ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಗರಂ ಆದ ಘಟನೆ ಚಿಂತಾಮಣಿಯಲ್ಲಿ ನಡೆಯಿತು.
ಚಿಕ್ಕಬಳ್ಳಾಪುರ (ಜು.03): ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಗರಂ ಆದ ಘಟನೆ ಚಿಂತಾಮಣಿಯಲ್ಲಿ ನಡೆಯಿತು. ಸಚಿವ ಸುಧಾಕರ್ ಚಿಂತಾಮಣಿ ನಗರದ ನೆಕ್ಕುಂದಿ. ಗೋಪಸಂದ್ರ ಕೆರೆಗಳು ವೀಕ್ಷಣೆ ಮಾಡಿದ ನಂತರ ಸಂಬಂಧಪಟ್ಟಅಧಿಕಾರಿಗಳು ಕೆರೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ.
ಸ್ವಚ್ಛತೆ ಕಾಪಾಡಿಲ್ಲ. ಕೆರೆಗೆ ಕೊಳಚೆ ನೀರನ್ನು ಹರಿಸಿರುವುದು ಹಾಗೂ ಕೆರೆಯಲ್ಲಿ ಅನಧಿಕೃತವಾಗಿ ಮೀನುಗಳನ್ನು ಬಿಟ್ಟಿರುವುದನ್ನು ಕಂಡುಬಂದಿದ್ದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರೇಖಾ, ಸಹಾಯಕ ನಿರ್ದೇಶಕರಾದ ಭರತ್ ರವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಈ ಕುರಿತು ಅಧಿಕಾರಿಗಳ ನಿರ್ಲಕ್ಷ ಮಾಡಿರುವ ಕಾರಣ ನೋಟಿಸ್ ಜಾರಿ ಮಾಡಿ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ: ಸಭೆಯಲ್ಲಿ ಶಾಸಕ ಬಾಲಕೃಷ್ಣ ಅಧಿಕಾರಿಗಳಿಗೆ ತಾಕೀತು
ಅಕ್ರಮ ಲೇಔಟ್ ನಿರ್ಮಾಣ: ನೆಕ್ಕುಂದಿ ಕರೆ ಸಮೀಪ ಕೆಲ ಪ್ರಭಾವಿ ವ್ಯಕ್ತಿಗಳು ಅಕ್ರಮ ಲೇಔಟ್ ನಿರ್ಮಾಣ ಮಾಡಿರುವ ಬಗ್ಗೆ ಸ್ಥಳೀಯರು ಸಚಿವರಿಗೆ ದೂರನ್ನು ನೀಡಿದಾಗ ಕೂಡಲೇ ಸಚಿವರು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಅಕ್ರಮ ಲೇಔಟ್ ಮಾಡಿರುವುದನ್ನು ಪರಿಶೀಲನೆ ನಡೆಸಿ ಕೂಡಲೇ ಪೋಲಿಸರ ಭದ್ರತೆಯೊಂದಗೆ ಅಕ್ರಮ ಲೇಔಟ್ ಮಾಡಿರುವವರ ವಿರುದ್ಧ ಕ್ರಮ ಜರುಗಿಸಿ ಬೇಲಿ ಹಾಕಿ ಎಂದು ಖಡಕ್ ಆಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಜಿ.ಪಂ.ಸಿ ಇ ಓ ಪ್ರಕಾಶ್.ಜಿ.ನಿಟ್ಟಾಲಿ,ಜಿಲ್ಲಾ ರಕ್ಷಣಾಧಿಕಾರಿ ಡಿ.ಎಲ್.ನಾಗೇಶ್,ಉಪ ವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ತಾಲ್ಲೂಕ್ ಮಟ್ಟದ ಅಧಿಕಾರಿಗಳು ಇದ್ದರು.
