Mysuru : ಹಿಂದುಳಿದವರಿಗೆ ಶಿಕ್ಷಣ ಪ್ರಮುಖ ಅಸ್ತ್ರ

By Kannadaprabha NewsFirst Published Jan 9, 2023, 5:59 AM IST
Highlights

ಹಿಂದುಳಿದ ಸಮಾಜಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಒಂದೇ ಪ್ರಮುಖ ಅಸ್ತ್ರ. ಪೋಷಕರು ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಿ ಎಂದು ಮೈಸೂರು ನಗರ ಪಾಲಿಕೆ ಉಪ ಮೇಯರ್‌ ಡಾ.ಜಿ. ರೂಪಾ ಯೋಗೀಶ್‌ ಹೇಳಿದರು.

 ನಂಜನಗೂಡು (ಜ. 09):  ಹಿಂದುಳಿದ ಸಮಾಜಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ ಒಂದೇ ಪ್ರಮುಖ ಅಸ್ತ್ರ. ಪೋಷಕರು ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಿ ಎಂದು ಮೈಸೂರು ನಗರ ಪಾಲಿಕೆ ಉಪ ಮೇಯರ್‌ ಡಾ.ಜಿ. ರೂಪಾ ಯೋಗೀಶ್‌ ಹೇಳಿದರು.

ಪಟ್ಟಣದ ಶ್ರೀಕಂಠೇಶ್ವರ ಮಂಗಳ ಮಂಟಪದಲ್ಲಿ ಭಗೀರಥ ಉಪ್ಪಾರ ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದಲ್ಲಿದ ಅರಿವಿನ ಕೊರತೆಯಿಂದ ಸಮುದಾಯ ಬಹಳಷ್ಟುಹಿಂದಿದೆ. ಸಮಾಜ ಮುಖ್ಯವಾಹಿನಿಗೆ ಬರಲು ಶಿಕ್ಷಣಕ್ಕೆ ಉತ್ತೇಜನ ನೀಡುವುದು ಅವಶ್ಯಕ. ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ವಿದ್ಯಾರ್ಥಿ ವೇತನ ಸೌಲಭ್ಯ ಕಲ್ಪಿಸಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ವ್ಯಾಸಾಂಗವನ್ನು ಮುಂದುವರೆಸಬೇಕು. ಸಂಘಟನೆಗಳೂ ಕೂಡ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸುವ ಮೂಲಕ ಅವರ ವ್ಯಾಸಾಂಗಕ್ಕೆ ನೆರವು ನೀಡಿ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಜಗನ್ನಾಥ್‌ ಮಾತನಾಡಿ, ದೇಶದಲ್ಲಿ ಶತಮಾನಗಳಿಂದ ಶೇ. 8ರಷ್ಟಿರುವ ಜನರು ನಮ್ಮನ್ನು ಆಳುತ್ತಿದ್ದಾರೆ. ಅವರು ಶಕ್ತಿಯಿಂದ ಆಳ್ವಿಕೆ ಮಾಡುತ್ತಿಲ್ಲ ಬದಲಾಗಿ ಅವರಲ್ಲಿರುವ ಜ್ಞಾನದ ಶಕ್ತಿಯಿಂದ ಆಳ್ವಿಕೆ ಮಾಡುತ್ತಿದ್ದಾರೆ. ಆದ್ದರಿಂದ ಹಿಂದುಳಿದ ಸಮುದಾಯಗಳಿಗೆ ಅರಿವು, ತಿಳುವಳಿಕೆ ಮೂಡಿದಾಗ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಆದ್ದರಿಂದ ನಮ್ಮ ದುಡಿಮೆಯ ಕೆಲ ಭಾಗವನ್ನು ಅನ್ನ ಮತ್ತು ಜ್ಞಾನ ದಾಸೋಹಕ್ಕೆ ನೀಡಿದಾಗ ಭವಿಷ್ಯದಲ್ಲಿ ಸಮುದಾಯ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಭಡ್ತಿ ಪಡೆದ ಅಧಿಕಾರಿಗಳು ಮತ್ತು ರಷ್ಯದ ವೈದ್ಯಕೀಯ ಅಧ್ಯಯನ ಯುನಿವರ್ಸಿಟಿಯ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಈ ವೇಳೆ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು.

