ನೇತಾಜಿ ಅಪ್ರತಿಮ ಹೋರಾಟಗಾರ: ಅಪ್ಪು ಪಾಟೀಲ್‌

By Kannadaprabha News  |  First Published Jan 24, 2023, 6:11 AM IST

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ 126ನೇ ಜಯಂತಿ ಕಾರ್ಯಕ್ರಮವನ್ನು ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಆಚರಿಸಲಾಯಿತು.


 ತುಮಕೂರು :  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ 126ನೇ ಜಯಂತಿ ಕಾರ್ಯಕ್ರಮವನ್ನು ತುಮಕೂರು ವಿವಿ ಕಲಾ ಕಾಲೇಜಿನಲ್ಲಿ ಆಚರಿಸಲಾಯಿತು.

ಎಬಿವಿಪಿ ತುಮಕೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್‌ ಮಾತನಾಡಿ, ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡುತ್ತಲೇ ಭಾರತೀಯರಲ್ಲಿ ರಾಷ್ಟ್ರಭಕ್ತಿಯ ಪ್ರಬಲ ಕಿಡಿಯನ್ನು ಹೊತ್ತಿಸಿದ ಹೋರಾಟಗಾರಈ ದೇಶ ಕಂಡ ಅಪ್ರತಿಮ ನಾಯಕ. ನನಗೆ ರಕ್ತ ಕೊಡಿ, ನಿಮಗೆ ನಾನು ಕೊಡುತ್ತೇನೆ ಎಂದು ಘಂಟಾಘೋಷವಾಗಿ ಉದ್ಘೋಷಿಸಿದ, ಭಾರತದ ಸ್ವತಂತ್ರ್ಯಕ್ಕಾಗಿ ಹಲವಾರು ದೇಶಗಳ ನಾಯಕರ, ಮುತ್ಸದ್ದಿಗಳ ಬೆಂಬಲ ಗಳಿಸಿದ ಅಪ್ರತಿಮ ಪ್ರಖರ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಎಂದು ಹೇಳಿದರು.

Tap to resize

Latest Videos

ಬೋಸ್‌ರವರು ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಬಹುವಾಗಿ ಪ್ರಭಾವಿತರಾದವರು. ಬಾಲ್ಯದಿಂದಲೇ ಅಸಾಮಾನ್ಯ ಪ್ರತಿಭಾವಂತರಾಗಿದ್ದ ಅವರು ಕೆಲ ಕಾಲ ಆಧ್ಯಾತ್ಮ ಸಾಧನೆಗಾಗಿ ಹಿಮಾಲಯಕ್ಕೆ ಹೋಗಿದ್ದುಂಟು. ಹೆತ್ತವರ ಆಸೆಯಂತೆ ಐಪಿಎಸ್‌ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ತೆರಳಿ ಎಂಟು ತಿಂಗಳ ಕಠಿಣ ಪರಿಶ್ರಮದಿಂದ ನಾಲ್ಕನೇ ರಾರ‍ಯಂಕಿನಲ್ಲಿ ಉತ್ತೀರ್ಣರಾದ ಮೇಧಾವಿ. ಆದರೂ ಹೆಚ್ಚಿನ ಸಂಬಳ, ಸ್ಥಾನಮಾನದ ಸರ್ಕಾರಿ ನೌಕರಿಯನ್ನು ನಿರಾಕರಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರು ಎಂದರು.

ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷರ ಸರ್ಕಾರಕ್ಕೆ ತನ್ನ ಪ್ರಖರ ನಿಲುವುಗಳಿಂದಲೇ ಬಿಸಿ ಮುಟ್ಟಿಸಿದ್ದರು. ಆಜಾದ್‌ ಹಿಂದ್‌  ಫೌಜ್ (ಇಂಡಿಯನ್‌ ನ್ಯಾಷನಲ್‌ ಆರ್ಮಿ-ಐಎನ್‌ಎ) ಎಂಬ ಸೇನೆಯನ್ನು ಕಟ್ಟಿಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದರು. ಅಪ್ರತಿಮ ದೇಶಭಕ್ತರಾಗಿದ್ದ ಬೋಸ್‌ ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶದಲ್ಲಿ ಸುತ್ತಾಡಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಕಾಡಿದ್ದರು ಎಂದು ಹೇಳಿದರು.

