ಬೆಂಗಳೂರಲ್ಲಿ ಕುಡಿಯೋ ನೀರಿನ ಮೇಲೆ ಕಲಾರಾ ಎಫೆಕ್ಟ್..?

By Kannadaprabha NewsFirst Published Mar 10, 2020, 10:18 AM IST
Highlights

ನಗರದಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಕಾವೇರಿ ಕುಡಿಯುವ ನೀರಿನ ಸ್ವಚ್ಛತೆ ಕಾಪಾಡುವಂತೆ ಜಲಮಂಡಳಿಗೆ ಪತ್ರ ಬರೆದಿದೆ. ಆದರೆ ಬಿಬಿಎಂಪಿ ಈ ಪತ್ರದಲ್ಲಿ ಖಚಿತವಾಗಿ ಕಾಲರ ಬಗ್ಗೆ ಉಲ್ಲೇಖಿಸಿಲ್ಲ.

ಬೆಂಗಳೂರು(ಮಾ.10): ಕಾಲರಾ ರೋಗಕ್ಕೆ ಸಂಬಂಧಿಸಿದಂತೆ ಕಾವೇರಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದು ಬೆಂಗಳೂರು ಜಲಮಂಡಳಿ ಸ್ಪಷ್ಟಪಡಿಸಿದೆ.

ನಗರದಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಕಾವೇರಿ ಕುಡಿಯುವ ನೀರಿನ ಸ್ವಚ್ಛತೆ ಕಾಪಾಡುವಂತೆ ಜಲಮಂಡಳಿಗೆ ಪತ್ರ ಬರೆದಿದೆ. ಆದರೆ ಬಿಬಿಎಂಪಿ ಈ ಪತ್ರದಲ್ಲಿ ಖಚಿತವಾಗಿ ಕಾಲರ ಬಗ್ಗೆ ಉಲ್ಲೇಖಿಸಿಲ್ಲ. ಆದರೂ ಜಲಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಭೇಟಿಯಾಗಿ ವಿಚಾರಿಸಿದಾಗ ಹೊರಗೆ ಹೋಟೆಲ್‌, ಸಮಾರಂಭಗಳಲ್ಲಿ ಆಹಾರ ಮತ್ತು ಪಾನೀಯಗಳನ್ನು ಸೇವಿಸಿರುತ್ತೇವೆಂದು ಹೇಳಿದ್ದಾರೆ.

ಉಪನ್ಯಾಸಕ ದಂಪತಿಯಿಂದ 1.28 ಕೋಟಿ ವಂಚನೆ!

ಅಲ್ಲದೆ, ಈ ಸಮಸ್ಯೆಕಾಣಿಸಿಕೊಂಡ ಸ್ಥಳಗಳಲ್ಲಿ ಮಂಡಳಿಯು 29 ಕಡೆಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಅದರಲ್ಲಿನ ಕ್ಲೋರಿನ್‌ ಪ್ರಮಾಣವನ್ನು ಪರಿಶೀಲಿಸಿದೆ. ಈ ಎಲ್ಲ ಕಡೆಗಳಲ್ಲಿ ಕ್ಲೋರಿನ್‌ ಪ್ರಮಾಣ ನಿಗದಿತ ಮಾನದಂಡಕ್ಕೆ ಸರಿಯಾಗಿದೆ. ಹೀಗಾಗಿ ಮಂಡಳಿಯಿಂದ ಪೂರೈಕೆಯಾಗುತ್ತಿರುವ ನೀರಿನಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಜಲಮಂಡಳಿ ಸಮರ್ಥಿಸಿಕೊಂಡಿದೆ.

ದೇಶದಲ್ಲೆಲ್ಲೂ ಕೈಗೊಳ್ಳದಷ್ಟು ಕಟ್ಟೆಚ್ಚರ ರಾಜ್ಯದಲ್ಲಿ!

ಮಂಡಳಿಯು ನೀರು ಪೂರೈಸುವ ಪ್ರದೇಶಗಳಲ್ಲಿ ದಿನಕ್ಕೆ 80 ರಿಂದ 100 ನೀರಿನ ಮಾದರಿಗಳನ್ನು ಪರೀಕ್ಷಿಸಿ ಫಲಿತಾಂಶವನ್ನು ಮಾರನೇ ದಿನ ವೆಬ್‌ ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ಒಂದು ವೇಳೆ ಕಲುಷಿತ ನೀರು ಪೂರೈಕೆಯಾದರೆ ಇಡೀ ಪ್ರದೇಶದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದೀಗ ನಗರದ ಅಲ್ಲಲ್ಲಿ ಕಾಲರಾ ಕಂಡು ಬಂದಿರುವುದರಿಂದ ಕಾವೇರಿ ನೀರು ಸರಬರಾಜಿನಲ್ಲಿ ಯಾವುದೇ ಲೋಪವಾಗಿಲ್ಲ. ಸಾರ್ವಜನಿಕರು ಮನೆಗಳ ನೀರಿನ ಶೇಖರಣಾ ತೊಟ್ಟಿಮತ್ತು ಮೇಲ್ಮಟ್ಟದ ತೊಟ್ಟಿಗಳಲ್ಲಿ ತುಂಬಿಸಿ ಉಪಯೋಗಿಸುತ್ತಿದ್ದಾರೆ. ಹೀಗಾಗಿ ಕಾಲಕಾಲಕ್ಕೆ ತೊಟ್ಟಿಗಳನ್ನು ಸ್ವಚ್ಛಗೊಳಿಸುವಂತೆ ಜಲಮಂಡಳಿ ಕೋರಿದೆ.

click me!