* ಹನ್ನೊಂದು ಜಿಲ್ಲೆಗಳಲ್ಲಿ ಇನ್ನೊಂದು ವಾರ ಲಾಕ್ ಡೌನ್
* ಜೂ. 14 ರಿಂದ 19 ಜಿಲ್ಲೆಗಳು ಅನ್ ಲಾಕ್
* ಆಟೋ, ಕ್ಯಾಬ್ ಸಂಚಾರಕ್ಕೆ ಅನುಮತಿ
* ಬಸ್ ಸಂಚಾರ ಆರಂಭ ಇಲ್ಲ
ಬೆಂಗಳೂರು(ಜೂ. 11) ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ.
ಮೊದಲ ಹಂತದ ಸಡಿಲಿಕೆ ( ಅನ್ ಲಾಕ್ ನ ಹತ್ತೊಂಭತ್ತು ಜಿಲ್ಲೆಗಳಿಗೆ ಅನ್ವಯ, ಜೂನ್ 14 ರ ಬೆಳಗ್ಗೆ 6 ರಿಂದ ಜೂನ್ 21 ರವರೆಗೆ)
* ಎಲ್ಲ ಕಾರ್ಖಾನೆಗಳು ಶೇ. 50 ಸಿಬ್ಬಂದಿಯೊಂದಿಗೆ ಕೆಲಸ ಮಾಡಬಹುದು
* ಗಾರ್ಮೆಂಟ್ಸ್ ಶೇ. 30 ಹಾಜರಾತಿಯೊಂದಿಗೆ ಓಪನ್
* ಆಹಾರ, ದಿನಸಿ, ಹಣ್ಣು, ತರಕಾರಿ, ಮಾಂಸ, ಮೀನು, ಡೈರಿ ಪ್ರಾಡೆಕ್ಟ್ ಗಳ ಅಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಹಿವಾಟು ನಡೆಸಬಹುದು
* ಸಿಮೆಂಟ್ , ಸ್ಟೀಲ್ ಅಂಗಡಿ ತೆರೆಯಲು ಅವಕಾಶ (6 ರಿಂದ ಮಧ್ಯಾಹ್ನ 2 ಗಂಟೆವರೆಗೆ)
* ಪಾರ್ಕ್ ಬೆಳಗ್ಗೆ 5 ರಿಂದ 10 ಓಪನ್ , ವಾಯುವಿಹಾರ ನಡೆಸಬಹುದು
* ಆಟೋ ಟ್ಯಾಕ್ಸಿಯಲ್ಲಿ ಇಬ್ಬರ ಪ್ರಯಾಣಕ್ಕೆ ಅವಕಾಶ
* ಅರ್ಧದಷ್ಟು ಸಿಬ್ಬಂದಿಯೊಂದಿಗೆ ಕೃಷಿ, ಲೋಕೋಪಯೋಗಿ, ವಸತಿ, ಆರ್ ಟಿಒ, ಸಹಕಾರ, ನಬಾರ್ಡ್, ಕಂದಾಯ ಇಲಾಖೆ ಕೆಲಸ ಮಾಡಲಿದೆ
* ಆರೋಗ್ಯ ಕಾರ್ಯಕರ್ತರಿಗೆ ಕೌಶಲ್ಯ ತರಬೇತಿ ನೀಡಲು ಅವಕಾಶ ಇದೆ
* ಕನ್ನಡಕದ ಅಂಗಡಿಗಳು ತೆರೆಯಲು ಅವಕಾಶ( ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ)
ಕೊರೋನಾ ನಿಷೇಧಾಜ್ಞೆ ನಿಯಮಗಳು
* ಅಗತ್ಯ ಪರಿಸ್ಥಿತಿ ಹೊರತುಪಡಿಸಿ ವಾರಾಂತ್ಯದ ವೇಳೆ ಅನಗತ್ಯ ಓಡಾಟಕ್ಕೆ ಅವಕಾಶ ಇಲ್ಲ
* ಅನಾರೋಗ್ಯ ಸಂಬಂಧ ತೆರಳುವ ರೋಗಿಗಳು ಮತ್ತು ಅಅವರ ಅಡೆಂಡರ್ ಗಳಿಗೆ ಅವಕಾಶ
* ರಾತ್ರಿ ಪಾಳಿಯ ಕಂಪನಿಗಳು ಕೆಲಸ ಮಾಡಬಹುದು, ಸಿಬ್ಬಂದಿ ಐಡಿ ಕಾರ್ಡ್ ಇಟ್ಟುಕೊಂಡು ಸಂಚಾರ ಮಾಡಬಹುದು
* ಟೆಲಿಕಾಂ, ಅಂತರ್ಜಾಲ ಸೇವೆ ಸಲ್ಲಿಸುವ ವ್ಯಕ್ತಿಗಳ ಓಡಾಟಕ್ಕೆ ಅವಕಾಶ ಇದೆ.
