ಮೈಸೂರು ಜಿಲ್ಲೆಯ 343 ಗ್ರಾಮಗಳಲ್ಲಿ ಸೋಂಕೆ ಇಲ್ಲ!

By Kannadaprabha News  |  First Published May 28, 2021, 12:29 PM IST
  • ಮೈಸೂರಿನಲ್ಲಿ ಅತಿ ಹೆಚ್ಚೆ ಇರುವ ಕೊರೋನಾ ಪ್ರಕರಣಗಳು
  • 343 ಗ್ರಾಮಗಳನ್ನು ಮುಟ್ಟದ ಕೊರೋನಾ ಮಹಾಮಾರು
  • ಎಚ್‌.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಮವು 2019 ರಿಂದ ಈವರೆಗೂ ಕೊರೋನಾ ಸೋಂಕೇ ಕಾಣಿಸದ ಏಕೈಕ ಗ್ರಾಮ

ಮೈಸೂರು (ಮೇ.28): ಜಿಲ್ಲೆಯಲ್ಲಿ ಹೆಚ್ಚಾಗಿ ಕೊರೋನಾ ಸೋಂಕು ಹರಡುತ್ತಿದ್ದರೂ ಜಿಲ್ಲೆಯ 1,560 ಗ್ರಾಮಗಳ ಪೈಕಿ 343 ಗ್ರಾಮಗಳಲ್ಲಿ ಮಾತ್ರ ಈವರೆಗೆ ಒಂದೇ ಒಂದು ಸೋಂಕಿತರ ಪ್ರಕರಣ ಪತ್ತೆಯಾಗಿಲ್ಲ.

ಎಚ್‌.ಡಿ. ಕೋಟೆ ತಾಲೂಕಿನ 212 ಗ್ರಾಮಗಳ ಪೈಕಿ 119 ಗ್ರಾಮಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕೊರೋನಾ ಮುಕ್ತವಾದ ಗ್ರಾಮಗಳನ್ನು ತಾಲೂಕು ಹೊಂದಿದೆ. ಹುಣಸೂರು ತಾಲೂಕಿನ 275 ಗ್ರಾಮಗಳ ಪೈಕಿ, 64 ಗ್ರಾಮ ಕೊರೋನಾ ಮುಕ್ತವಾಗಿದೆ.

Latest Videos

undefined

ಮೈಸೂರಿನ 35 ಗ್ರಾಮಗಳನ್ನು ಮುಟ್ಟದ ಕೊರೋನಾ : ಮುನ್ನೆಚ್ಚರಿಕೆಯೇ ಕಾರಣ

ಮೈಸೂರು ತಾಲೂಕಿನ 17 ಗ್ರಾಮ, ಪಿರಿಯಾಪಟ್ಟಣ ತಾಲೂಕಿನ 35 ಗ್ರಾಮ, ನಂಜನಗೂಡು ತಾಲೂಕಿನ 44 ಗ್ರಾಮ, ಟಿ. ನರಸೀಪುರ ತಾಲೂಕಿನ 7, ಕೆ.ಆರ್‌. ನಗರ ತಾಲೂಕಿನ 22 ಗ್ರಾಮ ಮತ್ತು ಸರಗೂರು ತಾಲೂಕಿನ 35 ಗ್ರಾಮ ಸೇರಿ ಒಟ್ಟು 343 ಗ್ರಾಮಗಳು ಕೊರೋನಾ ಮುಕ್ತವಾಗಿದೆ.

ಈ ಪೈಕಿ ಎಚ್‌.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಮವು 2019 ರಿಂದ ಈವರೆಗೂ ಕೊರೋನಾ ಸೋಂಕೇ ಕಾಣಿಸದ ಏಕೈಕ ಗ್ರಾಮವಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!