ಹೊಸ ವಿನ್ಯಾಸದ ಬಟ್ಟೆ ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು

By Kannadaprabha News  |  First Published Jan 9, 2023, 6:22 AM IST

ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಕಿವಿಮಾತು ಹೇಳಿದರು.


  ಮೈಸೂರು(ಜ.09):  ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉತ್ಪಾದಿಸಿ ಗ್ರಾಹಕರನ್ನು ಆಕರ್ಷಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಕಿವಿಮಾತು ಹೇಳಿದರು.

ನಗರದಲ್ಲಿ ಭಾನುವಾರ ರೀಡ್‌ ಅಂಡ್‌ ಟೇಲರ್‌ ರಜನ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಉತ್ಕೃಷ್ಟ ದರ್ಜೆಯ ಉತ್ಪನ್ನಗಳನ್ನು ಉತ್ಪಾದಿಸಿದಷ್ಟು ಗ್ರಾಹಕರಿಗೆ ಅನುಕೂಲವಾಗುತ್ತದೆ. ಹೊಸ ಹೊಸ ವಿನ್ಯಾಸದ ಉತ್ಪಾದಿಸಬೇಕು. ಆಗ ಗ್ರಾಹಕರು ಆಕರ್ಷಿತರಾಗುತ್ತಾರೆ ಎಂದರು.

Latest Videos

undefined

ಜೋಸೆಫ್‌ ಟಾಯ್ಲರ್‌ ಎಂಬವರಿಂದ ಬ್ರಾಂಡ್‌ 1830ರಲ್ಲಿ ಆರಂಭವಾಯಿತು. ನಂತರ, 1998ರಲ್ಲಿ ಭಾರತ ದೇಶದಲ್ಲಿ ಆರಂಭವಾಯಿತು. ಮೈಸೂರಿನಲ್ಲಿ ರೀಡ್‌ ಅಂಡ್‌ ಟೇಲರ್‌ ಆರಂಭವಾಗಿ 25 ವರ್ಷಗಳನ್ನು ಪೂರೈಸಿದೆ. ಈ ಕಂಪನಿಯು ಹಲವಾರು ಏಳು-ಬೀಳು ಕಂಡು ಪ್ರಗತಿ ಸಾಧಿಸಿದೆ ಎಂದರು.

ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸುವ ಮೂಲಕ ಗ್ರಾಹಕರ ಆಕರ್ಷಣೆಗೆ ತಕ್ಕಂತೆ ಒದಗಿಸಿದರೆ ಉತ್ತಮ. ಹೊಸ ಶೈಲಿಯ ಗುಣಮಟ್ಟದ ಶೂಟಿಂಗ್‌ ಶರ್ಚ್‌ಗಳನ್ನು ನೀಡಿದರೆ ಆಕರ್ಷಿಸಬಹುದು ಎಂದರು.

ಕಂಪನಿಯ ಛೇರ್ಮನ್‌ ಹಾರ್ದಿಕ್‌ ಪಟೇಲ್‌ ಮಾತನಾಡಿ, ದೇಶದ ಗುಜರಾತ್‌ ಬರೂಚ ನಗರ, ಕರ್ನಾಟಕದ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಘಟಕವಿದ್ದು, 2500 ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಎರಡು ಕಂಪೆನಿಗಳಿಂದ . 900 ಕೋಟಿ ಬಂಡವಾಳ ಹೂಡಿದ್ದು, ಶೂಟಿಂಗ್‌ ಶರ್ಚ್‌ಗಳಿಗಾಗಿಯೇ . 300 ಕೋಟಿ ತೊಡಗಿಸಲಾಗಿದೆ ಎಂದರು.

ಹಾರ್ದಿಕ್‌ ಪಟೇಲ್‌ ಪತ್ನಿ ಶ್ವೇತಾ ಪಟೇಲ್‌ ಅವರು 2023ನೇ ಸಾಲಿನ ಕ್ಯಾಟಲಾಗ್‌ ಬಿಡುಗಡೆಗೊಳಿಸಿದರು. ಕಂಪೆನಿಯ ಸಿಇಒ ಅಜಯ್‌ ಅಗರ್ವಾಲ್‌, ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌ನ ಹಿರಿಯ ಉಪಾಧ್ಯಕ್ಷ ಸಚಿನ್‌ ಹೊನ್ಮೊಡೆ ಇದ್ದರು.

