ಗರ್ಲ್‌ಫ್ರೆಂಡ್‌ಗಾಗಿ ಬೈಕ್ ಕದ್ದ ರೋಮಿಯೋ..!

Suvarna News   | Asianet News
Published : Feb 19, 2020, 11:18 AM ISTUpdated : Feb 19, 2020, 04:07 PM IST
ಗರ್ಲ್‌ಫ್ರೆಂಡ್‌ಗಾಗಿ ಬೈಕ್ ಕದ್ದ ರೋಮಿಯೋ..!

ಸಾರಾಂಶ

ಗೆಳತಿಯನ್ನು ಇಂಪ್ರೆಸ್ ಮಾಡಲು ಯುವಕರು ಏನೇನು ಮಾಡ್ತಾರೆ ಗೊತ್ತಾ..? ಇಲ್ಲೊಬ್ಬ ರೋಮಿಯೋ ಗರ್ಲ್‌ಫ್ರೆಂಡ್‌ಗಾಗಿ ಯಮಹ ಬೈಕನ್ನೇ ಕದ್ದಿದ್ದಾನೆ. ಮುಮದೇನಾಯ್ತು ಇಲ್ಲಿ ಓದಿ..!  

ಹಾಸನ(ಫೆ.19): ಗೆಳತಿಯನ್ನು ಇಂಪ್ರೆಸ್ ಮಾಡಲು ಯುವಕರು ಏನೇನು ಮಾಡ್ತಾರೆ ಗೊತ್ತಾ..? ಇಲ್ಲೊಬ್ಬ ರೋಮಿಯೋ ಗರ್ಲ್‌ಫ್ರೆಂಡ್‌ಗಾಗಿ ಯಮಹ ಬೈಕನ್ನೇ ಕದ್ದಿದ್ದಾನೆ. OLXನಲ್ಲಿ ಗ್ರಾಹಕನ ಸೋಗಿನಲ್ಲಿ ಬೈಕ್‌ ಪಟಾಯಿಸಿದ್ದಾನೆ.

"

ಗೆಳತಿಗಾಗಿ ಬೈಕ್ ಕದ್ದು ಸಿಕ್ಕಿಬಿದ್ದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ನಡೆದಿದೆ. ಗೆಳತಿ ಜೊತೆ ಸುತ್ತಾಡಲು OLX ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳತನ ಮಾಡಿದ್ದಾನೆ. ಖರೀದಿ ಮಾಡೋದಾಗಿ ಸಂಪರ್ಕಿಸಿ ಟೆಸ್ಟ್ ಡ್ರೈವ್‌ಗೆಂದು ಹೋಗಿ ಎಸ್ಕೇಪ್ ಆಗಿದ್ದ. ಆಲೂರು ತಾಲೂಕು ಮೂಲದ ಪ್ರಮೋದ್(19) ಬಂಧಿತ ಆರೋಪಿ.

ಗರ್ಭಿಣಿಯರಿದ್ದ ರಿಕ್ಷಾ ಭೀಕರ ಅಪಘಾತ: ಒಬ್ಬ ಗರ್ಭಿಣಿ ಸಾವು

ಶ್ರವಣಬೆಳಗೊಳದ ಪುನೀತ್ ತಮ್ಮ ಯಮಹ ಬೈಕ್ ಮಾರಾಟದ ಬಗ್ಗೆ OLXನಲ್ಲಿ ಜಾಹಿರಾತು ನೀಡಿದ್ದರು. ಈ ಮಾಹಿತಿ ಆಧರಿಸಿ ಮಾಲೀನಕನ್ನ ಸಂಪರ್ಕಿಸಿದ್ದ ಪ್ರಮೋದ್ ಫೆಬ್ರವರಿ 9 ರಂದು ಬೈಕ್ ಖದೀದಿಗೆಂದು ಶ್ರವಣಬೆಳಗೊಳಕ್ಕೆ ತೆರಳಿ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ. ಬೈಕ್ ಮಾಲೀಕ ಶ್ರವಣಬೆಳಗೊಳ ಠಾಣೆಯಲ್ಲಿ ಕಳ್ಳತನದ ಬಗ್ಗೆ ದೂರು ನೀಡಿದ್ದರು. ನಿನ್ನೆ ಪೋಲೀಸರು ಹಾಸನದ ರೈಲ್ವೆ ನಿಲ್ದಾಣದ ಬಳಿ ಬೈಕ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!