ಸಿಎಂ ಭೇಟಿಗೆ ಬಿಡದ ಪೊಲೀಸರು: ಕಣ್ಣೀರಿಟ್ಟ ನೆಟ್‌ಬಾಲ್‌ ಆಟಗಾರ್ತಿ

By Kannadaprabha NewsFirst Published Jul 30, 2023, 9:14 AM IST
Highlights

ಸಿಎಂಗೆ ತಮ್ಮ ಅಹವಾಲು ಕೊಡಲು ಬಂದ ತಾಯಿ-ಮಗಳು, ಮುಖ್ಯಮಂತ್ರಿ ಭೇಟಿಗೆ ಬಿಡದ ಪೊಲೀಸರು, ಬೆಂಬಲಿಗರು, ರಾಷ್ಟ್ರೀಯ ನೆಟ್‌ಬಾಲ್‌ ಆಟಗಾರ್ತಿ ಶಬಾನಾ ಕಣ್ಣೀರಿಟ್ಟು ಅಸಹಾಯಕತೆ. 

ಮಂಡ್ಯ(ಜು.30): ರಾಷ್ಟ್ರೀಯ ನೆಟ್‌ಬಾಲ್‌ ಆಟಗಾರ್ತಿಯೊಬ್ಬರು ತಮ್ಮ ಆರೋಗ್ಯ ಸಮಸ್ಯೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಹವಾಲು ಕೊಡಲು ಬಂದಾಗ ತಾಯಿ-ಮಗಳನ್ನು ಭೇಟಿಯಾಗಲು ಪೊಲೀಸರು ಹಾಗೂ ಬೆಂಬಲಿಗರು ಅವಕಾಶ ನೀಡದಿರುವ ಘಟನೆ ಶನಿವಾರ ಜರುಗಿತು.

ಸಿದ್ದರಾಮಯ್ಯರನ್ನ ಭೇಟಿ ಮಾಡಲು ಸಾಧ್ಯವಾಗದಿರುವುದಕ್ಕೆ ರಾಷ್ಟ್ರೀಯ ನೆಟ್‌ಬಾಲ್‌ ಆಟಗಾರ್ತಿ ಶಬಾನಾ ಕಣ್ಣೀರು ಹಾಕಿದರು. ಬಿಎ ಪದವಿ ಓದಿರುವ ಶಬಾನಾ ರಾಷ್ಟ್ರೀಯ ನೆಟ್‌ಬಾಲ್‌ ಆಟಗಾರ್ತಿಯಾಗಿದ್ದು, 2012ರಲ್ಲಿ ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ನೆಟ್‌ಬಾಲ್‌ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ್ದರು.

Latest Videos

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 10 ಕಿ.ಮೀ.ಗೆ ಒಂದು ಸ್ಪೀಡ್‌ ಡಿಟೆಕ್ಟರ್‌: ಸಿಎಂ ಸಿದ್ದರಾಮಯ್ಯ

2018ರಲ್ಲಿ ಶಬಾನಾಗೆ ಡಿವಿಟಿ ಎಂಬ ನರರೋಗ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ಪಡೆಯುವ ವೇಳೆ ಮಾತ್ರೆ ಇನ್‌ಫೆಕ್ಷನ್‌ ಆಗಿ ಕಾಲನ್ನೇ ತೆಗೆಯಬೇಕಾದ ಪರಿಸ್ಥಿತಿ ಎದುರಾಯಿತು. ಬಡ ಕುಟುಂಬದಲ್ಲಿ ಹುಟ್ಟಿರುವ ಶಬಾನಾಗೆ ವಾಸಿಸಲು ಸ್ವಂತ ಮನೆ ಕೂಡ ಇಲ್ಲ. ವಯಸ್ಸಾದ ತಾಯಿಯೊಂದಿಗಿರುವ ಶಬಾನಾ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ತೆರಳಲು ಪ್ರಯತ್ನಿಸಿದರೂ ಅವಕಾಶವೇ ಸಿಗದೆ ಅಸಹಾಯಕರಾಗಿ ಕಣ್ಣೀರಿಟ್ಟರು.

click me!