'ಸಂಪುಟದಲ್ಲಿ ಹೊಸಬರಿಗೂ ಅವಕಾಶ ಕೊಡಿ : ಸಚಿವ ಸ್ಥಾನಕ್ಕೆ ಡಿಮ್ಯಾಂ

By Kannadaprabha News  |  First Published Sep 30, 2020, 9:30 AM IST

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗಿವೆ. ಇದೇ ವೇಳೆ ಆಕಾಂಕ್ಷಿಗಳ ಸಮಖ್ಯೆಯೂ ಹೆಚ್ಚಾಗಿದೆ. ಅನೇಕ ಮುಖಂಡರು ಈಗಾಗಲೇ ಸಚಿವ ಸ್ಥಾನಕ್ಕಾಗಿ ಈಗಾಗಲೇ ಬೇಡಿಕೆ ಇಡುತ್ತಿದ್ದಾರೆ


ಹಾವೇರಿ (ಸೆ.30): ಸಚಿವ ಸಂಪುಟದಲ್ಲಿ ಕೆಲವರು ಕೆಲಸ ಮಾಡದವರಿದ್ದು, ಅಂಥವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಆಗ್ರಹಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮಾತುಕತೆ ನಡೆಯುತ್ತಿವೆ.

 ಸಂಪುಟ ಪುನಾರಚನೆಯಾದರೆ ನಮಗೂ ಅವಕಾಶ ಸಿಗಬಹುದು. ಪರಿಶಿಷ್ಟಜಾತಿಯ ಬಲಗೈ ಸಮುದಾಯದಿಂದ ನಾನು ಮೂರು ಬಾರಿ ಆಯ್ಕೆಯಾಗಿದ್ದೇನೆ. ಆದ್ದರಿಂದ ನನಗೂ ಸಂಪುಟದಲ್ಲಿ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾವಿದೆ ಎಂದಿ​ದ್ದಾರೆ.

Tap to resize

Latest Videos

ಶಿರಾಕ್ಕೆ ಕೈ ಅಭ್ಯರ್ಥಿ ಟಿಬಿಜೆ; ಬಿಜೆಪಿ, ದಳದಿಂದ ಯಾರು? ...
 
ಸಂಪುಟದಲ್ಲಿ ಬಹಳ ಜನ ಕೆಲಸ ಮಾಡದೆ ಇರುವವರು ಇದ್ದಾರೆ. ಇದು ಮುಖ್ಯಮಂತ್ರಿಗಳಿಗೆ, ಹೈಕಮಾಂಡ್‌, ಹಾಗೂ ರಾಜ್ಯಾಧ್ಯಕ್ಷರಿಗೂ ಗೊತ್ತಿದೆ. ಈ ನಿಟ್ಟಿನಲ್ಲಿ ಅಂಥವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಮುಂದಿನ ಮೂರು ವರ್ಷ ಸರ್ಕಾರ ಸುಸೂತ್ರವಾಗಿ ನಡೆಸಲು ಅನುಕೂಲವಾಗುತ್ತದೆ ಎಂದರು.

click me!