50, 100 ದಂಡ ಕಟ್ಟಿ ಮತ್ತೆ ತಪ್ಪು ಮಾಡೋರಿಗಾಗಿ ಹೊಸ ಟ್ರಾಫಿಕ್ ರೂಲ್ಸ್‌: ಮಾಧುಸ್ವಾಮಿ

By Kannadaprabha NewsFirst Published Sep 7, 2019, 2:38 PM IST
Highlights

ಬೈಕ್ ಸವಾರರಿಗೆ, ಆಟೋ ಚಾಲಕರಿಗೆ ದುಬಾರಿ ಫೈನ್ ಹಾಕುವ ನಿಯಮದ ಬಗ್ಗೆ ಕಾನೂನು‌ ಸಚಿವ ಮಾಧುಸ್ವಾಮಿ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಿಂದೆ 50, 100 ರೂಪಾಯಿ ದಂಡ ಕಟ್ಟಿ ಮತ್ತೆ ಅದೇ ತಪ್ಪನ್ನು ಮಾಡ್ತಿದ್ರು. ಅದನ್ನು ತಪ್ಪಿಸೋಕೆ ಹೊಸ ರೂಲ್ಸ್‌ ತರಲಾಗಿದೆ ಎಂದಿದ್ದಾರೆ.

ತುಮಕೂರು(ಸೆ.07): ಹಿಂದೆ 50, 100 ರೂಪಾಯಿ ದಂಡ ಕಟ್ಟಿ ಮತ್ತೆ ಅದೇ ತಪ್ಪನ್ನು ಮಾಡ್ತಿದ್ರು. ಅದನ್ನು ತಪ್ಪಿಸೋಕೆ ಹೊಸ ಟ್ರಾಫಿಕ್ ರೂಲ್ ಮಾಡಲಾಗಿದೆ ಎಂದು ಕಾನೂನು‌ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಬೈಕ್ ಸವಾರರಿಗೆ, ಆಟೋ ಚಾಲಕರಿಗೆ ದುಬಾರಿ ಫೈನ್ ಹಾಕುವ ನಿಯಮದ ಬಗ್ಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿ, ಬೈಕ್ ಸವಾರರಿಗೆ, ಆಟೋ ಚಾಲಕರಿಗೆ ದುಬಾರಿ ಫೈನ್ ನಿಯಮ ತರಲಾಗಿದೆ ಎಂದಿದ್ದಾರೆ.

ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸಿದರೆ ಡಬಲ್‌ ದಂಡ!

ಕೆಲವರನ್ನ ಹಾಗೆ ಬಿಟ್ರೆ ಕಾನೂನಿನ ಮೇಲೆ ಭಯ ಬರೊಲ್ಲ, ಐವತ್ತೋ ನೂರೋ ಕೊಟ್ಟು ಹೋಗ್ತಾರೆ. ಆಮೇಲೆ ಮಾಮೂಲಿಯಾಗಿ ಓಡಾಡೋಕೆ ಶುರುಮಾಡ್ತಾರೆ. ಅಂಥವರನ್ನ ಕಂಟ್ರೋಲ್ ಮಾಡೋಕೆ ಅಂತ ಈ ನೀತಿ ತರಲಾಗಿದೆ ಎಂದು ಹೇಳಿದ್ದಾರೆ.

ಕಲೆಕ್ಷನ್‌ಗಿಂತ ಕರಪ್ಶನ್‌ ಜಾಸ್ತಿ:

ಇನ್ನು ಟ್ರಾಫಿಕ್ ಪೊಲೀಸರು ಲಂಚ ಪಡೆಯುವ ಬಗ್ಗೆ ಪ್ರತಿಕ್ರಿಯಿಸಿ, ಟ್ರಾಫಿಕ್ ಪೊಲೀಸರು ಲಂಚ ಪಡೆಯೋದನ್ನ ಯಾವ ಕಾನೂನು ಮಾಡಿದ್ರೂ ತಪ್ಪಿಸೋಕಾಗಲ್ಲ. ಕಲೆಕ್ಷನ್‌ಗಿಂತ ಕರಪ್ಶನ್‌ ಜಾಸ್ತಿಯಾಗಿದೆ. ಎಲ್ಲಿ ಟ್ಯಾಕ್ಸ್ ಜಾಸ್ತಿಯಾಗುತ್ತೋ ಅಲ್ಲಿ ಕರಪ್ಷನ್ ಜಾಸ್ತಿಯಾಗುತ್ತೆ. ಬಟ್ ಈ ನೀತಿ ಬಹಳದಿನ ನಡೆಯಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್‌ ದಂಡಕ್ಕೆ ಸವಾರರು ಹೈರಾಣು!

click me!