ಕಾಫಿನಾಡಿನಲ್ಲಿ ರಸ್ತೆಗೆ ಇಳಿಯುತ್ತಿದೆ ಹೊಸ ಹೊಸ ಕಾರುಗಳು: ಕಾಫಿ ಬೆಳೆಗಾರರಿಗೆ ಬಂಪರ್ ರೇಟ್

Published : Apr 30, 2025, 08:11 PM ISTUpdated : Apr 30, 2025, 08:20 PM IST
ಕಾಫಿನಾಡಿನಲ್ಲಿ ರಸ್ತೆಗೆ ಇಳಿಯುತ್ತಿದೆ ಹೊಸ ಹೊಸ ಕಾರುಗಳು: ಕಾಫಿ ಬೆಳೆಗಾರರಿಗೆ ಬಂಪರ್ ರೇಟ್

ಸಾರಾಂಶ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕಾಫಿ, ಕಾಳು ಮೆಣಸು ಕೈಹಿಡಿದಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.30): ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕಾಫಿ, ಕಾಳು ಮೆಣಸು ಕೈಹಿಡಿದಿದೆ. ಕಾಫಿ ಬೆಳೆಗಾರರಿಗೆ ಬಂಪರ್ ರೇಟ್ ಸಿಕ್ರೆ  ಸರ್ಕಾರಕ್ಕೆ ಅಧಿಕ ತೆರಿಗೆ ಸಂಗ್ರಹವಾಗುತ್ತಿದೆ. ಮಾರುಕಟ್ಟೆಯಲ್ಲಿ ಕಾರ್ ಗಳ ಭರ್ಜರಿ ಸೇಲ್ ಆಗುತ್ತಿದ್ದು ಶೋರೂಮ್ ಗಳಿಗೆ ಶುಕ್ರದಸೆ ಎದುರಾಗಿದೆ. 

ರಸ್ತೆಗೆ ರಸ್ತೆಗೆ ಇಳಿಯುತ್ತಿದೆ ಹೊಸ ಕಾರ್ ಗಳು: ಪ್ರಪಂಚದಲ್ಲೇ ಭಾರತ ಕಾಫೀಯನ್ನು ಉತ್ಪಾದಿಸುವ ಪ್ರಮುಖ ದೇಶವಾಗಿದೆ. ಅದರಲ್ಲೂ ನಮ್ಮ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಾತ್ರ ಪ್ರಧಾನವಾಗಿದೆ. ಬಾಬಾಬುಡುನ್  ಗಿರಿಯಲ್ಲಿ ಬೆಳೆದ ಅರೇಬಿಕಾ ಕಾಫಿಯ ತಳಿ ಇಂದು ಎಲ್ಲೆಡೆ ಪ್ರಸರಿಸಿದೆ. ಕಾಫಿಯ ಮದುರ ಸುವಾಸನೆ, ವಿಶಿಷ್ಟ ಪರಿಮಳಯಿಂದ ವಿಶ್ವದ್ಯಾಂತ ಖ್ಯಾತಿಗಳಿಸಿದೆ. ಒಂದು ಅಂದಾಜಿನ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 56,995 ಹೆಕ್ಟೇರ್ ನಲ್ಲಿ ಅರೇಬಿಕಾ, 31,565 ಹೆಕ್ಟೇರ್ ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಕಾಫಿ ತೋಟದ ನಡುವೆ ಬೆಳೆಗಾರರು ಉಪಬೆಳೆನ್ನಾಗಿ ಕಾಳು ಮೆಣಸನ್ನು ಕೂಡ ಅತೀ ಹೆಚ್ಚಾಗಿದೆ ಬೆಳೆಯುತ್ತಿದ್ದಾರೆ. 

ಕಾಂಗ್ರೆಸ್ ನಿಜವಾದ ಜಾತ್ಯಾತೀತ ಪಕ್ಷ: ಸಚಿವ ಕೆ.ಜೆ.ಜಾರ್ಜ್

ಇದೀಗ ಕಾಫಿ, ಹಾಗೂ ಕಾಳು ಮೆಣಸಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿದೆ. ಇದು ಬೆಳೆಗಾರರಿಗೆ ವರದಾನವಾಗಿ ಪರಿಣಾಮಿಸಿದೆ. ಕಳೆದ ಹಲವು ದಶಕಗಳಿಂದಲೂ ಕಾಫಿ, ಕಾಳು ಮೆಣಸುಗೆ ದರ ಕುಸಿತದಿಂದ ಕಂಗಾಲಾಗಿದ್ದ ಬೆಳೆಗಾರರಿಗೆ ಈ ಸಲ ಕಾಫಿ , ಮೆಣಸು ಕೈ ಹಿಡಿದಿದೆ. ಇದರಿಂದ ಲಾಭದತ್ತ ಇರುವ ಬೆಳೆಗಾರರು ಹೊಸ ಕಾರ್ ಗಳನ್ನು ಖರೀದಿಗೆ ಮುಗ್ಗಿಬಂದಿದ್ದಾರೆ. ಇದರಿಂದ ಕಾಫಿನಾಡಿನ ಶೋರೂಮ್ ಗಳಿಗೆ ಶುಕ್ರದಸೆ ಎದುರಾಗಿದೆ. ಕಾಫಿನಾಡಿನಲ್ಲಿ ನಿತ್ಯವೂ ಶೋರೂಮ್ ಗಳಿಗೆ ಹೊಸ ಹೊಸ ಕಾರ್ ಗಳು ರಸ್ತೆ ರಸ್ತೆಗೆ ಇಳಿಯುತ್ತಿದೆ. 

6 ತಿಂಗಳು 5ಸಾವಿರಕ್ಕೂ ಅಧಿಕ ಕಾರ್ ಸೇಲ್: ವಿಶ್ವಕ್ಕೆ ಕಾಫಿಯ ಸ್ವಾಧವನ್ನ ಸಪರಿಸಿದ ಜಿಲ್ಲೆಯಲ್ಲಿ ಈಗ ಕಾರು ಖರೀದಿಯ ಅಬ್ಬರ ಜೋರಾಗಿದೆ.ಆರು ತಿಂಗಳಲ್ಲಿ ಹೈಫೈ ಕಾರು ಸೇರಿ ಕಾರುಗಳು ಖರೀದಿಯಾಗಿದ್ದು ಬರೊಬ್ಬರಿ 5777. ಇವೆಲ್ಲವೂ ಜಿಲ್ಲೆಯ ಒಳಗೆ ಇರೋದು. ಯಾಕೇಂದ್ರೆ ಎಲ್ಲವೂ ರಿಜಿಸ್ಡ್ರೇಷನ್ ಅಗಿದ್ದು ಚಿಕ್ಕಮಗಳೂರು ಅರ್ ಟಿ ಓ ಕಚೇರಿ.ಕೆಎ 18 ವಾಹಗಳೇ. ಈ ಖರೀದಿಯ ಹಿಂದೆ ಇರೋ ಕಾಫಿ, ಕಾಳು ಮೆಣಸು. ಇನ್ನೂ ಕಾರು ಮಾತ್ರ ವಲ್ಲದೆ 3330 ಬೈಕ್, 224 ಟ್ರಾಕ್ಟರ್, ಅರು ಬಸ್ ರಿಜಿಸ್ಟ್ರೇಷನ್ ಅಗಿದೆ.

ಅಕ್ರಮ ಸಂಬಂಧಕ್ಕಾಗಿ ಲವರ್ ಜೊತೆ ಸೇರಿ ಪತಿಯನ್ನೇ ಕೊಂದ ಪತ್ನಿ!

ಕಾರು ಎಲ್ಲವೂ ಸೇರಿ 13 ಸಾವಿರ ವಾಹನಗಳು ಒಂದೇ ವರ್ಷದಲ್ಲಿ ನೊಂದಾಣಿಯಾಗಿರೋದು.ಕಾಫಿ ಕಾಳು ಮೆಣಸು ರೇಟ್ ರೈಸ್ ನೊಂದಿಗೆ ಅತೀ ಹೆಚ್ಚು ವಾಹನ ಖರೀದಿಸೋ ಮೂಲಕ ಸರ್ಕಾರಕ್ಕೆ ಅತೀ ಹೆಚ್ಚು ಟಾಕ್ಸ್ ಕಟ್ಟಿದ್ದಾರೆ ಕಾಫಿನಾಡಿಗರು.ಒಟ್ಟಾರೆ ಆರೇ ತಿಂಗಳಲ್ಲಿ ಅತೀ ಹೆಚ್ಚು ಕಾರ್ ರೋಡಿಗಿಳಿದೆ.ಈ ಮೂಲಕ ಸದಾ ಸಂಕಷ್ಟದಲ್ಲಿದ್ದ ಕಾಫಿಬೆಳೆಗಾರರು ಈ ಸಲ ಮುಂದಹಾಸದಲ್ಲಿ ರೇಟ್ ರೈಸ್ ಅಯ್ತು ಹೊಸ ವಾಹನಗಳ ಖರೀದಿಯುತ್ತ ಮುಖಮಾಡಿದ್ದಾರೆ.

PREV
Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್