ಮುದ್ದಿನ ನಾಯಿ ಸಾವು ಕಂಡ ನೋವು, ತನ್ನ ಜೀವನವನ್ನೇ ಮುಗಿಸಿದ ಯುವಕ!

By Santosh Naik  |  First Published Jan 1, 2025, 1:48 PM IST

ಬೆಂಗಳೂರಿನಲ್ಲಿ ತನ್ನ ಮುದ್ದಿನ ನಾಯಿ ಸಾವಿನ ನೋವು ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 9 ವರ್ಷಗಳಿಂದ ಸಾಕಿದ್ದ ನಾಯಿ ಸಾವಿನಿಂದ ಮನನೊಂದ ರಾಜಶೇಖರ್ ನೇಣಿಗೆ ಶರಣಾಗಿದ್ದಾರೆ.


ಬೆಂಗಳೂರು (ಜ.1): ಮುದ್ದಿನ ನಾಯಿ ಸಾವು ಕಂಡ ನೋವು ತಾಳಲಾರದೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತನ್ನ ಮನೆಯಲ್ಲಿ ಸಾಕಿದ್ದ ಶ್ವಾನವನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದ ವ್ಯಕ್ತಿ ಇತ್ತೀಚೆಗೆ ಸಾವು ಕಂಡಿತ್ತು. ಇದರ ನೋವು ಸಿಕ್ಕಾಪಟ್ಟೆ ಬಾಧಿಸುತ್ತಿದ್ದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. 35 ವರ್ಷದ ರಾಜಶೇಖರ್‌ಮೃತ ಯುವಕ. ಕಳೆದ 9 ವರ್ಷದಿಂದ ಸಾಕಿದ್ದ ಪ್ರೀತಿಯ ನಾಯಿ 2024ರ ಕೊನೆಯ ದಿನದಂದು ಸಾವು ಕಂಡಿತ್ತು. ಇದರಿಂದ ಮನನೊಂದಿದ್ದ ರಾಜಶೇಖರ್‌ ಬುಧವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಶೇಖರ್‌ ನೆಟ್‌ವರ್ಕ್‌ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ತನ್ನ ನಾಯಿಯ ಸಾವಿನಿಂದ ತೀವ್ರ ನೋವಿನಲ್ಲಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೆಲಮಂಗಲ ಆಕ್ಸಿಡೆಂಟ್‌ನಲ್ಲಿ ಮಗ, ಸೊಸೆ, ಮೊಮ್ಮಕ್ಕಳ ಕಳೆದುಕೊಂಡ ಶೋಕ, ಚಂದ್ರಮ್‌ ತಂದೆ ಈರಗೊಂಡ ಕೂಡ ಸಾವು!

Tap to resize

Latest Videos

ಇದನ್ನೂ ಓದಿ: ನೆಲಮಂಗಲ ಜನರಿಗೆ ಮತ್ತೆ ಕಾಡಿದ 'ನಂಬರ್‌ 6', ಹೆದ್ದಾರಿ ಅಪಘಾತಕ್ಕೂ ನಂಬರ್ ಪ್ಲೇಟ್‌ಗೂ ಏನಿದೆ ಲಿಂಕ್‌?

 

click me!