ಮಗುವಿಗೆ ಹೆಚ್ಚು ಬಟ್ಟೆ ಹಾಕಬೇಡಿ

ಚಳಿಗಾಲವು (Winter) ತುಂಬಾ ಆಹ್ಲಾದಕರವಾಗಿರುತ್ತದೆ ಮತ್ತು ಬಹುಶಃ ಪ್ರತಿಯೊಬ್ಬರೂ ಬೇಸಿಗೆ ಮತ್ತು ಮಳೆಗಿಂತ ಚಳಿಗಾಲವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೂ, ಈ ವಾತಾವರಣದಲ್ಲಿ ಬೆಚ್ಚಗಿರದಿದ್ದರೆ ಬೇಗನೇ ಕಾಯಿಲೆಗೆ (Disease) ತುತ್ತಾಗಬಹುದು. ಅದರಲ್ಲೂ ಮಕ್ಕಳ ಆರೋಗ್ಯ (Health) ತುಂಬಾ ಸೂಕ್ಷ್ಯ. ಹಾಗಾಗಿ ಅವರನ್ನು ಚಳಿಯಿಂದ ರಕ್ಷಿಸಿ ಬೆಚ್ಚಗೆ ಇರಿಸಿಕೊಳ್ಳುವುದು ಮುಖ್ಯ. ಎರಡು ವರ್ಷ ವಯಸ್ಸಿನವರೆಗೆ, ಮಕ್ಕಳು ವಯಸ್ಕರಂತೆ ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಶೀತ ವಾತಾವರಣದಲ್ಲಿ ಅವರ ದೇಹ (Body) ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಸಾಕ್ಸ್‌, ಗ್ಲೌಸ್‌, ಸ್ವೆಟರ್ ತೊಡಿಸಬೇಕು. ಆದರೆ ಚಳಿಗಾಲದಲ್ಲಿ ಮಗುವಿನ ದೇಹವನ್ನು ಅತಿಯಾಗಿ ಬಿಸಿಯಾಗಿ ಇಡುವುದು ಸಹ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಅನ್ನೋದು ನಿಮಗೆ ಗೊತ್ತಿರಲಿ.

ಶೀತದಿಂದ ರಕ್ಷಿಸಲು ಮತ್ತು ಬೆಚ್ಚಗಾಗಲು ಬಂದಾಗ, ಮನಸ್ಸಿಗೆ ಬರುವ ಮೊದಲ ಆಲೋಚನೆಯು ಮಗುವಿಗೆ ಹೆಚ್ಚು ಬಟ್ಟೆಗಳನ್ನು ತೊಡಿಸುವುದು. ಆದರೆ ಇದು ಸರಿಯಾದ ಕ್ರಮವಲ್ಲ. ಇದು ಮಗುವಿನಲ್ಲಿ ಹಠಾತ್ ಶಿಶು ಸಾವಿನ ಸಿಂಡ್ರೋಮ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಿತಿಮೀರಿದ ಚಳಿಯಲ್ಲಿ ನಿಮ್ಮ ಮಗುವನ್ನು ಬೆಚ್ಚಗಿಡುವುದನ್ನು ಸಮತೋಲನ ಮಾಡುವುದು ಕಷ್ಟಕರ ಕೆಲಸವಾಗಿದೆ. ಹಾಗಿದ್ರೆ ಚಳಿಗಾಲದಲ್ಲಿ ಮಗುವನ್ನು ಬೆಚ್ಚಗಿಡುವುದು ಹೇಗೆ ನಾವ್ ತಿಳಿಸ್ತೀವಿ.

Ayurveda Tips : ಚಳಿಗಾಲದಲ್ಲಿ ಕಫ ಹೆಚ್ಚು ಮಾಡುತ್ತಾ ಮೊಸರು?

ಮಕ್ಕಳಿಗೆ ಮಲಗುವಾಗ ಏನನ್ನು ತೊಡಿಸಬೇಕು ?
ಚಳಿಗಾಲದಲ್ಲಿ, ಮಗುವಿನ ಕೈಗಳು ಮತ್ತು ಪಾದಗಳು ಸುಲಭವಾಗಿ ತಣ್ಣಗಾಗುತ್ತವೆ. ಆದ್ದರಿಂದ ನೀವು ಅವರ ದೇಹ ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಉಣ್ಣೆ ಮತ್ತು ಲಘು ಉಣ್ಣೆಯ ಉಡುಪುಗಳಲ್ಲಿ ಮಗುವಿಗೆ ತೊಡಿಸಿ. ಕೈಗಳಿಗೆ ಕೈಗವಸುಗಳನ್ನು ಮತ್ತು ಕಾಲುಗಳಿಗೆ ಸಾಕ್ಸ್‌ಗಳನ್ನು ಹಾಕಿ. ಹೆಚ್ಚು ಬಟ್ಟೆಗಳನ್ನು ಧರಿಸುವುದರಿಂದ ಮಗುವಿಗೆ ತುರಿಕೆ ಉಂಟಾಗುತ್ತದೆ, ಆದ್ದರಿಂದ ಹಾಗೆ ಮಾಡುವುದನ್ನು ತಪ್ಪಿಸಿ.

click me!