ಹೊನ್ನಾವರ ಫ್ರೆಂಡ್ಸ್ ಗ್ರೂಪ್ ಇನ್ ಎಂಎಸ್‌ವಿ ಮೀಡಿಯಾ’ ಮತ್ತು ‘ಯಂಗ್ ಒನ್ ಇಂಡಿಯಾ’ ವಿರುದ್ಧ ಬಿಜೆಪಿ ಮಂಡಲಾಧ್ಯಕ್ಷರು ದೂರು ನೀಡಿದ ಬಿಜೆಪಿ
ಭಟ್ಕಳ(ಜು.30): ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಗೂ ಮೇಸೆಜ್ ಹಾಕಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಅಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಶನಿವಾರ ಇಲ್ಲಿನ ಬಿಜೆಪಿ ಮಂಡಳದ ವತಿಯಿಂದ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ‘ಹೊನ್ನಾವರ ಫ್ರೆಂಡ್ಸ್ ಗ್ರೂಪ್ ಇನ್ ಎಂಎಸ್‌ವಿ ಮೀಡಿಯಾ’ ಮತ್ತು ‘ಯಂಗ್ ಒನ್ ಇಂಡಿಯಾ’ ವಿರುದ್ಧ ಬಿಜೆಪಿ ಮಂಡಲಾಧ್ಯಕ್ಷರು ದೂರು ನೀಡಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿಗಳ ಮಾನಹಾನಿ, ತೇಜೋವಧೆಯಂತಹ ಸಂದೇಶ ಹಾಕಲಾಗಿದೆ. ಇದು ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ. ದೇಶದ ಪ್ರಧಾನಿ ವಿರುದ್ಧ ಇಂತಹ ಅವಮಾನಕರ ಕೃತ್ಯ ನಡೆಸುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
undefined
ಉತ್ತರಕನ್ನಡ: ಅಡಿಕೆ ಬೆಳೆಗೆ ಕಂಟಕವಾದ ಮಳೆ, ಕಂಗಾಲಾದ ರೈತ..!
ದೂರು ಸಲ್ಲಿಸುವಾಗ ಸುಬ್ರಾಯ ದೇವಡಿಗ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶಿವಾನಿ ಶಾಂತರಾಮ ಭಟ್ಕಳ, ಮಾಜಿ ಸೈನಿಕರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಶ್ರೀಕಾಂತ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಮಂಡಲದ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರಿದ್ದರು.