ಬಿಜೆಪಿಯಿಂದ ಮತ್ತೆ ಜೆಡಿಎಸ್‌ಗೆ ವಾಪಸ್ : ಇಬ್ಬರ ಪಕ್ಷಾಂತರ ಗಾಳಿ ಸುದ್ದಿಗೆ ಉತ್ತರ

Kannadaprabha News   | Asianet News
Published : Sep 29, 2021, 04:05 PM ISTUpdated : Sep 29, 2021, 04:27 PM IST
ಬಿಜೆಪಿಯಿಂದ ಮತ್ತೆ ಜೆಡಿಎಸ್‌ಗೆ ವಾಪಸ್ : ಇಬ್ಬರ ಪಕ್ಷಾಂತರ ಗಾಳಿ ಸುದ್ದಿಗೆ ಉತ್ತರ

ಸಾರಾಂಶ

 ರಾಜ ಕೀಯ ನಿವೃತ್ತಿ ಪಡೆದ ನಂತರ ಸಚಿವ ಕೆ.ಸಿ.ನಾರಾಯಣ ಗೌಡರ ನಾಯಕತ್ವ ಬೆಂಬಲಿಸಿ ಬಿಜೆಪಿ ಸೇರಿದ್ದೇವೆ. ಬಿಜೆಪಿ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ 

ಕೆ.ಆರ್.ಪೇಟೆ (ಸೆ.29): ಬಿಜೆಪಿ (BJP) ಬಿಟ್ಟು ಜೆಡಿಎಸ್ (JDS) ಪಕ್ಷಕ್ಕೆ ಮತ್ತೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಜಿಪಂ ಮಾಜಿ ಸದಸ್ಯ ರಾದ ಶೀಳನೆರೆ ಅಂಬರೀಶ್ ಮತ್ತು ಅಫಲಯ ಮಂಜುನಾಥ್ ಸ್ಪಷ್ಟಪಡಿಸಿದರು.

 ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಿ.ಮಾಜಿ ಸ್ಪೀಕರ್ ಕೃಷ್ಣರು ರಾಜ ಕೀಯ ನಿವೃತ್ತಿ ಪಡೆದ ನಂತರ ಸಚಿವ ಕೆ.ಸಿ.ನಾರಾಯಣ ಗೌಡರ (K.C.Narayana Gowda) ನಾಯಕತ್ವ ಬೆಂಬಲಿಸಿ ಬಿಜೆಪಿ ಸೇರಿದ್ದೇವೆ.

 ಸಚಿವರ ಆಪ್ತ ಸಹಾಯಕ ಜೆಡಿಎಸ್ ಸೇರಿದ ನಂತರ ನಾವೂ ಸೇರಲಿದ್ದೇವೆ ಎನ್ನುವುದು ಗಾಳಿ ಸುದ್ದಿ ಎಂದರು. ನಾವು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು. ರಾಜಕೀಯ ಅಳಿವು ಉಳಿವು ಬಿಜೆಪಿಯಲ್ಲಿಯೇ ಅಂತ್ಯಗೊಳ್ಳಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ನಾಯಕತ್ವ ಮೆಚ್ಚಿ ಅಂದು ತಾಲೂಕಿನ ಬಹುತೇಕ ಮಾಜಿ ಸ್ಪೀಕರ್ ಕೃಷ್ಣ ಬೆಂಬಲಿಗರು ಬಿಜೆಪಿ ಸೇರಿದ್ದೇವೆ. 

ವರಿಷ್ಠರ ಭರವಸೆ : ರಾಜೀನಾಮೆ ನಿರ್ಧಾರ ಕೈ ಬಿಟ್ಟ ಜೆಡಿಎಸ್ ಮುಖಂಡ

ಸಚಿವ ಕೆ.ಸಿ.ನಾರಾಯಣಗೌಡರು ಪಕ್ಷದ ವೇದಿಕೆಯಲ್ಲಿ ನಮ್ಮನ್ನು ಗುರುತಿಸುವ ಕೆಲಸ ಮಾಡಿದ್ದಾರೆ ಎಂದರು. ಕೆಸಿಎನ್ ನಾಯಕತ್ವದಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಲ್ಲಿ ನಮಗೆ ಉತ್ತಮ ಸಹಕಾರವಿರುವಾಗ ನಾವು ಮತ್ತೆ ಜೆಡಿಎಸ್ ಪಕ್ಷಕ್ಕೆ ಹಿಂತಿರುಗುವ ಅಗತ್ಯವಿಲ್ಲ. ಆ ಬಗ್ಗೆ ಎಂದೂ ಚಿಂತಿಸಿಲ್ಲ. ಸ್ವಪಕ್ಷೀಯರೂ ಸೇರಿದಂತೆ ಕೆಲವರು ನಮ್ಮ ಬಗ್ಗೆ ಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹ ವದಂತಿಗೆ ನಮ್ಮ ಬೆಂಬಲಿಗರು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಕಿವಿಗೊಡಬಾರದು ಹೇಳಿದರು.

