ಬೆಂಗಳೂರಿನಲ್ಲಿ ಆ.30ರ ವರೆಗೆ ಈ ರೂಲ್ಸ್ ಮುಂದುವರಿಕೆ: ಕಮಲ್ ಪಂತ್ ಆದೇಶ

Published : Aug 17, 2021, 08:58 PM ISTUpdated : Aug 17, 2021, 09:00 PM IST
ಬೆಂಗಳೂರಿನಲ್ಲಿ  ಆ.30ರ ವರೆಗೆ ಈ  ರೂಲ್ಸ್  ಮುಂದುವರಿಕೆ: ಕಮಲ್ ಪಂತ್ ಆದೇಶ

ಸಾರಾಂಶ

* ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂ ಅವಧಿ ವಿಸ್ತರಣೆ * ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ * ಆಗಸ್ಟ್ 30ರ ವರೆಗೆ ನೈಟ್‌ ಕರ್ಫ್ಯೂ ವಿಸ್ತರಣೆ

ಬೆಂಗಳೂರು, (ಆ.17): ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿ ಆಗಸ್ಟ್ 30ರ ವರೆಗೆ ನೈಟ್‌ ಕರ್ಫ್ಯೂ ವಿಸ್ತರಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. 

ಬೆಂಗಳೂರು  ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು (ಆಗಸ್ಟ್ 17) ಆದೇಶ ಹೊರಡಿಸಿದ್ದು, ಆಗಸ್ಟ್ 30ರ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿ ಇರಲಿದೆ. 

ಕರ್ನಾಟಕದಲ್ಲಿ ಕೊರೋನಾ ಕೊಂಚ ಹೆಚ್ಚಳ: ಇಲ್ಲಿದೆ ಆ.17ರ ಅಂಕಿ-ಸಂಖ್ಯೆ

ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದಂತ ರಾತ್ರಿ ಕರ್ಫ್ಯೂ ನಿರ್ಬಂಧ ವಿಧಿಸಲಾಗಿತ್ತು. ಜೊತೆಗೆ, ಗಡಿಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಹಾಕಲಾಗಿತ್ತು. ನೈಟ್ ಕರ್ಫ್ಯೂ ವಿಧಿಸಿರುವುದರಿಂದ ಮೆಟ್ರೋ ಸಂಚಾರ ಅವಧಿಯಲ್ಲಿ ಬದಲಾವಣೆ ಮಾಡಲಾಗಿತ್ತು. 

ಇದೀಗ, ರಾತ್ರಿ ಕರ್ಫ್ಯೂ ಆದೇಶವನ್ನು ಈ ತಿಂಗಳ ಅಂತ್ಯದ ವರೆಗೆ ಮುಂದುವರಿಸಿ ಆದೇಶ ಹೊರಡಿಸಲಾಗಿದೆ. ಹಾಗಾಗಿ, ಬಹುತೇಕ ಈಗಿರುವ ನಿಯಮಗಳು ಆಗಸ್ಟ್ 30ರ ವರೆಗೆ ಮುಂದುವರಿಯಲಿದೆ.

PREV
click me!

Recommended Stories

ಕೇರಳ ನಿಯೋಗ ಕೋಗಿಲು ಬಡಾವಣೆಗೆ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ!
ಹೊಸ ವರ್ಷದ ಕಿಕ್: ಹಂಪಿ, ಟಿಬಿ ಡ್ಯಾಂಗೆ ಹರಿದು ಬಂದ ಜನಸಾಗರ; ಲಾಡ್ಜ್ ದರ ಕೇಳಿದ್ರೆ ಪ್ರವಾಸಿಗರು ಸುಸ್ತೋ ಸುಸ್ತು!