ಮಂಗಳೂರು ಕಂಬಳದಲ್ಲಿ ನಿಶಾಂತ್‌ ಕೂಟ ದಾಖಲೆ

By Kannadaprabha News  |  First Published Mar 8, 2021, 8:46 AM IST

 ಮಂಗಳೂರು ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಶನಿವಾರ ಆರಂಭವಾದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಾರ್ಕಳ ಬಜಗೋಳಿ ಮಾಳ ನಿವಾಸಿ ನಿಶಾಂತ್‌ ಶೆಟ್ಟಿಅವರು ಹೊಸ ದಾಖಲೆ ಸ್ಥಾಪಿಸಿದ್ದಾರೆ.


ಮಂಗಳೂರು (ಮಾ.08):  ಮಂಗಳೂರು ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಶನಿವಾರ ಆರಂಭವಾದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ಕಂಬಳದ ಉಸೇನ್‌ ಬೋಲ್ಟ್‌ ಖ್ಯಾತಿಯ ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಇಲ್ಲಿಯೂ ಮೀರಲಾಗಿದೆ. 

ಭಾನುವಾರ ಕಾರ್ಕಳ ಬಜಗೋಳಿ ಮಾಳ ನಿವಾಸಿ ನಿಶಾಂತ್‌ ಶೆಟ್ಟಿಅವರು ಹೊಸ ದಾಖಲೆ ಸ್ಥಾಪಿಸಿದ್ದಾರೆ. ಈ ಕಂಬಳದಲ್ಲಿ ನಿಶಾಂತ್‌ ಶೆಟ್ಟಿಅವರದ್ದು ಚೊಚ್ಚಲ ದಾಖಲೆಯಾದರೆ, ಈ ವರ್ಷದ ಇದುವರೆಗಿನ ಕಂಬಳದಲ್ಲಿ ಎರಡನೇ ಅಗ್ರ ದಾಖಲೆ. ಮೊದಲ ಅಗ್ರ ದಾಖಲೆ ಬೈಂದೂರಿನ ವಿಶ್ವನಾಥ್‌ ದೇವಾಡಿಗ ಸ್ಥಾಪಿಸಿದ್ದರು.

Tap to resize

Latest Videos

ಕಂಬಳದ ದಾಖಲೆ ವೀರ ವಿಶ್ವನಾಥ್ ಹೊಟ್ಟೆ ಪಾಡಿಗೆ ಮಾಡೋದು ಕೂಲಿ ...

ನಿಶಾಂತ್‌ ಶೆಟ್ಟಿ125 ಮೀ.ಗುರಿಯನ್ನು 11.49 ಸೆಕೆಂಡ್‌ನಲ್ಲಿ ತಲುಪಿದ್ದಾರೆ. ಅದನ್ನು 100 ಮೀಟರ್‌ ಓಟಕ್ಕೆ ಪರಿವರ್ತಿಸಿದಾಗ 9.19 ಸೆಕೆಂಡ್‌ಗಳಾಗುತ್ತದೆ. ಇತ್ತೀಚೆಗೆ ಐಕಳ ಕಂಬಳದಲ್ಲಿ ಬೈಂದೂರಿನ ವಿಶ್ವನಾಥ ದೇವಾಡಿಗರು ಓಡಿಸಿದ ಕೋಣ 9.15 ಸೆಕೆಂಡ್‌ನಲ್ಲಿ ಕ್ರಮಿಸಿದ ಅವರ ದಾಖಲೆ ಅಜೇಯವಾಗಿ ಉಳಿದಿದೆ. ಕಳೆದ ವರ್ಷ ಶ್ರೀನಿವಾಸ ಗೌಡ 9.55 ಸೆಕೆಂಡ್‌ನಲ್ಲಿ ವೇಗವಾಗಿ ಗುರಿ ತಲುಪಿದ್ದರು.

click me!