ರಾಜ್ಯದಲ್ಲಿ ಮತ್ತೆ ಎಸ್‌ಇಪಿ ಜಾರಿ: ರಾಜ್ಯದಲ್ಲಿ 2 ವರ್ಷಗಳಿಂದ ಜಾರಿಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಕೈಬಿಟ್ಟು ಎಂದಿನಂತೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ಸಿದ್ಧತೆಗಳು ಸಾಗಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಇಂಗಿತ ವ್ಯಕ್ತಪಡಿಸಿದ್ದಾರೆ. ಗುವಿವಿ ಘಟಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತುಂಬ ಆತುರದಲ್ಲಿ ಜಾರಿ ಮಾಡಲಾಗಿದೆ. ರಾಜ್ಯದಲ್ಲಿರುವ ವಿವಿಗಳು ಸನ್ನದ್ಧವಾಗಿದ್ದವೆ? ಇಲ್ಲವೆ? ಎಂಬುದನ್ನು ನೋಡದೆಯೇ ಎನ್‌ಇಪಿ ಜಾರಿಗೆ ತರಲಾಗಿದೆ.
ಮಕ್ಕಳಿಗೆ ಈ ನೀತಿಯಂತೆ 2 ವರ್ಷ ಪೂರೈಸಿ 3ನೇ ವರ್ಷದಲ್ಲಿದ್ದಾರೆ. ಆದರೆ ಈ ನೀತಿಯ ಸಾಧಕ- ಬಾದಕಗಳ ಚರ್ಚೆ ಇಂದಿಗೂ ಸಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ರಾಜ್ಯ ಶಿಕ್ಷಣ ನೀತಿ ಜಾರಿಗೆ ಒಲವು ತೋರಿದೆ ಎಂದರು. ಈಗಾಗಲೆ ರಾಜ್ಯದಲ್ಲಿ ಎರಡು ವರ್ಷದ ಹಿಂದೆ ಎನ್‌ಇಪಿ ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಶಿಕ್ಷಣ ತಜ್ಞರ ಸಭೆ ಕರೆದು ಸಾಧಕ-ಬಾಧಕ ಚರ್ಚಿಸಿಯೇ ಎಸ್‌ಇಪಿ ಜಾರಿಗೆ ತರಲಾಗುವುದು ಎಂದರು.
ಪಶು ಸಂಗೋಪನಾ ಪಾಲಿಟೆಕ್ನಿಕ್‌ಗೆ ಮತ್ತೆ ಪ್ರವೇಶಾವಕಾಶ: ಶಿಕ್ಷಣಕ್ಕೆ ಕಾಳಜಿ ತೋರಿದ ಶಾಸಕ ಗಣೇಶ್ ಪ್ರಸಾದ್
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಅನ್ವಯ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು. ಏತನ್ಮಧ್ಯೆ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ-ಬಾಧಕಗಳ ಚರ್ಚೆ ಸಾಗಿದೆ. ಈ ವಿಷಯದ ಪರ ಹಾಗೂ ವಿರೋಧವಾಗಿರುವವರು, ಶಿಕ್ಷಣ ತಜ್ಞರು ಶಿಣ ರಂಗದಲ್ಲಿರುವವರು ಎಲ್ಲರನ್ನು ಒಗ್ಗೂಡಿಸಿ ಮತ್ತೊಮ್ಮೆ ಚರ್ಚಿಸಲಾಗುತ್ತದೆ. ಕೌಶಲ್ಯ ಸಂಬಂಧಿ ಸಂಗತಿಗಳು ಹೆಚ್ಚು ಚರ್ಚೆಯಲ್ಲಿರೋದರಿಂದ ಇಂತಹದ್ದೆಲ್ಲವೂ ಸೇರಿಸಿಯೇ ರಾಜ್ಯ ಶಿಕ್ಷಣ ನೀತಿ ರೂಪಿಸುವ ಚಿಂತನೆ ಸಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ತಜ್ಞರೊಂದಿಗೆ ಪರಾಮರ್ಶೆ ನಡೆಸಲಾಗುತ್ತಿದೆ. ಶೀಘ್ರವೇ ಅಂತಿನ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಸಚಿವ ಡಾ. ಸುಧಾಕರ್ ಹೇಳಿದರು.