ಪ್ರವಾಸಿ ಜಿಲ್ಲೆ ಕಾಫಿನಾಡಲ್ಲಿ ನಿಫಾ ವೈರಸ್ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಕಾಫಿನಾಡಿಗೆ ನಿತ್ಯ ಸಾವಿರಾರು ಕೇರಳಿಗರು ಬರ್ತಿರೋದ್ರಿಂದ ಕಾಫಿನಾಡಿಗರು ಆತಂಕದಲ್ಲೇ ಬದುಕುವಂತಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.15): ಪ್ರವಾಸಿ ಜಿಲ್ಲೆ ಕಾಫಿನಾಡಲ್ಲಿ ನಿಫಾ ವೈರಸ್ ಆತಂಕ ಹೆಚ್ಚಾಗಿದ್ದು, ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಕಾಫಿನಾಡಿಗೆ ನಿತ್ಯ ಸಾವಿರಾರು ಕೇರಳಿಗರು ಬರ್ತಿರೋದ್ರಿಂದ ಕಾಫಿನಾಡಿಗರು ಆತಂಕದಲ್ಲೇ ಬದುಕುವಂತಾಗಿದೆ. ಬಂದಂತಹಾ ಪ್ರವಾಸಿಗರು ಹೋಟೆಲ್, ಲಾಡ್ಜ್, ರೆಸಾರ್ಟ್ಗಳಲ್ಲಿ ತಂಗುತ್ತಿದ್ದು ಎಲ್ಲಿ ನಿಫಾ ಹರಡುತ್ತೋ ಅನ್ನೋ ಭಯ ಕಾಫಿನಾಡಿಗರಲ್ಲಿ ಆವರಿಸಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದ್ದು, ನಿಫಾಗಾಗಿಯೇ ಸ್ಪೆಷಲ್ ವಾರ್ಡ್ ನಿರ್ಮಿಸಿದ್ದಾರೆ.
undefined
ಒಂದಡೆ ಬಾವುಲಿಗಳ ಭಯ. ಮತ್ತೊಂದೆಡೆ ಕೇರಳಿಗರ ನಿಫಾ ಫಿಯರ್: ಕೂಲ್ ಸಿಟಿ ಕಾಫಿನಾಡಲ್ಲೀಗ ಹಾಟ್ ವೈರಸ್ ನಿಫಾ ಫಿಯರ್ ಆವರಿಸಿದೆ. ಗಿರಿ ಭಾಗದಲ್ಲಿನ ಸಾಧಾರಣ ಮಳೆಗೆ ಗಿರಿಯ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ. ಹಾಗಾಗಿ, ಇಲ್ಲಿನ ಸೌಂದರ್ಯ ಸವಿಯೋಕೆ ರಾಜ್ಯ ಸೇರಿದಂತೆ ಹೊರರಾಜ್ಯದಿಂದ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅದರಲ್ಲಿ ಕೇರಳಿಗರೇ ಹೆಚ್ಚು. ಹಾಗಾಗಿಯೇ, ಕಾಫಿನಾಡಿಗೆ ಭಯವೂ ಹೆಚ್ಚು. ಏಜೆನ್ಸಿಗಳ ಪ್ಯಾಕೇಜ್ ಮೂಲಕ ನಿತ್ಯ ಕಾಫಿನಾಡಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡ್ತಿರೋದು ಜಿಲ್ಲೆಯ ಪ್ರವಾಸೋಧ್ಯಮದ ಮೇಲೂ ನಿಫಾ ಛಾಯೆ ಆವರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ಬಗ್ಗೆ ಶಾಸಕ ವಿಜಯೇಂದ್ರ ಹೇಳಿದ್ದೇನು?