* ಆರೊಗ್ಯ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಓಡಾಡಡಬಹುದು
* ಸರಕು ಸಾಗಣೆ ಮತ್ತು ಈ ಸರ್ವೀಸ್ ಗೆ ನಿರ್ಬಂಧ ಇಲ್ಲ
* ರೈಲು ಮತ್ತು ವಿಮಾನ ಸಂಚಾರ ಇರಲಿದೆ. ಸರಿಯಾದ ದಾಖಲೆ ಇಟ್ಟುಕೊಂಡು ಖಾಸಗಿ ವಾಹನ ಸಂಚಾರ ವ್ಯವಸ್ಥೆ ಬಳಸಿಕೊಳ್ಳಬಹುದು
* ವಾರಾಂತ್ಯದ ನಿಷೇಧಾಜ್ಞೆಗೂ ಈ ನಿಯಮಗಳೆ ಅನ್ವಯವಾಗುತ್ತದೆ. ಗಮನಿಸಬೇಕಾದ ವಿಚಾರ ಎಂದರೆ ಅನ್ ಲಾಕ್ ಇರುವ ಜಿಲ್ಲೆಗಳಲ್ಲಿಯೂ ವಾರಾಂತ್ಯದ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಇದರ ಅರ್ಥ ಬೆಂಗಳೂರಿನಲ್ಲಿಯೂ ವೀಕೆಂಡ್ ಲಾಕ್.
ಅನ್ ಲಾಕ್ ಗೂ ಮುನ್ನವೇ ಹುಬ್ಬಳ್ಳಿಯಲ್ಲಿ ಎಲ್ಲವೂ ಓಪನ್
ಬಹುತೇಕರ ಪ್ರಶ್ನೆಗಳು?
* ಅಂತರ್ ಜಿಲ್ಲಾ ಓಡಾಡಕ್ಕೆ ಅವಕಾಶ ಇದೆಯೇ? ಇದು ಎಲ್ಲರನ್ನು ಕಾಡಿರುವ ಪ್ರಶ್ನೆ. ಉದಾಹರಣೆಗೆ ತುಮಕೂರು ಅನ್ ಲಾಕ್ ಇದೆ, ಬೆಂಗಳೂರು ಅನ್ ಲಾಕ್ ಇದೆ ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಲಾಕ್ ಡೌನ್ ಜಾರಿಯಿರುತ್ತದೆ. ತುಮಕೂರಿನಿಂದ ಬೆಂಗಳೂರಿಗೆ ಬರುವ ವ್ಯಕ್ತಿ ಏನು ಮಾಡಬೇಕು? ಖಾಸಗಿ ವಾಹನದಲ್ಲಿ ಬರಬಹುದೆ? ಈ ಪ್ರಶ್ನೆಗೆ ಸರ್ಕಾರ ಯಾವುದೆ ಸ್ಪಷ್ಟ ಉತ್ತರ ನೀಡಿಲ್ಲ. ಒಂದು ಅರ್ಥದಲ್ಲಿ ಹೇಳುವುದಾದರೆ ಪ್ರಯಾಣ ಅಸಾಧ್ಯ. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳ ಅಕ್ಕಪಕ್ಕದ ಜಿಲ್ಲೆಗಳು ಲಾಕ್ ಪರಿಣಾಮ ಅನುಭವಿಸಬೇಕಾಗುತ್ತದೆ.
* ಜಿಲ್ಲಾ ವ್ಯಾಪ್ತಿ ಸಂಚಾರ; ಅನ್ ಲಾಕ್ ಇರುವ ಜಿಲ್ಲೆಗಳಲ್ಲಿ ಆದರೂ ಸಂಜೆ ಏಳು ಗಂಟೆ ಒಳಗೆ ಮನೆ ಸೇರಿಕೊಳ್ಳಬೇಕು. ಬೇಕಾಬಿಟ್ಟಿ ಓಡಾಟಕ್ಕೆ ಆಸ್ಪದ ಇಲ್ಲ. ಅಗತ್ಯ ದಾಖಲೆ ಇಲ್ಲವಾದರೆ ದಂಡ ನೀಡಬೇಕಾಗುತ್ತದೆ.