ಮೆಂತೋಪ್ಲಸ್‌ ಡಬ್ಬಿ ನುಂಗಿ 9 ತಿಂಗಳ ಮಗು ದಾರುಣ ಸಾವು

By Kannadaprabha News  |  First Published Apr 18, 2020, 9:54 AM IST

ಮೆಂತೋಪ್ಲಸ್‌ ಡಬ್ಬಿ ನುಂಗಿ 9 ತಿಂಗಳ ಮಗು ಸಾವು| ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ನಿಡುಗುರ್ತಿ ಗ್ರಾಮದಲ್ಲಿ ನಡೆದ ಘಟನೆ| ಭಾರತಿ ಎನ್ನುವ ಮಗುವೇ ಸಾವನ್ನಪ್ಪಿದ ದುರ್ದೈವಿ| ಈ ಸಂಬಂಧ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|


ಕೂಡ್ಲಿಗಿ(ಏ.18): ನೆಗಡಿ, ತಲೆನೋವಿಗೆ ಬಳಸುವ 2 ರುಪಾಯಿ ಬೆಲೆಯ ಮೆಂತೋಪ್ಲಸ್‌ ಡಬ್ಬಿಯನ್ನು ನುಂಗಿ 9 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸಂಡೂರು ತಾಲೂಕು ನಿಡುಗುರ್ತಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಭಾರತಿ ಎನ್ನುವ ಮಗುವೇ ಮೆಂತೋಪ್ಲಸ್‌ ಡಬ್ಬಿ ನುಂಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ಈ ಮಗು ಕಳೆದ ಆಗಸ್ಟ್‌ 15ರಂದು ಜನಿಸಿದ್ದರಿಂದ ಪೋಷಕರು ಭಾರತಿ ಎಂದು ಹೆಸರು ನಾಮಕರಣ ಮಾಡಿದ್ದರು. ಗುರುವಾರ ರಾತ್ರಿ ಮಗುವಿನ ತಾಯಿ ಮನೆಯ ಕೆಲಸ ಮಾಡುತ್ತಿರುವಾಗ ಮನೆಯ ಮುಂದೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಭಾರತಿ ಆಕಸ್ಮಾತ್‌ ಆಗಿ ಮೆಂತೋಪ್ಲಸ್‌ ಡಬ್ಬಿ ನುಂಗಿಬಿಟ್ಟಿದೆ. 

ತಾತನ ಕೈ ಜಾರಿ 2ನೇ ಮಹಡಿಯಿಂದ ಬಿದ್ದು 6 ತಿಂಗಳ ಮಗು ಸಾವು!

Tap to resize

Latest Videos

ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ತೆರ​ಳು​ತ್ತಿ​ದ್ದಾ​ಗ ಮಾರ್ಗ ಮ​ಧ್ಯದಲ್ಲಿಯೇ ಮಗು ಸಾವನ್ನಪ್ಪಿದೆ. ಈ ಹಿಂದೆ ಕೂಡ್ಲಿಗಿ ಸಮೀಪದ ಬೀರಲಗುಡ್ಡ ಗ್ರಾಮದಲ್ಲಿ ಬಾರೆಹಣ್ಣಿನ ಬೀಜ ನುಂಗಿ ಮಗುವೊಂದು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಈಗ ಮೆಂತೋಪ್ಲಸ್‌ ಡಬ್ಬಿ ನುಂಗಿ ಮಗು ಸಾವನ್ನಪ್ಪಿರುವುದು ದುರಂತವೇ ಸರಿ. ಪೋಷಕರು ಮಕ್ಕಳು ಆಡುವಾಗ ನಿಗಾ ಇರಬೇಕಾಗಿದ್ದು, ಈ ಬಗ್ಗೆ ಪೋಷಕರಿಗೆ ಜಾಗೃತಿ ಅಗತ್ಯವಾಗಿದೆ. ಈ ಸಂಬಂಧ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!