IST
ಇಂದಿನಿಂದ 2 ದಿನ ಬೆಂಗ್ಳೂರಲ್ಲಿ ಕರೆಂಟ್‌ ಇರಲ್ಲ: ಬಿಸಿಲಿನ ತಾಪಕ್ಕೆ ಸಿಲಿಕಾನ್‌ ಸಿಟಿ ಜನ ಹೈರಾಣಾಗೋದು ಪಕ್ಕಾ..!

ಸಾರಾಂಶ

*  ಬೆಂಗಳೂರಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಶುರು *  ಸಿಲಿಕಾನ್ ಸಿಟಿಯಲ್ಲಿ ಇಂದು, ನಾಳೆ ವಿದ್ಯುತ್ ಸ್ಥಗಿತ *  ಎಲ್ಲೆಲ್ಲಿ ವಿದ್ಯುತ್ ಸ್ಥಗಿತವಾಗಲಿದೆ?  

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು 

ಬೆಂಗಳೂರು(ಮೇ.26):  ವರುಣನ ಅಬ್ಬರ ಕಡಿಮೆಯಾಗ್ತಿದ್ದಂತೆ, ಬಿಸಿಲಿನ ಬೇಗೆ ಕಾವೇರಿದೆ. ಇದರ ಮಧ್ಯೆ ವಿದ್ಯುತ್ ಕಡಿತ ಮಾಡೋ ಮೂಲಕ ಬೆಸ್ಕಾಂ ಸಿಲಿಕಾನ್ ಸಿಟಿ ಮಂದಿಗೆ ಶಾಕ್ ನೀಡ್ತಿದೆ. ಈಗಾಗಲೇ ಮಳೆಯ ಅವಾಂತರಕ್ಕೆ ಸಿಲುಕಿ ರೋಸಿ ಹೋಗಿದ್ದ ಜನರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಮತ್ತೆ ಕರೆಂಟ್ ಶಾಕ್ ನೀಡಿದೆ. ಭಾರೀ ಮಳೆಗೆ ಕರೆಂಟ್ ಇಲ್ಲದೆ ಪರದಾಡಿದ್ದಾಯ್ತು, ಈಗ ಪವರ್ ಕಟ್ ಸರದಿ. ಇಂದಿನಿಂದ ನಿರಂತರವಾಗಿ ವಿದ್ಯುತ್ ಕಣ್ಣಮುಚ್ಚಾಲೆ ಆಟ ಶುರುವಾಗಿದೆ. ಕಾರಣ ಮಳೆಯ ಆರ್ಭಟಕ್ಕೆ ಮರಗಳು ಧರೆಗುರುಳಿ ಕರೆಂಟ್ ಕಂಬಗಳಿಗೆ ಸಮಸ್ಯೆಯಾಗಿದೆ.

ಮೂರ್ನಾಲ್ಕು ದಿನ ಎಡೆಬಿಡದೆ ಸುರಿದ ಮಳೆಗೆ 500ಕ್ಕೂ ಹೆಚ್ಚು ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬೊಮ್ಮನಹಳ್ಳಿ, ಜಯನಗರ, ಹೆಚ್ ಎಸ್ ಆರ್ ಲೇಔಟ್ ಬೊಮ್ಮನಹಳ್ಳಿ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಹೆಚ್ಚು ಧರೆಗುರುಳಿದ್ವು. ಅಲ್ಲದೆ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳಿಗೂ ಹಾನಿಯಾಗಿದೆ. ಇವೆಲ್ಲವುಗಳ ದುರಸ್ಥಿ ಕಾರ್ಯವನ್ನು ಬೆಸ್ಕಾಂ ಕೈಗೆತ್ತಿಕೊಂಡಿದೆ. ಹೀಗಾಗಿ ಬೆಸ್ಕಾಂ ನಗರದ ಹಲವೆಡೆ ಎರಡು ದಿನ ವಿದ್ಯುತ್ ಕಡಿತಗೊಳಿಸಿ ದುರಸ್ಥಿ ಕಾರ್ಯ ಶುರುಮಾಡಿದೆ. ಹೀಗಾಗಿ ಜನ ಕರೆಂಟ್ ಶಾಕ್ ಗೊಳಗಾಗೋದು ಖಂಡಿತ.

BESCOM: ಬೆಂಗ್ಳೂರಿನ ವಿವಿಧೆಡೆ ಮುಂದಿನ ನಾಲ್ಕು ದಿನ ಕರೆಂಟ್‌ ಇರಲ್ಲ..!

ಎಲ್ಲೆಲ್ಲಿ ವಿದ್ಯುತ್ ಸ್ಥಗಿತವಾಗಲಿದೆ?

ಇಂದು(ಮೇ26) ಹಾಗೂ ನಾಳೆ(ಮೇ27) ರಂದು ನಗರದ ಹಲವೆಡೆ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ಉತ್ತರ ವಲಯ ಹಾಗೂ ಪೂರ್ವ ಪಶ್ಚಿಮ ವಲಯಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಇಂದು ಉತ್ತರ ವಲಯದ ವಿಶ್ವೇಶ್ವರಯ್ಯ ಪಾರ್ಕ್ ರಥನ ಆಪ್ ಪ್ರದೇಶದಲ್ಲಿ ಸಂಜೆ 7 ಗಂಟೆವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. 
ನಾಳೆ ಆರ್ ಟಿ ನಗರ, ಗಂಗಾನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ದುರಸ್ತಿ ಕಾರ್ಯ ನಡೆಯಲಿದ್ದು ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ವಿದ್ಯುತ್ ಇರುವುದಿಲ್ಲ. 
ಮೇ29 ರಂದು ರಾಮನಗರ ಜಿಗಣಿ, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ರಿಂದ ಸಂಜೆ 3 ಗಂಟೆವರೆಗೂ ಕರೆಂಟ್ ಕಟ್ ಆಗಲಿದೆ.
ಮೇ30 ರಂದು ಹೆಬ್ಬಾಳ, ಸಂಜಯನಗರ, ಭೂಪಸಂದ್ರ ಸುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ಸಂಜೆ 5 ರವರೆಗೂ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ.
 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