‘ಕಾಂಗ್ರೆಸ್‌ ಆರೋಪ ನಾಚಿಕೆಗೇಡಿನ ಸಂಗತಿ’ : ನಾರಾಯಣಸ್ವಾಮಿ

By Kannadaprabha NewsFirst Published Jan 24, 2023, 6:01 AM IST
Highlights

ಕಳೆದ ಐವತ್ತು ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಪರಿಶಿಷ್ಟಜಾತಿ ಮತ್ತು ಪಂಗಡದ ಜನಗಳು ಹೋರಾಟ ನಡೆಸುತ್ತಿದ್ದರೂ, ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಅತ್ತ ತಿರುಗಿಯೂ ನೋಡಲಿಲ್ಲ. ಈಗ ಬಿಜೆಪಿ ಪಕ್ಷ ಮಾಡಿದ ಕೆಲಸವನ್ನು ಕಣ್ಣೊರೆಸೋ ತಂತ್ರ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಂಎಲ್‌ಸಿ ಹಾಗೂ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಮುಖಂಡ ಚಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

 ತುಮಕೂರು :  ಕಳೆದ ಐವತ್ತು ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಪರಿಶಿಷ್ಟಜಾತಿ ಮತ್ತು ಪಂಗಡದ ಜನಗಳು ಹೋರಾಟ ನಡೆಸುತ್ತಿದ್ದರೂ, ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಅತ್ತ ತಿರುಗಿಯೂ ನೋಡಲಿಲ್ಲ. ಈಗ ಬಿಜೆಪಿ ಪಕ್ಷ ಮಾಡಿದ ಕೆಲಸವನ್ನು ಕಣ್ಣೊರೆಸೋ ತಂತ್ರ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಂಎಲ್‌ಸಿ ಹಾಗೂ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಮುಖಂಡ ಚಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ನಗರದ ಜಯಪುರ, ದಿಬ್ಬೂರಿನಲ್ಲಿ ನಗರ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಬೂತ್‌ ವಿಜಯ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು.

ಹೊಸದಾಗಿ ಎಸ್ಸಿ, ಎಸ್ಟಿಜಾತಿಗೆ ಬೇರೆ ಜಾತಿಗಳನ್ನು ಸೇರಿಸುತಿದ್ದರೇ ವಿನಹಃ ಅವರ ಮೀಸಲಾತಿ ಹೆಚ್ಚಳ ಮಾಡುವ ಮಾತೇ ಇರಲಿಲ್ಲ. ಈ ಸಮುದಾಯಗಳನ್ನು ಕೇವಲ ಓಟ್‌ ಬ್ಯಾಂಕಾಗಿ ಮಾತ್ರ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ಪರಿಗಣಿಸಿದ್ದವು ಎಂಬುದಕ್ಕೆ ಇದಕ್ಕಿಂತ ನಿರ್ದೇಶನ ಬೇಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಪಕ್ಷ ಎಂದಿಗೂ ದಲಿತರನ್ನು ಓಟ್‌ ಬ್ಯಾಂಕ್‌ ಎಂದು ಪರಿಗಣಿಸಿಲ್ಲ. ಅವರ ಸಮಗ್ರ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿದೆ ಎಂದರು.

ಬೂತ್‌ ವಿಜಯ ಸಂಕಲ್ಪ ಅಭಿಯಾನದ ಮೂಲಕ ಕಳೆದ ಇಷ್ಟುವರ್ಷಗಳಲ್ಲಿ ಬಿಜೆಪಿ ಸರ್ಕಾರ ಜನರಿಗಾಗಿ ಏನು ಮಾಡಿದೆಯೋ ಅದನ್ನು ಪ್ರತಿ ಮನೆ ಮನೆಗೆ ತಿಳಿಸುವುದೇ ಇದರ ಉದ್ದೇಶ. ಕಾಂಗ್ರೆಸ್‌ದು ಕುರ್ಚಿ ಹಿಡಿಯುವ ಅಭಿಯಾನ. ನಾವು ಗಾಳಿಯಲ್ಲಿ ಬಂದು ಗಾಳಿಯಲ್ಲಿ ಹೋಗುವವರಲ್ಲ. ಇಲ್ಲಿಯೇ ಇದ್ದು ಜನರೊಟ್ಟಿಗೆ ಬೆರೆತು ಕೆಲಸ ಮಾಡುವವರು. ಈ ಭಾಗದ ಶಾಸಕರಾಗಿ ಜ್ಯೋತಿಗಣೇಶ್‌ ಜನಮನ್ನಣೆ ಗಳಿಸಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ತುಮಕೂರು ನಗರದ ಚಿತ್ರಣವೇ ಬದಲಾಗಿದೆ. ಅವರ ಕೈಹಿಡಿಯುವ ಕೆಲಸವನ್ನು ಮತದಾರರು ಮಾಡಬೇಕೆಂದು ನಾರಾಯಣಸ್ವಾಮಿ ಮನವಿ ಮಾಡಿದರು.

ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಪಾಲಿಕೆ ಸದಸ್ಯರಾದ ವೀಣಾ ಮನೋಹರಗೌಡ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಟಿ.ಕೆ.ನರಸಿಂಹಮೂರ್ತಿ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಹನುಮಂತರಾಜು.ಟಿ.ಎಚ್‌, ನಗರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ, ವಿರೂಪಾಕ್ಷಪ್ಪ, ವಾರ್ಡ್‌ ಅಧ್ಯಕ್ಷರಾದ ಸಿದ್ದಲಿಂಗಯ್ಯ, ನವೀನ್‌, ಪಾಲಿಕೆ ನಾಮಿನಿ ಸದಸ್ಯರಾದ ಮಂಜುನಾಥ್‌, ಪ್ರತಾಪ್‌, ವಿಶ್ವನಾಥ್‌, ಯೋಗೀಶ್‌, ನರಸಿಂಹಮೂರ್ತಿ, ಬೂತ್‌ ಅಧ್ಯಕ್ಷ ಶ್ರೀನಿವಾಸ್‌, ಪರಮೇಶ್‌, ಶಶಿಧರ್‌, ಶಿವರಾಜು, ಶಿವಣ್ಣ, ಹತ್ಯಾಳಯ್ಯ, ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

click me!