ರೈಲು ನಿಲ್ದಾಣದಲ್ಲಿ ಹೊಸ ನಿಯಮ ಜಾರಿ: ಸಾರ್ವಜನಿಕರ ಆಕ್ರೋಶ

Kannadaprabha News   | Asianet News
Published : Feb 19, 2020, 11:44 AM ISTUpdated : Feb 19, 2020, 12:40 PM IST
ರೈಲು ನಿಲ್ದಾಣದಲ್ಲಿ ಹೊಸ ನಿಯಮ ಜಾರಿ: ಸಾರ್ವಜನಿಕರ ಆಕ್ರೋಶ

ಸಾರಾಂಶ

ರೈಲು ನಿಲ್ದಾಣದಲ್ಲಿ ‘ಓವರ್‌ ಸ್ಟೇ ಶುಲ್ಕ’ಕ್ಕೆ ಆಕ್ರೋಶ| ಜನರನ್ನು ಇಳಿಸಲು ಬರುವ ವಾಹನಗಳಿಗೆ 7 ನಿಮಿಷ ಮಾತ್ರ ಉಚಿತ| ಬಳಿಕ ಪ್ರತಿ 5 ನಿಮಿಷಕ್ಕೆ 25 ಪಾವತಿಸಬೇಕು| ಕಾರು ಪಾರ್ಕಿಂಗ್‌ ಶುಲ್ಕವೂ ಏರಿಕೆ|

ಬೆಂಗಳೂರು(ಫೆ.19): ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಹೊಸದಾಗಿ ಜಾರಿಗೊಳಿಸಿರುವ ‘ಓವರ್‌ ಸ್ಟೇ ಶುಲ್ಕ’ ಸಾರ್ವಜನಿಕರು ಹಾಗೂ ವಾಹನ ಚಾಲಕರ ಆಕ್ರೋಶ ಕಾರಣವಾಗಿದೆ.

ರೈಲು ನಿಲ್ದಾಣದ ಆವರಣ ಪ್ರವೇಶಿಸುವ ವಾಹನಗಳು ಮೊದಲ ಏಳು ನಿಮಿಷ ಮಾತ್ರ ಉಚಿತವಾಗಿ ನಿಲ್ಲಬಹುದು. ನಂತರದ ಪ್ರತಿ ಐದು ನಿಮಿಷಕ್ಕೆ 25 ರು. ಪಾವತಿಸಬೇಕು. ಅಂದರೆ, ಪ್ರಯಾಣಿಕರನ್ನು ಇಳಿಸಲು ಅಥವಾ ಕರೆದೊಯ್ಯಲು ಬರುವ ವಾಹನಗಳು ಉಚಿತವಾಗಿ ಏಳು ನಿಮಿಷ ಮಾತ್ರ ಆವರಣದಲ್ಲಿ ಇರಬಹುದು. ನಂತರವೂ ಅಲ್ಲೇ ಇದ್ದರೆ ಪ್ರತಿ ಐದು ನಿಮಿಷಕ್ಕೆ 25 ಪಾವತಿಸಬೇಕು. ಈ ಹೊಸ ಶುಲ್ಕದ ವಿರುದ್ಧ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಇಲ್ಲದ ಶುಲ್ಕ ಈಗೇಕೆ ಎಂದು ಪ್ರಶ್ನಿಸುವ ಚಾಲಕರು, ಈ ಓವರ್‌ ಸ್ಟೇ ಶುಲ್ಕ ರೈಲು ಟಿಕೆಟ್‌ ದರಕ್ಕಿಂತ ಹೆಚ್ಚಿದೆ ಎಂದು ಕಿಡಿಕಾರಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಾಹನಗಳು ರೈಲು ನಿಲ್ದಾಣದ ಆವರಣ ಪ್ರವೇಶಿಸಿದಾಗ ಸಿಬ್ಬಂದಿ ರಸೀದಿ ನೀಡುತ್ತಾರೆ. ಈ ರಸೀದಿಯಲ್ಲಿ ವಾಹನ ನೋಂದಣಿ ಸಂಖ್ಯೆ, ನಿಲ್ದಾಣ ಪ್ರವೇಶಿಸಿದ ಸಮಯ ನಮೂದಾಗುತ್ತದೆ. ನಂತರ ನಿರ್ಗಮ ದ್ವಾರದ ಬಳಿ ಹೋಗುವಾಗ ಸಿಬ್ಬಂದಿ ಆ ರಸೀದಿ ಪಡೆದು ನೋಡುತ್ತಾರೆ. ಏಳು ನಿಮಿಷಕ್ಕಿಂತ ಕಡಿಮೆ ಇದ್ದರೆ ಯಾವುದೇ ಶುಲ್ಕ ಪಡೆಯುವುದಿಲ್ಲ. ಏಳು ನಿಮಿಷದ ಮೇಲೆ ಒಂದು ನಿಮಿಷ ಹೆಚ್ಚುವರಿ ಆಗಿದ್ದರೂ 25 ರು. ವಸೂಲಿ ಮಾಡುತ್ತಿದ್ದಾರೆ. ಇದು ಶುಲ್ಕ ಸಿಬ್ಬಂದಿ ಹಾಗೂ ಚಾಲಕರ ನಡುವೆ ಮಾತಿನ ಚಕಮಕಿ, ವಾಗ್ವಾದಗಳಿಗೂ ಕಾರಣವಾಗುತ್ತಿದೆ.

