
ವಿಜಯಪುರ(ಜು.02): ಕ್ರೂಜರ್ ವಾಹನ ಟೆಂಪೋ ನಡುವೆ ನಡೆದ ಡಿಕ್ಕಿ ಸಂಭವಿಸಿದ ಪರಿಣಾಮ ನವ ವಿವಾಹಿತೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-50ರ ಯರಗಲ್ ಬಿ.ಕೆ ಕ್ರಾಸ್ ಬಳಿ ಇಂದು(ಶುಕ್ರವಾರ) ನಡೆದಿದೆ.
ನವ ವಿವಾಹಿತೆ ರಾಣಿ ಗಣೇಶ ಚವ್ಹಾಣ(26) ಮೃತ ದುರ್ದೈವಿಯಾಗಿದ್ದು, ನವ ವಿವಾಹಿತ ಗಣೇಶ್‌ಗೂ ಗಾಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ಬಳಿ ಅಪಘಾತ; ಜಗ್ಗೇಶ್ ಪುತ್ರ ಯತಿರಾಜ್ ಕಾರು ನಜ್ಜುಗುಜ್ಜು
ನಿನ್ನೆ(ಗುರುವಾರ)ಯಷ್ಟೇ ಮದುವೆಯಾಗಿದ್ದು ಇಂದು ಸಿಂದಗಿ ಬಳಿಯ ಕೊಕಟನೂರು ಎಲ್ಲಮ್ಮ ದೇವಿ ದರ್ಶನಕ್ಕೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಶಹಾಬಾದ್ ಮೂಲದ ಕುಟುಂಬಸ್ಥರು ಇಂದು ದೇವರ ದರ್ಶನಕ್ಕೆ ಹೊರಟಿದ್ದರು. ಈ ವೇಳೆ ಕ್ರೂಜರ್ ವಾಹನ ಟೆಂಪೋ ನಡುವೆ ನಡೆದ ಡಿಕ್ಕಿ ಸಂಭವಿಸಿದೆ. ಹೀಗಾಗಿ ನವವಿವಾಹಿತೆ ರಾಣಿ ಗಣೇಶ ಚವ್ಹಾಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ ಅಜಯ ಕುಮಾರ ವಿಜಯ ಕುಸಳಿ(26), ರೇಣುಕಾ ಲಸ್ಕರ್ (33) ಹಾಗೂ ಆರುಶ್ ಗಣೇಶ ಲಸ್ಕರ(6) ಎಂಬುವರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸಿಂದಗಿ ಪಿಎಸ್ಐ ಸಂಗಮೇಶ್ ಹೊಸಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.