ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ವಿವಾಹ ಶುಕ್ರವಾರ ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನೆರವೇರಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಮನಗರ(ಏ.17): ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್ ವಿವಾಹ ಶುಕ್ರವಾರ ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನೆರವೇರಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ 9.15ರಿಂದ 9.40 ಗಂಟೆಯೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ನಿಖಿಲ್, ರೇವತಿ ಅವರನ್ನು ವರಿಸಲಿದ್ದಾರೆ. ಉಭಯ ಕುಟುಂಬದ 40ರಿಂದ 50 ಮಂದಿ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ 3-4 ಅಡಿ ಅಂತರದಲ್ಲಿ 40 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 100 ಮಂದಿಗೆ ಬೆಂಗಳೂರಿನ ಹೋಟೆಲ್‌ನಲ್ಲಿ ಅಡುಗೆ ಆರ್ಡರ್ ನೀಡಲಾಗಿದೆ. ಮುಖ್ಯದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಶುಕ್ರವಾರ ನೆರವೇರಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ಕೆ.ನಿಖಿಲ್-ಎಂ.ರೇವತಿ ವಿವಾಹ ಕಾರ್ಯದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ನಿಖಿಲ್-ರೇವತಿ ಕಲ್ಯಾಣೋತ್ಸವಕ್ಕೆ ಯಾರೆಲ್ಲ ಬಂದಿದ್ದಾರೆ? ಚಿತ್ರಗಳಲ್ಲಿ
ಬೆಳಗ್ಗೆ 8 ಗಂಟೆ ವೇಳೆಗೆ ವಧು-ವರ ಸೇರಿದಂತೆ ಕುಟುಂಬದವರು ಬೆಂಗಳೂರಿನಿಂದ ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಗೆ ಆಗಮಿಸುವರು. ಬೆಳಿಗ್ಗೆ 9.15ರಿಂದ 9.40 ಗಂಟೆಯೊಳಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ನಿಖಿಲ್-ರೇವತಿ ಮಾಂಗಲ್ಯ ಧಾರಣೆ ನಂತರ ಸಪ್ತಪದಿ ತುಳಿಯಲಿದ್ದಾರೆ. ಕುಮಾರಸ್ವಾಮಿ ಕುಟುಂಬಕ್ಕೆ ಆಪ್ತರಾಗಿರುವ ಪುರೋಹಿತರು ಮದುವೆಯ ಶಾಸ್ತ್ರ ಕಾರ್ಯ ನೆರವೇರಿಸುವರು.
ಕುಮಾರಸ್ವಾಮಿರವರು ತಂದೆ ಮಾಜಿ ಪ್ರಧಾನಿ ದೇವೇಗೌಡ, ತಾಯಿ ಚನ್ನಮ್ಮ, ಸಹೋದರರಾದ ಬಾಲಕೃಷ್ಣೇಗೌಡ, ಎಚ್.ಡಿ.ರೇವಣ್ಣ, ರಮೇಶ್, ಸಹೋದರಿಯರಾದ ಅನುಸೂಯ, ಶೈಲಜಾ ಕುಟುಂಬದವರು ಹಾಗೂ ವಧು ರೇವತಿ ತಂದೆ ಮಂಜುನಾಥ್, ತಾಯಿ ಶ್ರೀದೇವಿ, ಮಾಜಿ ಸಚಿವ ಕೃಷ್ಣಪ್ಪ ಸೇರಿದಂತೆ 40ರಿಂದ 50 ಮಂದಿ ಮಾತ್ರ ವಿವಾಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮತ್ತೆ ನಿಖಿಲ್-ರೇವತಿ ಮದ್ವೆ ಸ್ಥಳ ಬದಲು: ಎಚ್‌ಡಿಕೆ ಸೆಂಟಿಮೆಂಟ್ ಮಾತ್ರ ಬಿಡಲೇ ಇಲ್ಲ
ಜೆಡಿಎಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳ ಸಂಸದರು, ಶಾಸಕರು ಹಾಗೂ ಮುಖಂಡರಿಗಾಗಲಿ ಅಥವಾ ಅಧಿಕಾರ ವರ್ಗದವರಿಗಾಗಲಿ ಆಹ್ವಾನ ನೀಡಿಲ್ಲ. ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣರವರ ಆಪ್ತ ಸಹಾಯಕರು, ಚಾಲಕರಿಗೆ ಮದುವೆ ನೋಡುವ ಅವಕಾಶ ಕಲ್ಪಿಸಲಾಗಿದೆ.
ತೋಟದ ಮನೆಯ ಮುಖ್ಯ ದ್ವಾರದಲ್ಲಿ ಪ್ರತಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್ ನಡೆಯಲಿದೆ. ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿಯೇ ವೈದ್ಯಾಧಿಕಾರಿಗಳ ತಂಡವೊಂದನ್ನು ನಿಯೋಜಿಸಲಾಗಿದೆ.
ಮದುವೆ ಕಾರ್ಯ ವೀಕ್ಷಿಸಲು ಅನುಕೂಲವಾಗಲೆಂದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ 3-4 ಅಡಿ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಮದುವೆ ಮಂಟಪದ ವೇದಿಕೆ ಮುಂಭಾಗದಲ್ಲಿ 40 ಮಂದಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ. ತೋಟದ ಮುಖ್ಯದ್ವಾರದಿಂದ ಮಂಟಪದವರೆಗೆ ಚಪ್ಪರ ಹಾಕಲಾಗಿದ್ದು, ಹೂವಿನ ವಿಶೇಷ ಅಲಂಕರಿಸಲಾಗಿದೆ. ತೋಟದ ಮನೆಯನ್ನೂ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ಊಟ ಪಾರ್ಸಲ್:
ವಿವಾಹ ಕಾರ್ಯದಲ್ಲಿ ಪಾಲ್ಗೊಂಡವರಿಗಾಗಿ ವಿಶೇಷ ಮೆನು ಸಿದ್ಧ ಮಾಡಲಾಗುತ್ತಿದೆ. ಸಂಬಂಧಿಕರು,ಆಪ್ತ ಸಹಾಯಕರು, ಕೆಲಸಗಾರರು ಸೇರಿದಂತೆ ಒಟ್ಟು 100 ಮಂದಿಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಡುಗೆ ತಯಾರಿಸಲು ಆರ್ಡರ್ ನೀಡಲಾಗಿದೆ. ಎರಡು ಪಂಥಿಯಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ.
ತೋಟದ ಸುತ್ತಲು ಶಾಮಿಯಾನ ಸೈಡ್ ವಾಲ್ ಹಾಕಲಾಗಿದೆ. ಮನೆಯ ಆವರಣದಲ್ಲಿ ಅತಿಥಿಗಳ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ರಿಂದ 12 ಗಂಟೆಯೊಳಗೆ ಮದುವೆ ಮುಗಿಸಿ ಎಲ್ಲರೂ ಬೆಂಗಳೂರಿಗೆ ವಾಪಸ್ಸಾಗುವರು.
ಬಿಗಿ ಪೊಲೀಸ್ ಬಂದೋಬಸ್ತ್:
ನಿಖಿಲ್-ರೇವತಿ ವಿವಾಹ ನೆರವೇರಲಿರುವ ತೋಟದ ಮನೆಯ ಬಳಿ ಪೊಲೀಸ್ ಬಂದೋಬಸ್್ತ ಮಾಡಲಾಗಿದೆ. ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತಿನಲ್ಲಿ ತೊಡಗಿದ್ದಾರೆ. ತೋಟದ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬ್ಯಾರಿಕೇಟ್ ಹಾಕಿ ಅನ್ಯರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.