ಹೊಳವನಹಳ್ಳಿ (ನ.21):  ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಯುವಕನನೊಬ್ಬ ಅತ್ಯಾಚಾರವೆಸಗಿರುವ ಘಟನೆ ಕೊರಟಗೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ತಾಲೂಕಿನ ಬಿ.ಡಿ. ಪುರ ಬಳಿಯ ಔದಾರನಹಳ್ಳಿ ಗ್ರಾಮದ ಯುವತಿಯೇ ಅತ್ಯಾಚಾರಕ್ಕೊಳಗಾದ ದುರ್ದೈವಿ. ಗೌರಿಬಿದನೂರಿನ ಮೂಲದ ಶಭರೀಶ್‌(23) ಎಂಬಾತನನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಹಾಸನದಿಂದ ತುಮಕೂರಿಗೆ ತೇಲಿಬಂದ ಪ್ರೇಮಿಗಳ ಶವ : ಏನಿದು ಕೇಸ್..?

ವಿದ್ಯಾರ್ಥಿನಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊರೋನಾ ನಿಮಿತ್ತ ಶಾಲೆ ತೆರೆಯದ ಕಾರಣ ಆನ್‌ಲೈನ್‌ ಮೂಲಕ ಪಾಠ ಕೇಳುವುದಕ್ಕಾಗಿ ಮನೆಯಲ್ಲಿದ್ದಳು.

 ಈ ವೇಳೆ ಪೋಷಕರು ಮನೆಯಲ್ಲಿ ಇರಲಿಲ್ಲ. ಈ ಸಂದರ್ಭ ನೋಡಿಕೊಂಡು ಮನೆಗೆ ಬಂದ ಆರೋಪಿ ಶಭರೀಶ್‌ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಸಂಬಂಧ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ನಧಾಪ್‌ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.