ಸಾರ್ವಜನಿಕರ ಸೊತ್ತು ರಕ್ಷಿಸುವ ನಿಟ್ಟಿನಲ್ಲಿ ಲಾಕರ್ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕನ್ನ ಹಾಕಲು ಯತ್ನಿಸಿದರೆ ಕೂಡಲೇ ಹತ್ತಿರದ ಪೋಲಿಸ್ ಠಾಣೆ ಮತ್ತು ನೋಂದಣಿಯಾದ 10 ಮೊಬೈಲ್‌ಗೆ ಸಂದೇಶ ರವಾನೆಯಾಗಲಿದೆ.
ಬೆಂಗಳೂರು(ಜ.28): ಸಾರ್ವಜನಿಕರ ಹಣ, ಆಸ್ತಿ ರಕ್ಷಿಸುವ ನಿಟ್ಟಿನಲ್ಲಿ ಬ್ಯಾಂಕ್, ದೇವಾಲಯ, ಆಭರಣ ಮಳಿಗೆ, ಸಮುದಾಯ ಕೇಂದ್ರಗಳು ಅತ್ಯಾಧುನಿಕ ತಂತ್ರಜ್ಞಾನದ ಲಾಕರ್‌ಗಳನ್ನು ಹೊಂದುವ ಅಗತ್ಯತೆ ಇದೆ ಎಂದು ಕರ್ನಾಟಕ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ
ಸೇಫ್ ಲಾಕರ್‌ಗಳನ್ನು ಉತ್ಪಾದಿಸುವ ಗುನ್ನೆಬೊ ಇಂಡಿಯಾ ಕಂಪನಿ ಬಸವನಗುಡಿ ಆರ್.ವಿ. ರಸ್ತೆಯಲ್ಲಿ ಆರಂಭಿಸಿದ ಹೊಸ ಕೇಂದ್ರವನ್ನು ಉದ್ಘಾಟಿ ಸಿದ ಅವರು, ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ಪೊಲೀಸರಿಗೆ ಸಾರ್ವಜನಿಕರ ಆಸ್ತಿ ರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ.
ಬಾಲ್ ಎಸೆಯಿರಿ, ಕಸವನ್ನಲ್ಲ; ಸ್ವಚ್ಛ ನಗರಕ್ಕಾಗಿ BBMP ಹೊಸ ಐಡಿಯಾ
ಪೊಲೀಸರಿಗೆ ಪೂರಕವಾಗಿ ಈ ಗುನ್ನೆಬೊ ಲಾಕರ್‌ಗಳನ್ನು ತಯಾರಿಸಲಾಗಿದೆ. ಲಾಕರ್‌ಗಳಿಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು, ಕನ್ನ ಹಾಕಲು ಯತ್ನಿಸಿದರೆ ಕೂಡಲೇ ಹತ್ತಿರದ ಪೋಲಿಸ್ ಠಾಣೆ ಮತ್ತು ನೋಂದಣಿಯಾದ 10 ಮೊಬೈಲ್‌ಗೆ ಸಂದೇಶ ರವಾನೆಯಾಗಲಿದೆ ಎಂದರು. ಗುನ್ನೆಬೊ ಸೇಫ್ ಸ್ಟೊರೇಜ್ ಉಪಾಧ್ಯಕ್ಷ ರಾಮ್ ಶ್ರೀನಿವಾಸನ್, ಸೇಫ್ ಡಿಪಾಸಿಟ್ ಲಾಕರ್ಸ್, ವಾಲ್ಟ್ ಮತ್ತು ಸ್ಟ್ರಾಂಗ್ ರೂಮ್ ಡೋರ್ಸ್, ಫೈರ್ ರೆಸಿಸ್ಟೆಂಟ್ ಸೇಫರ್‌ಗಳು (ಅಗ್ನಿ ನಿರೋಧಕ ಲಾಕರ್‌ಗಳು), ಫೈಲಿಂಗ್ ಕ್ಯಾಬಿನೆಟ್ ಮತ್ತು ಫೈರ್ ಸೇಫ್ಟಿ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ತಿಳಿಸಿದ್ದಾರೆ.