ತುಮಕೂರು ನಗರದ ವಿವಿಧ ಕಾಲೇಜುಗಳಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ರವರ 126 ನೇ ಜಯಂತಿ ಕಾರ್ಯಕ್ರಮ ಮಾಡಲಾಯಿತು.

ಹರ್ಷವರ್ಧನ, ಸಿದ್ದಾರ್ಥ್, ಆಕಾಶ್‌, ಜೀವನ್‌, ವಿನಯ್‌, ಸಿದ್ದೇಶ್‌ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬೋಸ​ರ ಹೋರಾಟ, ವ್ಯಕ್ತಿತ್ವ ಯುವಕರಿಗೆ ಸ್ಪೂರ್ತಿಯಾಗಲಿ

-ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಝಾದ್‌ ಹಿಂದ್‌ ¶ೌಜ…ನಂತಹ ಸೈನ್ಯ ಕಟ್ಟಿಬ್ರಿಟಿಷರ ವಿರುದ್ಧ ತೊಡೆ ತಟ್ಟುವ ತಾಕತ್ತಿದ್ದಿದ್ದು ಸುಭಾಷಚಂದ್ರ ಬೋಸರಿಗೆ ಮಾತ್ರ, ತಾಯ್ನಾಡಿಗಾಗಿ ಅವರಲ್ಲಿ ಹೋರಾಟದ ಕಿಚ್ಚು, ವ್ಯಕ್ತಿತ್ವ ಯುವ ಜನತೆಗೆ ಸ್ಪೂರ್ತಿಯಾಗಲಿ ಎಂದು ಕೆಎಸ್‌ಎಸ್‌ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪ್ರೊ. ಎಸ್‌.ಆರ್‌. ನದಾಫ ಹೇಳಿದರು.

ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆಯ ಕೆಎಸ್‌ಎಸ್‌ ಮಹಾವಿದ್ಯಾಲಯದಲ್ಲಿ ಸೋಮ​ವಾ​ರ ಎನ್‌ಎಸ್‌ಎಸ್‌ ಘಟಕದ ವತಿಯಿಂದ ನೇತಾಜಿ ಸುಭಾಷಚಂದ್ರ ಬೋಸ್‌ ಅವರ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪರಾಕ್ರಮ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ದ್ವಿತೀಯ ಜಾಗತಿಕ ಯುದ್ದದ ಸಮಯವನ್ನು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ವ್ಯವಸ್ಥಿತವಾಗಿ ಬಳಸಿಕೊಳ್ಳಲು, ಜರ್ಮನಿಯ ಹಿಟ್ಲರ್‌ ಸ್ನೇಹ ಬೆಳಸಿ ಬಲಿಷ್ಠ ಆಂಗ್ಲರ ವಿರುದ್ದ ಆಝಾದ್‌ ಹಿಂದ್‌  ಫೌಜ್… ಎಂಬ ಸೇನೆ ಕಟ್ಟಿದಾಳಿ ಮಾಡಿ, ಭಾರತದ ಕೆಲ ಭೂ ಭಾಗಗಳನ್ನು ಸ್ವತಂತ್ರಗೊಳಿಸಿ ಭಾರತೀಯರ ಆಡಳಿತ ಸ್ಥಾಪಿಸಿದ್ದ ನೇತಾಜಿಯವರ ಧೈರ್ಯ ಮತ್ತು ಸಾಹಸ ಭಾರತೀಯ ಯುವಕರಿಗೆ ಸ್ಪೂರ್ತಿಯಾಗಿದೆ. ಶ್ರೀಮಂತ ಮನೆತನದಲ್ಲಿ ಜನಿಸಿ ಐಸಿಎಸ್‌ ಪರೀಕ್ಷೆ ಪಾಸು ಮಾಡಿದ್ದ ನೇತಾಜಿ ಎಲ್ಲವನ್ನು ತೊರೆದು ದೇಶಕ್ಕಾಗಿ ಸೇವೆ ಸಲ್ಲಿಸಲು ನಿರ್ಧರಿಸಿ, ಆಂಗ್ಲರಿಗೆ ಸಿಂಹಸ್ವಪ್ನರಾಗಿದ್ದು ನೇತಾಜಿ ಅವರ ಪರಾಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಜನ್ಮದಿನದಂದು ಭಾರತದ ಪ್ರತಿ ಮನೆಮನೆಗಳಲ್ಲಿ ನೇತಾಜಿಯಂತಹ ನಾಯಕರು ಜನ್ಮ ತಾಳಲಿ ಎಂದರು.

click me!