ಜೆಡಿಎಸ್‌ಗೆ ಮರಳಿ ಪಯಣ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ (KC Narayanagowda) ಆಪ್ತ ಕಾರ್ಯದರ್ಶಿ ದಯಾನಂದ (Dayananda) ಜೆಡಿಎಸ್ (JDS) ಪಕ್ಷಕ್ಕೆ ಸೇರ್ಪಗೊಂಡಿದ್ದಾರೆ. 

ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ದಯಾನಂದ ಅವರನ್ನು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿದರು. ಪಕ್ಷಕ್ಕೆ ಮುಂದೆ ಒಳ್ಳೆಯ ದಿನಗಳು ಬರಲಿವೆ. ಕಾರ್ಯಕರ್ತರು ನಿರಾಸೆಗೆ ಒ ಳಗಾಗಬಾರದು. ಸಚಿವರಿಂದ ದೂರವಾಗಿ ನಮ್ಮ ಪಕ್ಷಕ್ಕೆ ಬಂದಿರುವ ನೀವು ಪಕ್ಷ ಕ್ಕಾಗಿ ಪ್ರಾಮಾಣಿಕವಾಗಿ ದುಡಿದರೆ ಪಕ್ಷ ನಿಮ್ಮನ್ನು ಗುರುತಿಸುತ್ತದೆ ಎಂದರು. ಕಳೆದೊಂದ ದಶಕದಿಂದ ನಾರಾಯಣಗೌಡರ ಎಲ್ಲ ಯಶಸ್ಸಿನ ಮುಖ್ಯ ಪಾತ್ರಧಾರಿಯಾಗಿದ್ದ ದಯಾನಂದ ಕಳೆದ ಮೂರ್ನಾಲ್ಕು ತಿಂಗಳಿಂದ ಸಚಿವರಿಂದ ಅಂತರ ಕಾಯ್ದುಕೊಂಡಿದ್ದರು.

 ಸಚಿವರಿಂದ ಮುನಿಸಿಕೊಂಡು ದೂರವಿದ್ದ ದಯಾನಂದ ಅವರನ್ನು ಜೆಡಿಎಸ್ (JDS) ತೆಕ್ಕೆಗೆ ಕರೆತರಲು ಮನ್ಮುಲ್ ನಿರ್ದೇಶಕಎಚ್ .ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕ ತೆರ್ನೇನಹಳ್ಳಿ ಬಾಲು ಸೇರಿದಂತೆ ಹಲವರು ಪ್ರಯತ್ನ ನಡೆಸಿ ಪಕ್ಷ ಸೇರ್ಪಡೆಗೆ ಅಗತ್ಯ ವೇದಿಕೆ ಸಿದ್ಧಪಡಿಸಿದರು. 

2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ: ಸಿದ್ದರಾಮಯ್ಯಗೆ ಎಚ್‌ಡಿಕೆ ಪರೋಕ್ಷ ಚಾಲೆಂಜ್

ದೂರವಾಣಿಯ ಮೂಲಕ ತಮ್ಮ ಪಕ್ಷ ಸೇರ್ಪಡೆ ಬಗ್ಗೆ ಅಭಿಪ್ರಾಯ ಹಂಚಿ ಕೊಂಡ ದಯಾನಂದ ನಾನು ಸಚಿವ ಕೆ.ಸಿ.ನಾರಾಯಣಗೌಡರು ಜೆಡಿಎಸ್ ಪಕ್ಷ ದಲ್ಲಿದ್ದಾಗ ಮತ್ತು ಆ ನಂತರ ಅವರು ಬಿಜೆಪಿ (BJP) ಸೇರ್ಪಡೆಯಾಗಿ ಮಂತ್ರಿಯಾಗುವ ವರೆಗೂ ಅವರ ನಿಷ್ಠಾವಂತನಾಗಿ ಕೆಲಸ ಮಾಡಿದ್ದೇನೆ. ಸಚಿವರ ವರ್ಚಸ್ಸಿಗೆ ಕುಂದುತರುವ ಯಾವುದೇ ಕೆಲಸ ನಾನು ಮಾಡಲಿಲ್ಲ ಎಂದರು.

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು