ಅವತ್ತು ನಿಖಿಲ್ ಕುಮಾರಸ್ವಾಮಿ ದೇಗುಲ ಪ್ರವೇಶಕ್ಕೆ ನಿರಾಕರಣೆ, ಮತ್ತೆ ನಾಳೆ ಭೇಟಿ! ಈಗ ಹೊಸ ಆರೋಪ

Published : Nov 28, 2026, 08:41 PM IST
Nikhil Kumaraswamy Congress Activists

ಸಾರಾಂಶ

ದೊಡ್ಡ ಕುರುಬರಹಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಮತ್ತೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಗೂ ಮುನ್ನ ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಜೆಡಿಎಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ನವೆಂಬರ್ 13, 2026 ರಂದು ಹಾರೋಹಳ್ಳಿ ತಾಲ್ಲೂಕಿನ ದೊಡ್ಡ ಕುರುಬರಹಳ್ಳಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಭೇಟಿ ದೊಡ್ಡ ವಿವಾದ ಆಗಿತ್ತು. ಗ್ರಾಮದ ಬಿಸಿಲು ಮಾರಮ್ಮ ದೇವಾಲಯದ ಉದ್ಘಾಟನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮಕ್ಕೆ ಎಂದು ಹೋದಾಗ ಕಾಂಗ್ರೆಸ್ ಕಾರ್ಯಕರ್ತರು ದೇಗುಲ ಪ್ರವೇಶಕ್ಕೆ ಅನುಮತಿ ನೀಡರಲಿಲ್ಲ. ನಿಖಿಲ್ ಅವರನ್ನು ತಡೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ಭಾರೀ ಚರ್ಚೆ ಆಗಿತ್ತು. ನಂತರ ಕಾಂಗ್ರೆಸ್ ಕಾರ್ಯಕರ್ತರು ಕ್ಷಮೆ ಕೂಡ ಕೇಳಿದ್ದರು. ಇದೀಗ ಮತ್ತೆ ನಿಖಿಲ್ ಕುಮಾರಸ್ವಾಮಿ ಅವರು ದೇವರ ದರ್ಶನಕ್ಕೆ ಮುಂದಾಗಿದ್ದಾರೆ!

ಈಗ ಮತ್ತೊಂದು ಆರೋಪ

ನಿಗದಿಯಂತೆ ನಾಳೆ ನಿಖಿಲ್ ಕುಮಾರಸ್ವಾಮಿ ದೊಡ್ಡಕುರಬರಹಳ್ಳಿಗೆ ಗ್ರಾಮಕ್ಕೆ ಭೇಟಿ ಕೊಡಲಿದ್ದಾರೆ. ಈ ವೇಳೆ ಬಿಸಿಲು ಮಾರಮ್ಮ ದೇವಿಯ ದರ್ಶನವನ್ನು ನಿಖಿಲ್ ಪಡೆಯಲಿದ್ದಾರೆ. ಬೆನ್ನಲ್ಲೇ ಜೆಡಿಎಸ್ ನಾಯಕರು ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಗ್ರಾಮಸ್ಥರ ಆಹ್ವಾನದ ಮೇರೆಗೆ ನಾಳೆ ದೊಡ್ಡಕುರುಬರಹಳ್ಳಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಿದ್ಧತೆ ಆರಂಭವಾಗಿದೆ. ಆದರೆ ನಿಖಿಲ್ ಭೇಟಿಗೂ ಮುನ್ನ ಪವರ್ ಕಟ್ ಆರೋಪ ಕೇಳಿಬಂದಿದೆ. ನಿಖಿಲ್ ಕುಮಾರಸ್ವಾಮಿ ಗ್ರಾಮಕ್ಕೆ ನಾಳೆ ಬರುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಪವರ್ ಕಟ್ ಮಾಡುವ ವಿಚಾರ ತಿಳಿದುಬಂದಿದೆ. ಗ್ರಾಮಕ್ಕೆ ಸರಬರಾಜು ಆಗುತ್ತಿದ್ದ ವಿದ್ಯುತ್‌ ಅನ್ನು ನಾಳೆ ಸ್ಥಗಿತಗೊಳ್ಳಲಿದೆ. ನಾಳೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಉದ್ದೇಶಪೂರ್ವಕ ವಿದ್ಯುತ್ ಕಡಿತ ಮಾಡ್ತಿದ್ದಾರೆ. ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹೆಸರಲ್ಲಿ ವಿದ್ಯುತ್ ಕಡಿತ ಮಾಡ್ತಿದೆ. ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ವಿದ್ಯುತ್ ಕಡಿತ ಮಾಡಲಾಗ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕರೆಂಟ್ ತೆಗೆದ ಮಾತ್ರಕ್ಕೆ ಜನರ ಪ್ರೀತಿ ಮುಚ್ಚಿಡಲು ಸಾಧ್ಯವಿಲ್ಲ ಎಂದ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುತೂಹಲ ಮೂಡಿಸಿದ ಭೇಟಿ

ನಾಳೆ ಪವರ್ ಕಟ್ ಆಗಲಿದೆ ಎಂದು ಜೆಡಿಎಸ್ ನಾಯಕರು ಆರೋಪ ಮಾಡಿದ್ದಾರೆ. ಹೀಗಾಗಿ ನಾಳೆ ನಿಖಿಲ್ ಭೇಟಿ ಮತ್ತೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದು ಕುತೂಹಲ ಮೂಡಿಸಿದೆ. ಕಳೆದ ಬಾರಿ ದೇಗುಲ ಪ್ರವೇಶಕ್ಕೆ ನಿರಾಕರಿಸಿರೋದು ದೊಡ್ಡ ವಿವಾದ ಆಗಿತ್ತು. ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರಿಗೆ ತಮ್ಮ ತಪ್ಪಿನ ಅರಿವು ಕೂಡ ಆಗಿತ್ತು. ಕ್ಷಮೆ ಕೂಡ ಕೇಳಿತ್ತು.

ತೀವ್ರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದ ಈ ಪ್ರಕರಣದ ಬಗ್ಗೆ ಅಂದು ಪ್ರತಿಕ್ರಿಯಿಸಿದ್ದ ನಿಖಿಲ್ ಕುಮಾರಸ್ವಾಮಿ, ರಾಜಕೀಯ ವಿರೋಧಿಗಳು ಮತ್ತು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ದೇವಸ್ಥಾನಕ್ಕೆ ಬೀಗ ಹಾಕಿ ತಡೆದಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದು, ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಗುಡುಗಿದ್ದರು. ಇನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ದೇವಾಲಯದ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಮತ್ತು ದೇವರು ಎಲ್ಲರಿಗೂ ಒಂದೇ ಎಂದಿದ್ದರು.

PREV
Read more Articles on
click me!

Recommended Stories

ಮಧ್ಯಾಹ್ನ ಊಟ ಸ್ಕಿಪ್ ಮಾಡ್ತಿದ್ದ ವಿಚಾರಕ್ಕೆ ಕೆಲಸದಿಂದ ವಜಾ! ಗೇಟ್‌ಪಾಸ್ ಕೊಡಲು ಕಂಪನಿ ಕೊಟ್ಟ ಕಾರಣ ಏನು ಗೊತ್ತಾ?
ಬೆಳಗಾವಿಗೆ ಬಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಸಿಎಂ ಫಡ್ನವಿಸ್; ನಾಡದ್ರೋಹಿಗಳಿಗೆ ಸಾಮರಸ್ಯದ ಪಾಠ