ಹಗಲು ಸೆಕ್ಯೂರಿಟಿ ಕೆಲಸ, ರಾತ್ರಿ ವೇಳೆ ಕಳ್ಳತನ: ಸೆರೆ

By Kannadaprabha News  |  First Published Nov 16, 2019, 8:09 AM IST

ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ನೋಡಿಕೊಂಡು ರಾತ್ರಿ ವೇಳೆ ಮನೆ ಕಳವು ಮಾಡುತ್ತಿದ್ದ ನೇಪಾಳ ಮೂಲಕ ವ್ಯಕ್ತಿಯೋರ್ವನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. 


ಬೆಂಗಳೂರು [ನ.16]: ರಾತ್ರಿ ವೇಳೆ ಮನೆ ಕಳವು ಮಾಡುತ್ತಿದ್ದ ನೇಪಾಳ ರಾಜ್ಯದ ಆರೋಪಿಯೊಬ್ಬ ಬಾಣಸವಾಡಿ ಠಾಣೆ ಪೊಲೀಸರು ಬಲೆಗೆ ಬಿದ್ದಿದ್ದಾನೆ.

ಕಮಲ್‌ ಸಿಂಗ್‌ (28) ಬಂಧಿತ. ಆರೋಪಿಯಿಂದ 35 ಲಕ್ಷ ರು. ಮೌಲ್ಯದ 700 ಗ್ರಾಂ ತೂಕದ ಚಿನ್ನಾಭರಣ, ಯುಎಸ್‌ ಡಾಲ​ರ್ಸ್, ಬೆಲೆ ಬಾಳುವ ವಾಚ್‌ ಮನ್ ಗಳನ್ನು ಜಪ್ತಿ ಮಾಡಲಾಗಿದೆ. ಈತನ ಸಹಚರ ಮೋಹನ್‌ ಸಿಂಗ್‌ ಎಂಬಾತ ತಲೆಮರೆಸಿಕೊಂಡಿದ್ದ, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Latest Videos

undefined

ಆರೋಪಿ ಒಂದು ವಷರ್ದ ಹಿಂದೆ ನಗರಕ್ಕೆ ಬಂದು, ಪತ್ನಿ ಜತೆ ಕಿತ್ತಗನೂರು ಮುಖ್ಯರಸ್ತೆಯ ಹಳೇಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ಹೋಗುವಂತೆ ನಟಿಸುತ್ತಿದ್ದ. ತನ್ನ ಸಹಚರ ಮೋಹನ್‌ ಸಿಂಗ್‌ ಜತೆ ಹಗಲಿನಲ್ಲಿ ನಗರ ಸುತ್ತಾಡಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಮನೆ ಬೀಗ ಒಡೆದು ಕಳ್ಳತನ ಮಾಡುತ್ತಿದ್ದರು. ಅ.8 ಮತ್ತು 9ರಂದು ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಎರಡು ಮನೆಗೆ ಕನ್ನ ಹಾಕಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರೋಪಿಗಳು ಕದ್ದ ಚಿನ್ನಾಭರಣಗಳನ್ನು ನೇಪಾಳಕ್ಕೆ ಕೊಂಡೊಯ್ದು ಮಾರಾಟ ಮಾಡಿ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಕಳವು ಮಾಡಿದ ಚಿನ್ನಾಭರಣವನ್ನು ಕಮಲ್‌ಸಿಂಗ್‌ ಮತ್ತು ಮೋಹನ್‌ ಸಿಂಗ್‌ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಈತನ ಬಂಧನದಿಂದ ಬಾಣಸವಾಡಿ ಠಾಣೆಯ ಐದು, ರಾಮಮೂರ್ತಿ ನಗರದ ಠಾಣೆಯ ಒಂದು ಕಳವು ಪ್ರಕರಣ ಬೆಳಕಿಗೆ ಬಂದಿದೆ.

click me!