ವೀರಾಜಪೇಟೆ ಮತ್ಸ್ಯಭವನದಲ್ಲಿ ಶುಕ್ರವಾರ ಹೊಳೆ ಮೀನು ಮಾರಾಟಕ್ಕೆ ವ್ಯಾಪಾರಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಹೊಳೆ ಮೀನನ್ನು ಹುಣಸೂರು, ಕೆ.ಆರ್.ಸಾಗರ, ಕೆ.ಆರ್.ನಗರ ಹಾಗೂ ಗಾವಡಗೆರೆಯಿಂದ ಮೀನು ವ್ಯಾಪಾರಿಗಳು ಪಾಸು ಮೂಲಕ ಸಾಗಣೆ ಮಾಡುತ್ತಿದ್ದಾರೆ.
ಮಡಿಕೇರಿ(ಏ.18): ವೀರಾಜಪೇಟೆ ಮತ್ಸ್ಯಭವನದಲ್ಲಿ ಶುಕ್ರವಾರ ಹೊಳೆ ಮೀನು ಮಾರಾಟಕ್ಕೆ ವ್ಯಾಪಾರಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಹೊಳೆ ಮೀನನ್ನು ಹುಣಸೂರು, ಕೆ.ಆರ್.ಸಾಗರ, ಕೆ.ಆರ್.ನಗರ ಹಾಗೂ ಗಾವಡಗೆರೆಯಿಂದ ಮೀನು ವ್ಯಾಪಾರಿಗಳು ಪಾಸು ಮೂಲಕ ಸಾಗಣೆ ಮಾಡುತ್ತಿದ್ದಾರೆ.
ಹೊಳೆ ಮೀನನ್ನು ಕೆ.ಜಿ.ಗೆ 200 ರು.ನಂತೆ ಮಾರಾಟ ಮಾಡುವಂತೆ ಮಾರಾಟ ದರ ನಿಗದಿಪಡಿಸಲಾಗಿದೆ. ಕೋಳಿ, ಕುರಿ ಮಾಂಸದ ವ್ಯವಹಾರ ಎಂದಿನಂತೆ ಇತ್ತು. ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಂಸ ಖರೀದಿಸುತ್ತಿದ್ದರು. ಪಟ್ಟಣ ಪಂಚಾಯಿತಿ ಎಲ್ಲ ಅಂಗಡಿಗಳ ಮುಂದೆ ನ್ಯಾಯ ಸಮ್ಮತ ದರವನ್ನು ನಮೂದಿಸಿ ನಾಮಫಲಕ ಹಾಕಿದ್ದರಿಂದ ದುಬಾರಿ ಬೆಲೆಗೆ ಅವಕಾಶವಿರಲಿಲ್ಲ.
ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ
ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನನ್ನು ಮೇ 3ರವರೆಗೆ ವಿಸ್ತರಿಸಲಾಗಿದ್ದು, ಶುಕ್ರವಾರ ಅಗತ್ಯ ಸಾಮಗ್ರಿ ಖರೀದಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ನಿರ್ಬಂಧ ಸಡಿಲಿಕೆ ಸಮಯದಲ್ಲಿ ಜನ, ವಾಹನ ಸಂಚಾರ ವಿರಳವಾಗಿತ್ತು.
ಲಾಕ್‌ಡೌನ್ ನಿರ್ಬಂಧದಿಂದ ಮನೆಯಲ್ಲೇ ಇರುವವರು ಎಂದಿನಂತೆ ತರಕಾರಿ ಖರೀದಿಸುವರೆಂಬ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಯಿತು. ತಾಲೂಕು ಆಡಳಿತ ನೀಡಿದ ಪಾಸ್‌ಗಳನ್ನು ಬಳಸಿ ಹಣ್ಣು ಹಂಪಲು ಹಾಗೂ ತರಕಾರಿ ವ್ಯಾಪಾರಿಗಳು ತರಕಾರಿಗಳನ್ನು ಮೈಸೂರು ಆರ್.ಎಂ.ಸಿಯಿಂದ ಅಧಿಕ ದಾಸ್ತಾನಿನಲ್ಲಿ ವ್ಯಾಪಾರಕ್ಕಾಗಿ ತಂದಿದ್ದರು. ಸುಮಾರು 20 ಗೂಡ್ಸ್ ವಾಹನಗಳು ವೀರಾಜಪೇಟೆ ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಬೇಡಿಕೆಗೆ ತಕ್ಕಂತೆ ತಾಲೂಕು ಆಡಳಿತ ನಿಗದಿಪಡಿಸಿದ ದರದಲ್ಲಿ ತರಕಾರಿ ವಿತರಣೆ ಮಾಡುತ್ತಿರುವುದರಿಂದ ಇಲ್ಲಿನ ಖಾಸಗಿ ಹಾಗೂ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿದ್ದ ತರಕಾರಿ ವ್ಯಾಪಾರ ಕುಂಠಿತ ಕಂಡಿದೆ.
ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು
ಗ್ರಾಹಕರ ಸಂಖ್ಯೆ ಕಡಿಮೆ ಇದ್ದುದರಿಂದ ಮಾರ್ಜಿನ್ ಫ್ರಿ ಮಳಿಗೆಗಳು, ಎಲ್ಲ ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು ಪೊಲೀಸರು ಸೂಚನೆ ನೀಡುವ ಮೊದಲೇ 12 ಗಂಟೆಗೆ ಸರಿಯಾಗಿ ಮುಚ್ಚುತ್ತಿದ್ದರು.
ಮಲ್ಪೆಯಲ್ಲಿ ಬಲೆಗೆ ಬಿತ್ತು ಸ್ಪಾನರ್ ಕ್ರ್ಯಾಬ್..! 1 ಕೆಜಿ ತೂಗುತ್ತೆ ಈ ಏಡಿ
ಪಟ್ಟಣದ ವ್ಯಾಪ್ತಿಯಲ್ಲಿರುವ ಬೇಕರಿಗಳು ಲಾಕ್‌ಡೌನ್‌ನ ನಿರ್ಬಂಧದ ಸಮಯದಲ್ಲಿ ವ್ಯಾಪಾರ ನಡೆಸಿದರು. ವಿರಾಜಪೇಟೆ ಪಟ್ಟಣದಲ್ಲಿ ಇಂದು ವಾಹನ ದಟ್ಟಣೆ ಹಾಗೂ ಜನ ಸಂಚಾರ ಕಡಿಮೆಯಾದುದರಿಂದ ಪಟ್ಟಣದಲ್ಲಿರುವ ಬಂದೋಬಸ್‌್ತ ಪೊಲೀಸರು, ಮಹಿಳಾ ಪೊಲೀಸರು, ಹೋಮ್‌ಗಾರ್ಡ್ಸ್ಗಳು ಕೆಲವು ಗಂಟೆ ವಿರಾಮ ಪಡೆಯುವಂತಾಯಿತು.