ರಾಜಕಾರಣ ತ್ಯಾಗದ ಸವಾಲು ಹಾಕಿದ ನಾರಾಯಣ ಗೌಡ

Kannadaprabha News   | Asianet News
Published : Mar 07, 2021, 12:23 PM ISTUpdated : Mar 07, 2021, 03:46 PM IST
ರಾಜಕಾರಣ ತ್ಯಾಗದ ಸವಾಲು ಹಾಕಿದ ನಾರಾಯಣ ಗೌಡ

ಸಾರಾಂಶ

ಸಚಿವ ನಾರಾಯಣ ಗೌಡ ರಾಜಕಾರಣವನ್ನೇ ತ್ಯಾಗ ಮಾಡುವ ಮಾತನಾಡಿದ್ದಾರೆ. ಅಲ್ಲದೇ ಗಂಭೀರ ಸವಾಲನ್ನು ಹಾಕಿದ್ದಾರೆ. 

 ಮಂಡ್ಯ(ಮಾ.07): ನನ್ನನ್ನು ಬಾಂಬೆ ಕಳ್ಳ, ಬಾಂಬೆ ಕಳ್ಳ ಎಂದು ಕರೆಯುತ್ತಾರೆ. ಬಾಂಬೆ ಕಳ್ಳ ಎಂದರೆ ಏನರ್ಥ. ಇದನ್ನು ನೀವು ಎಂದಾದರೂ ಯಾರನ್ನಾದರೂ ಪ್ರಶ್ನೆ ಮಾಡಿದ್ದೀರಾ ಎಂದು ಸಚಿವ ನಾರಾಯಣ ಗೌಡ ಪ್ರಶ್ನೆ ಮಾಡಿದರು. 

"

ಮಂಡ್ಯದಲ್ಲಿ ಮಾತನಾಡಿದ ಸಚಿವ ನಾರಾಯಣ ಗೌಡ ಬಾಂಬೆಗೆ ವಿಮಾನದಲ್ಲೋ, ಕಾರಿನಲ್ಲೋ, ಬಸ್ಸಿನಲ್ಲೋ ನಾನೇ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. 32 ವರ್ಷದಲ್ಲಿ ಒಂದೇ ಒಂದು ಪೊಲೀಸ್‌ ಕೇಸ್‌ ದಾಖಲಾಗಿದ್ದರೆ ಅಥವಾ ಕಳ್ಳತನ, ಮೋಸ-ವಂಚನೆ, ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಸಿಲುಕಿರುವುದನ್ನು ಖುದ್ದು ಪರಿಶೀಲಿಸಿ. ಅದೇನಾದರೂ ಸಾಬೀತಾದರೆ ಅಂದೇ ರಾಜಕಾರಣ ತ್ಯಾಗ ಮಾಡುತ್ತೇನೆ ಎಂದು ಸವಾಲು ಹಾಕಿದರು.

ನನ್ನ ಮಕ್ಕಳು, ಮೊಮ್ಮಕ್ಕಳು BJPಯಲ್ಲೇ ಇರ್ಬೇಕೆಂದು ವಿಲ್ ಬರೆದಿಡ್ತೇನೆಂದ ಕರ್ನಾಟಕದ ಸಚಿವ ..

ಸುಮ್ಮನೇ ಬಾಂಬೆ ಕಳ್ಳ ಎಂದು ಪ್ರಚಾರ ಮಾಡುವುದು. ಇದು ವೈಯಕ್ತಿಕ ತೇಜೋವಧೆಯಲ್ಲವೇ. ಜನಪ್ರತಿನಿಧಿಯೊಬ್ಬರ ಗೌರವವನ್ನು ದಾಖಲೆಗಳಿಲ್ಲದೆ ಕರೆಯುವುದು ಸರಿಯೇ ಎಂದು ಪ್ರಶ್ನಿಸಿದರು.

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