ಇದು ಒಂದೆಡೆಯಾದ್ರೆ, ನಿಫಾ ಹರಡುವಿಕೆಯಲ್ಲಿ ಬಾವುಲಿಗಳದ್ದೇ ಲೀಡ್ ರೋಲ್ ಪಾತ್ರವಾಗಿರೋದ್ರಿಂದ ನಗರದ ಕೇಂದ್ರ ಬಿಂದುವಾಗಿರೋ ಜಿಲ್ಲಾಧಿಕಾರಿ ಕಚೇರಿ, ಎಸ್ಪಿ ಆಫೀಸ್, ಎಸ್ಪಿ-ಡಿಸಿ ಮನೆ, ನಗರಸಭೆ, ಕೋರ್ಟ್, ಆಸ್ಪತ್ರೆ, ಶಾಲೆ ಆವರಣದಲ್ಲಿನ ಹತ್ತಾರು ವರ್ಷಗಳ ಮರಗಳಲ್ಲಿ ಲೆಕ್ಕವಿಲ್ಲದಷ್ಟು ಬಾವುಲಿಗಳು ಜೋತು ಬಿದ್ದಿರೋದು ನಗರ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿರೋ ಸರ್ಕಾರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ ನಿರ್ಮಿಸಿದೆ.
ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವುಳ್ಳ ಆರು ಬೆಡ್ ಸಿದ್ಧ: ಜಿಲ್ಲಾಸ್ಪತ್ರೆಯಲ್ಲಿ ನಿಫಾ ವಾರ್ಡ್ ಎಂದು ಒಂದು ಸ್ಪೆಷಲ್ ವಾರ್ಡ್ ನಿರ್ಮಾಣ ಮಾಡಲಾಗಿದೆ. ಆರು ಬೆಡ್ಗಳ ವಾರ್ಡ್ನಲ್ಲಿ ಆರೂ ಬೆಡ್ಗೂ ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯವುಳ್ಳ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ನಿಫಾ ಪ್ರಕರಣ ಕೂಡ ದಾಖಲಾಗಿಲ್ಲ. ಆದ್ರೆ, ಆತಂಕವಂತೂ ಇದ್ದೇ ಇದೆ. ಸಾಲದಕ್ಕೆ ನಗರಸಭೆ ಆವರಣದಲ್ಲಿ ಬೃಹತ್ತಾದ ಪಾರ್ಕ್ ಕೂಡ ಇದೆ. ದಿನಂಪ್ರತಿ ಸಾವಿರಾರು ಜನ ಓಡಾಡ್ತಾರೆ. ಮಕ್ಕಳು ಆಟವಾಡ್ತಾರೆ. ಹಿರಿಯರು ವಿಶ್ರಾಂತಿ ಪಡೆಯುತ್ತಾರೆ. ಪಾರ್ಕ್ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆಯೂ ಇದೆ.
ಕೇಂದ್ರೀಯ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಅವಮಾನ: ಕ್ಯಾಂಪಸ್‌ನಲ್ಲಿ ಪರ-ವಿರುದ್ದ ಹೋರಾಟ
ಹಾಗಾಗಿ, ಸ್ಥಳಿಯರು ಕೂಡ ಸರ್ಕಾರ ಬಾವುಲಿಗಳನ್ನ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದು, ಸದ್ಯಕ್ಕೆ ಕೇರಳ ಪ್ರವಾಸಿಗರನ್ನ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆ, ಸದ್ಯಕ್ಕಂತು ಕಾಫಿನಾಡಲ್ಲಿ ಈ ವೈರಸ್ ಪತ್ತೆಯಾಗಿಲ್ಲ. ಆದ್ರೆ, ಭಯವನ್ನಂತೂ ತರಿಸಿದೆ. ಮರಗಳಲ್ಲಿ ಜೋತುಬಿದ್ದಿರೋ ಬಾವುಲಿಗಳನ್ನ ಕಂಡು ವೈರಸ್ ನಮಗೂ ಬಂದ್ರೆ ಎಂದು ಜನ ಆತಂಕದಲ್ಲೇ ಬದುಕ್ತಿದ್ದಾರೆ. ಬಾವುಲಿಗಳ ಸ್ಥಳಾಂತರದ ಜೊತೆ, ತಾತ್ಕಾಲಿಕವಾಗಿ ಕೇರಳ ಪ್ರವಾಸಿಗರನ್ನ ನಿಷೇಧಿಸೋದು ಒಳ್ಳೆಯದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಇದಕ್ಕೆ ಸರ್ಕಾರ ,ಜಿಲ್ಲಾಡಳಿತ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಾಗಿದೆ.