ಶಿಕಾರಿಪುರಕ್ಕೆ ನೂತನ ಬಸ್‌ ಡಿಪೋ ಮಂಜೂರು

By Kannadaprabha NewsFirst Published Sep 11, 2019, 7:52 AM IST
Highlights

ಶಿಕಾರಿಪುರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಆರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.  ಕುಟ್ರಹಳ್ಳಿ ಬಳಿ ಕೃಷಿ ಇಲಾಖೆಗೆ ಸಂಬಂಧಿಸಿದ 5 ಎಕರೆ ಜಾಗ ಗುರುತಿಸಲಾಗಿದೆ. ಮುಖ್ಯಮಂತ್ರಿಗಳ ಕಾಳಜಿಯ ಮೇರೆಗೆ ಕೃಷಿ ಇಲಾಖೆಯಿಂದ ಸಾರಿಗೆ ಇಲಾಖೆಗೆ ಜಾಗ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದಿದ್ದಾರೆ.

ಶಿವಮೊಗ್ಗ(ಸೆ.11): ಶಿಕಾರಿಪುರ ತಾಲೂಕಿನ ಕುಟ್ರಹಳ್ಳಿ ಸಮೀಪ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೋ ಆರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.

ಪಟ್ಟಣದಿಂದ ಉಡುಪಿ, ಶಿವಮೊಗ್ಗ ಮಾರ್ಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್‌ಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಹೆಚ್ಚಳಕ್ಕೆ ಸ್ಥಳೀಯರಿಂದ ಅತಿ ಹೆಚ್ಚಿನ ಒತ್ತಡವಿದ್ದು, ಈ ದಿಸೆಯಲ್ಲಿ ಪಟ್ಟಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಣಿಪಾಲ ಮೂಲಕ ಉಡುಪಿ 10 ಗಂಟೆಗೆ ತಲುಪಲಿದೆ. ಮಧ್ಯಾಹ್ನ 2 ಗಂಟೆಗೆ ವಾಪಾಸ್ಸು ಹೊರಟು ರಾತ್ರಿ 7 ಗಂಟೆಗೆ ತಲುಪಲಿದೆ ಎಂದು ಹೇಳಿದ್ದಾರೆ.

ಕೃಷಿ ಇಲಾಖೆಗೆ ಸಂಬಂಧಿಸಿದ 5 ಎಕರೆ ಜಾಗ ಗುರುತು:

ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಸದೃಢಗೊಳಿಸಲು ಸಮೀಪದ ಕುಟ್ರಹಳ್ಳಿ ಬಳಿ ಕೃಷಿ ಇಲಾಖೆಗೆ ಸಂಬಂಧಿಸಿದ 5 ಎಕರೆ ಜಾಗ ಗುರುತಿಸಲಾಗಿದೆ. ಮುಖ್ಯಮಂತ್ರಿಗಳ ಕಾಳಜಿಯ ಮೇರೆಗೆ ಕೃಷಿ ಇಲಾಖೆಯಿಂದ ಸಾರಿಗೆ ಇಲಾಖೆಗೆ ಜಾಗ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಡಿಪೋ ಆರಂಭಗೊಳ್ಳಲಿದ್ದು ಇದರಿಂದ ನಿತ್ಯ 50-60 ಬಸ್‌ಗಳು ರಾಜ್ಯಾದ್ಯಂತ ಸಂಚರಿಸಲಿದೆ.

ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಆಧುನೀಕರಣ:

ಈ ದಿಸೆಯಲ್ಲಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರನ್ನು, ಅಭಿನಂದಿಸುವುದಾಗಿ ಹೇಳಿದರು. ಖಾಸಗಿ ಬಸ್‌ ನಿಲ್ದಾಣ ಹಾಗೂ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣ ಹಲವೆಡೆ ಹೆಚ್ಚು ದೂರವಿದ್ದು, ಪಟ್ಟಣದಲ್ಲಿ ಮಾತ್ರ ಅಕ್ಕಪಕ್ಕದಲ್ಲಿದೆ. ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣದ ಆಧುನೀಕರಣಕ್ಕೆ 1 ಕೋಟಿ ಮಂಜೂರಾತಿಗೆ ಪ್ರಕ್ರಿಯೆ ಚಾಲನೆಯಲ್ಲಿದ್ದು ಶೀಘ್ರದಲ್ಲಿಯೇ ಮಂಜೂರಾತಿ ದೊರೆಯಲಿದೆ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ದೊರಕಿಸಲಾಗುವುದು ಎಂದು ಸಂಸದ ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯುವಕ ಯತ್ನ..ವೈರಲ್ ವಿಡಿಯೋ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಕೆ.ಎಸ್‌ ಗುರುಮೂರ್ತಿ, ಸಾರಿಗೆ ನಿಗಮದ ವಿಭಾಗೀಯ ಸಂಚಲನಾಧಿಕಾರಿ ಸತೀಶ್‌, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಚನ್ನವೀರಪ್ಪ, ಪುರಸಭಾ ಸದಸ್ಯ ಪಾಲಾಕ್ಷಪ್ಪ, ರೇಣುಕಸ್ವಾಮಿ, ಮುಖ್ಯಾಧಿಕಾರಿ ಸುರೇಶ್‌ ಮುಖಂಡ ವಸಂತಗೌಡ, ಹಾಲಪ್ಪ, ಬಿ.ಡಿ ಭೂಕಾಂತ್‌, ನಾಗರಾಜಪ್ಪ, ಶಿವಪ್ಪಯ್ಯಡಿ.ಎಸ್‌ ಈಶ್ವರಪ್ಪ, ಸುಕೇಂದ್ರಪ್ಪ, ಅಂಗಡಿ ಜಗದೀಶ, ಸುಬಾಷಚಂದ್ರ ಸ್ಥಾನಿಕ್‌, ಹಳ್ಳೂರು ಪರಮೇಶ್ವರಪ್ಪ, ದಿಲೀಪಕುಮಾರ್‌, ಮಹೇಂದ್ರ ಇದ್ದರು.

ವಿಚಿತ್ರ ಶಬ್ದ ಎಲ್ಲಿಂದ ಬರುತ್ತಿದೆ? ಪಶ್ಚಿಮ ಘಟ್ಟ ವಾಸಕ್ಕೆ ಅಪಾಯಕಾರಿಯೇ?

click me!