ಬೈಕ್‌ ಪಾರ್ಕಿಂಗ್‌ ಶುಲ್ಕ ಭಾರೀ ಏರಿಕೆ

ಇಷ್ಟು ದಿನ ಕೆಎಸ್‌ಆರ್‌ ರೈಲು ನಿಲ್ದಾಣದಿಂದಲೇ ವಾಹನಗಳ ಪಾರ್ಕಿಂಗ್‌ ನಿರ್ವಹಣೆ ಮಾಡಲಾಗುತ್ತಿತ್ತು. ಇದೀಗ ಭಾರತೀಯ ರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮ(ಐಆರ್‌ಎಸ್‌ಡಿಸಿ)ಕ್ಕೆ ವಹಿಸಲಾಗಿದೆ. ಇದರ ಬೆನ್ನಲ್ಲೇ ವಾಹನಗಳ ಪಾರ್ಕಿಂಗ್‌ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಮೊದಲ 2 ಗಂಟೆಗೆ .15 ನಂತರದ ಪ್ರತಿ 2 ಗಂಟೆಗೆ 10 ಹಾಗೂ 24 ಗಂಟೆಗೆ 125 ಏರಿಸಲಾಗಿದೆ. ಈ ಹಿಂದೆ ಮೊದಲ 2 ಗಂಟೆಗೆ 10 ಹಾಗೂ 24 ಗಂಟೆಗೆ 50 ಶುಲ್ಕ ಪಡೆಯಲಾಗುತ್ತಿತ್ತು.

ಅಂತೆಯೆ ಕಾರು ಪಾರ್ಕಿಂಗ್‌ ಶುಲ್ಕವನ್ನೂ ಏರಿಕೆ ಮಾಡಿದ್ದು, ಮೊದಲ ಎರಡು ಗಂಟೆಗೆ 25 ಹಾಗೂ ನಂತರದ ಪ್ರತಿ ಎರಡು ಗಂಟೆಗೆ 20ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ವಾಹನ ಮಾಲಿಕರು ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆಗೊಳಿಸಿ ಪಡೆಯುವ ರಸೀದಿಯನ್ನು ಕಳೆದುಕೊಂಡರೆ 500 ದಂಡ ವಿಧಿಸುವುದಾಗಿ ತಿಳಿಸಲಾಗಿದೆ.

ದ್ವಿಚಕ್ರವಾಹನ ಪಾರ್ಕಿಂಗ್‌ ಶುಲ್ಕ

ಮೊದಲ 2 ಗಂಟೆ 15
ನಂತರದ ಪ್ರತಿ 2 ಗಂಟೆ 10

ಕಾರು ಪಾರ್ಕಿಂಗ್‌ ಶುಲ್ಕ

ಮೊದಲ 2 ಗಂಟೆ 25
ನಂತರದ ಪ್ರತಿ 2 ಗಂಟೆ 20

ಓವರ್‌ ಸ್ಟೇ ಶುಲ್ಕ

ಮೊದಲ ಏಳು ನಿಮಿಷ ಉಚಿತ
ನಂತರದ ಪ್ರತಿ 5 ನಿಮಿಷಕ್ಕೆ 25

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"

PREV
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!