ಕರಾವಳಿಯ ನಾಲ್ವರು ಶ್ರೇಷ್ಠ ಸಾಧಕರಿಗೆ ಹೊಸವರ್ಷ ಪ್ರಶಸ್ತಿ

By Kannadaprabha News  |  First Published Jan 18, 2023, 9:03 AM IST

ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ  ಹೊಸವರ್ಷದ ಪ್ರಶಸ್ತಿ’ಗಳನ್ನು ಶನಿವಾರ ಫಾರ್ಚೂನ್‌ ಇನ್‌ ವ್ಯಾಲಿವ್ಯೂ ಹೊಟೇಲಿನಲ್ಲಿ ಪ್ರದಾನ ಮಾಡಲಾಯಿತು.


ಮಣಿಪಾಲ (ಜ.18) : ಕರಾವಳಿ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಸಾಧಕರಿಗೆ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಎಜಿಇ, ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮಾಹೆ, ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಮಣಿಪಾಲ್‌ ಗ್ರೂಪ್‌ (ಎಂಇಎಂಜಿ, ಮಣಿಪಾಲ್‌ ಮೀಡಿಯಾ ನೆಟ್ವರ್ಕ್ ಲಿ ಎಂಎಂಎನ್‌ಎಲ… ಮತ್ತು ಡಾ. ಟಿಎಂಎ ಪೈ ¶ೌಂಡೇಶನ್‌ ಸಂಸ್ಥೆಗಳ ವತಿಯಿಂದ ನೀಡಲಾಗುವ) ಹೊಸವರ್ಷದ ಪ್ರಶಸ್ತಿ’ಗಳನ್ನು ಶನಿವಾರ ಫಾರ್ಚೂನ್‌ ಇನ್‌ ವ್ಯಾಲಿವ್ಯೂ ಹೊಟೇಲಿನಲ್ಲಿ ಪ್ರದಾನ ಮಾಡಲಾಯಿತು.

38 ವರ್ಷಗಳ ಕಾಲ ಬ್ಯಾಂಕಿಂಗ್‌ ನಿರ್ವಹಣೆ ಮತ್ತು ಆಡಳಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಮಹಾಬಲೇಶ್ವರ ಎಂ.ಎಸ್‌., ಸಮಾಜಸೇವಾ ಭಾವದೊಂದಿಗೆ ಮಕ್ಕಳ ಶುಶ್ರೂಷೆ ಮತ್ತು ತಜ್ಞ ವೈದ್ಯೆಯಾಗಿರುವ ಡಾ. ಪುಷ್ಪಾ ಜಿ.ಕಿಣಿ, ಮೂಳೆಚಿಕಿತ್ಸಕರಾಗಿ, ಕೆಎಂಸಿಯ ಡೀನ್‌ ಆಗಿ ಆಡಳಿತಾತ್ಮಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಡಾ.ಪಿ.ಶ್ರೀಪತಿ ರಾವ್‌ ಮತ್ತು ಕೃಷಿ ಕ್ಷೇತ್ರದ ಸಾಧಕರಾಗಿ ಪದ್ಮಶ್ರೀ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ ಅವರಿಗೆ 2023ನೇ ಸಾಲಿನ ಹೊಸವರ್ಷದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Latest Videos

undefined

Udupi: ಬೀಳಲು ಸಿದ್ಧವಾಗಿರುವ ನೀರಿನ ಟ್ಯಾಂಕ್ ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ

ಎಂಇಎಂಜಿ ಚೇರ್‌ ಮನ್‌ ಮತ್ತು ಮಾಹೆಯ ಅಧ್ಯಕ್ಷ ಡಾ.ರಂಜನ್‌ ಆರ್‌. ಪೈ, ಮಾಹೆಯ ಸಹಕುಲಾಧಿಪತಿ ಮತ್ತು ಎಜಿಇಯ ಅಧ್ಯಕ್ಷ ಡಾ. ಎಚ್‌.ಎಸ್‌.ಬಲ್ಲಾಳ್‌, ಮಾಹೆಯ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಜಿಇನ ಉಪಾಧ್ಯಕ್ಷ ಟಿ. ಸತೀಶ್‌ ಯು.ಪೈ, ಡಾ.ಟಿ.ಎಂ.ಎ.ಪೈ ¶ೌಂಡೇಶನ್‌ ಅಧ್ಯಕ್ಷ ಟಿ.ಅಶೋಕ ಪೈ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಡುಪಿಯಲ್ಲಿ ನಿತ್ಯಾನಂದ ಸ್ವಾಮಿಗಳ ಮಂದಿರ ಉದ್ಘಾಟನೆ

  • ಈ ಪ್ರಶಸ್ತಿಯಿಂದ ನನ್ನ ಸೇವೆಯನ್ನು ಸಮಾಜ ಪರಿಗಣಿಸಿದೆ ಎಂಬ ಸಾರ್ಥಕ ಭಾವ ಉಂಟಾಗಿದೆ - ಮಹಾಬಲೇಶ್ವರ ಎಂ. ಎಸ್‌.
  •  ಪ್ರಶಸ್ತಿಯು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಸಾಧಿಸಲು ಹೊಸ ಸ್ಫೂರ್ತಿ ತುಂಬಿದೆ - ಡಾ. ಪುಷ್ಪಾ ಜಿ. ಕಿಣಿ
  • ಪದ್ಮಶ್ರೀ ಪ್ರಶಸ್ತಿಯ ಜೊತೆಗೆ ಈ ಪ್ರಶಸ್ತಿಯು ಯುವಜನಾಂಗವು ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಲಿ - ಅಮೈ ಮಹಾಲಿಂಗ ನಾಯ್ಕ
  • ಸಾಧನೆಗೆ ಆಶ್ರಯ ನೀಡಿದ ಸಂಸ್ಥೆಯೇ ಪ್ರಶಸ್ತಿ ನೀಡುತ್ತಿರುವುದು ನನ್ನ ಜೀವನದ ಕೃತಾರ್ಥ ಕ್ಷಣ - ಡಾ. ಪಿ. ಶ್ರೀಪತಿ ರಾವ್‌
click me!