ಸಮಾರಂಭದಲ್ಲಿ ಉದ್ಯಮಿ ಎಚ್‌.ಆರ್‌. ಬಂಡಿ, ಜಿಪಂ ಮಾಜಿ ಸದಸ್ಯೆ ಲತಾ ಸಿದ್ದಶೆಟ್ಟಿ, ನಗರಸಭಾ ಉಪಾಧ್ಯಕ್ಷೆ ನಾಗಮಣಿ, ಮುಖಂಡರಾದ ನಾಗರಾಜು, ಕನಕನಗರ ಮಹದೇವು, ತಾಪಂ ಮಾಜಿ ಸದಸ್ಯರಾದ ಮೂಗಶೆಟ್ಟಿ, ಅಣ್ಣಯ್ಯಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದು ಮಾದಶೆಟ್ಟಿ, ನಗರಸಭಾ ಸದಸ್ಯರಾದ ಮಹದೇವಮ್ಮ, ಶಶಿಕಲಾ, ಸೌಮ್ಯಾ, ನೌಕರರ ಸಂಘದ ಜವರಶೆಟ್ಟಿ, ಮಹದೇವಪ್ರಸಾದ್‌, ಶಿವಣ್ಣ, ಚಿಕ್ಕಸ್ವಾಮಿ, ನಾಗರಾಜು, ಎಂ. ಕುಮಾರ್‌ ಮೊದಲಾದ ಪ್ರಮುಖರು ಇದ್ದರು.

ಭಾರತೀಯ ಚಿಂತನೆಗಳ ಬೆಳವಣಿಗೆ

ಉಡುಪಿ(ಜ.09):  ಪ್ರಾಚೀನ ಸನಾತನ ಚಿಂತನೆಯೇ ನಿಜವಾದ ಭಾರತೀಯ ಚಿಂತನೆಯಾಗಿದ್ದು, ಇದನ್ನು ಬೆಳೆಸುವ ನೂತನ ರಾಷ್ಟ್ರೀಯ ಶಿಕ್ಷಣ ದೇಶದಲ್ಲಿ ಜಾರಿಯಾಗುತ್ತಿದೆ. ಇದಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳು ಸಿದ್ಧವಾಗಬೇಕಾಗಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಬಾಕರ ಭಟ್‌ ಹೇಳಿದರು.

ಅವರು ರೂರಲ್‌ ಎಜ್ಯುಕೇಶನ್‌ ಸೊಸೈಟಿ ಆಶ್ರಯದಲ್ಲಿ ಪಟ್ಲದ ವಿದ್ಯಾನಗರ ಯು.ಎಸ್‌. ಪ್ರೌಢಶಾಲೆಯ ನೂತನ ವಿಶ್ವಂಭರ ಶಿಶುಮಂದಿರ, ಶಿವಕೃಪಾ ಶಿಕ್ಷಕರ ವಸತಿಗೃಹ ಮತ್ತು ಕೇಶವ ಕೃಪಾ ವಿದ್ಯಾರ್ಥಿನಿಲಯಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀರಾಮನ ಆದರ್ಶ ತಿಳಿಸುವುದು ಅನಿವಾರ್ಯ: ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇದುವರೆಗಿನ ಮಾನವೀಯತೆ ಇಲ್ಲದ, ಬದುಕನ್ನು ಕಲಿಸದ, ಪ್ರತಿಭೆಗೆ ಅವಕಾಶ ಇಲ್ಲದ ಶಿಕ್ಷಣದಿಂದ ಬಿಡುಗಡೆಯಾಗಿ, ಅನುಶಾಸನ ಮತ್ತು ಸ್ವಾಭಿಮಾನವನ್ನು ಬೆಳೆಸುವ ಶಿಕ್ಷಣ ನಮ್ಮ ಮುಂದಿನ ಪೀಳಿಗೆಗೆ ದೊರೆಯಲಿದೆ ಎಂದವರು ಹೇಳಿದರು. ಅತಿಥಿಗಳಾಗಿ ನೇತ್ರತಜ್ಞ ಡಾ. ಕೃಷ್ಣಪ್ರಸಾದ್‌, ಗುತ್ತಿಗೆದಾರ ಶಿವಪ್ರಸಾದ್‌ ಹೆಗ್ಡೆ ಆಗಮಿಸಿದ್ದರು.

click me!