ತುಂಗಾನದಿಗೆ ಮಲಿನ ನೀರು ಸೇರ​ದಂತೆ ಅಗತ್ಯ ಕ್ರಮ: ಕೆ.ಎಸ್‌.ಈಶ್ವರಪ್ಪ

By Kannadaprabha NewsFirst Published Jan 1, 2023, 7:08 AM IST
Highlights

ನಗರದ ಮಲಿನ ನೀರು ಶುದ್ಧೀಕರಣಗೊಳ್ಳದೇ ತುಂಗಾನದಿ ಸೇರುವುದನ್ನು ನಿರ್ಬಂಧಿಸಿ, ಅದಕ್ಕೆ ಪರ್ಯಾಯವಾಗಿ ನೀರನ್ನು ಬೇರೆಡೆಗೆ ಪರಿವರ್ತಿಸಿ, ಶುದ್ಧೀಕರಣಗೊಳಿಸಿದ ಬಳಿಕ ತುಂಗಾನದಿಗೆ ಹರಿ​ಸು​ವ .15.15 ಕೋಟಿ ವೆಚ್ಚದ ಯೋಜನೆಗೆ ಶಾಸಕ ಕೆ.ಎಸ್‌.ಈಶ್ವರಪ್ಪ ಶನಿವಾರ ಕೆ.ಆರ್‌. ವಾಟರ್‌ ವರ್ಕ್ಸ್ ಸಮೀಪದಲ್ಲಿ ಚಾಲನೆ ನೀಡಿದರು.

ಶಿವಮೊಗ್ಗ (ಜ.1) : ನಗರದ ಮಲಿನ ನೀರು ಶುದ್ಧೀಕರಣಗೊಳ್ಳದೇ ತುಂಗಾನದಿ ಸೇರುವುದನ್ನು ನಿರ್ಬಂಧಿಸಿ, ಅದಕ್ಕೆ ಪರ್ಯಾಯವಾಗಿ ನೀರನ್ನು ಬೇರೆಡೆಗೆ ಪರಿವರ್ತಿಸಿ, ಶುದ್ಧೀಕರಣಗೊಳಿಸಿದ ಬಳಿಕ ತುಂಗಾನದಿಗೆ ಹರಿ​ಸು​ವ .15.15 ಕೋಟಿ ವೆಚ್ಚದ ಯೋಜನೆಗೆ ಶಾಸಕ ಕೆ.ಎಸ್‌.ಈಶ್ವರಪ್ಪ ಶನಿವಾರ ಕೆ.ಆರ್‌. ವಾಟರ್‌ ವರ್ಕ್ಸ್ ಸಮೀಪದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಮಾರ್ಟ್ ಸಿಟಿ(Smart city project) ಯೋಜನೆಯಡಿ ನಗರದ ಇಮಾಂ ಬಾಡ, ಮಂಡಕ್ಕಿ ಭಟ್ಟಿ, ಅಯ್ಯಪ್ಪಸ್ವಾಮಿ ದೇವಸ್ಥಾನ, ಕೊಲ್ಲೂರಯ್ಯನ ಬೀದಿ, ಭೀಮೇಶ್ವರ ದೇವಸ್ಥಾನ, ಬಿ.ಸಿ.ಎಂ. ಹಾಸ್ಟೆಲ್‌ ಹಾಗೂ ಬೆಕ್ಕಿನ ಕಲ್ಮಠದ ಸಮೀಪ ಸೇರಿದಂತೆ ತುಂಗಾನದಿ ತೀರದ 7 ಸ್ಥಳಗನ್ನು ಗುರುತಿಸಿ, ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ತಡೆದು, ಸಂಸ್ಕರಿಸಿ ನದಿಗೆ ಬಿಡುವ 1.28 ಕೋಟಿ ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಬಸವಪ್ರಭು ಶ್ರೀಗಳೇ ಸಿದ್ದರಾಮಯ್ಯರನ್ನು ಸಿಎಂ ಮಾಡಲಿ: ಕೆ.ಎಸ್‌.ಈಶ್ವರಪ್ಪ

ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ತ್ಯಾವರಚಟ್ನಳ್ಳಿ, ಗುಂಡಪ್ಪ ಶೆಡ್‌, ಗುರುಪುರ, ಕಂಟ್ರಿ ಕ್ಲಬ್‌, ವಿದ್ಯಾನಗರ, ಕೆ.ಆರ್‌.ವಾಟರ್‌ ವರ್ಕ್ಸ್, ಮಂಡ್ಲಿ ಹಾಗೂ ವಾದಿ-ಎ-ಹುದಾ ಸ್ಥಳಗಳಲ್ಲಿ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ನಿಯಂತ್ರಿಸಿ ಬಿಡಲು 9ಸ್ಥಳಗಳನ್ನು ಗುರುತಿಸಲಾಗಿದ್ದು, .15.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಯನ್ನು ಮುಂದಿನ ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಿ ಸೇವೆಗೆ ಮುಕ್ತಗೊಳಿಸಲಾಗುವುದು ಎಂದರು.

ನಗರ ಬೆಳೆದಂತೆಲ್ಲಾ ನಗರದ ನಿವಾಸಿಗಳ ಬೇಡಿಕೆಗಳು ಹೆಚ್ಚುತ್ತಲೇ ಇ​Êವೆ ಅವರ ಆಶಯಗಳಿಗೆ ಪೂರಕವಾಗಿ ಕಾಲಕಾಲಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ, ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ಆದಾಗ್ಯೂ ದಿನದ 24 ಗಂಟೆಯೂ ನೀರನ್ನು ಕೊಡುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಯು.ಜಿ.ಡಿ. ಸಂಪರ್ಕ ವ್ಯವಸ್ಥೆ ಪೂರ್ಣಗೊಂಡಿದ್ದು, ಮನೆಮನೆಗೆ ಸಂಪರ್ಕ ಕಲ್ಪಿಸುವ ಯತ್ನ ಮುಂದುವರಿದಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(National Green Justice Council) ನಿರ್ದೇಶನದ ಮೇರೆಗೆ ನದಿಗಳ ಪುನರುಜ್ಜೀವನ ಸಲಹಾ ಸಮಿತಿಯ 35 ನಗರ ಪಟ್ಟಣಗಳಿಂದ ಉತ್ಪತ್ತಿ ಆಗುವ ಒಳಚರಂಡಿ ತ್ಯಾಜ್ಯದಿಂದಾಗಿ ಕಲುಶಿತಗೊಳ್ಳುತ್ತಿರುವ ರಾಜ್ಯದ 17 ನದಿ ಪ್ರದೇಶಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಆದ್ದರಿಂದ ಶಿವಮೊಗ್ಗ(Shivamogga) ನಗರದ ಹಲವೆಡೆ ಮಲಿನ ನೀರು ನದಿಪಾತ್ರಕ್ಕೆ ಶುದ್ಧೀಕರಣಗೊಳ್ಳದೇ ಸೇರುವುದನ್ನು ತಡೆಯಲು ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆ ಉತ್ತಮಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಈ ಯೋಜನೆ ಸಮರ್ಪಕ ಅನುಷ್ಠಾನದಿಂದಾಗಿ ತುಂಗೆಗೆ ಮಲಿನ ನೀರುವುದನ್ನು ನಿಯಂತ್ರಿಸಬಹುದಾಗಿದೆ. ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕರೂ ಸಹಕರಿಸುವಂತೆ ಹಾಗೂ ತ್ವರಿತಗತಿಯಲ್ಲಿ ಗುಣಮಟ್ಟದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಈಗಷ್ಟೇ ಮದುವೆಯಾಗಿದೆ 10 ಮಕ್ಕಳಾಗಬೇಕು ಎಂದರೆ ಹೇಗೆ?: ಡಿಕೆಶಿ ವಿರುದ್ಧ ಹರಿಹಾಯ್ದ ಈಶ್ವರಪ್ಪ

ಪಾಲಿಕೆ ಮೇಯರ್‌ ಶಿವಕುಮಾರ್‌, ಉಪಮೇಯರ್‌ ಲಕ್ಷಿ ್ಮೕಶಂಕರ್‌, ಸದಸ್ಯರು ಮಾತನಾಡಿ, ಜ್ಞಾನೇಶ್ವರ್‌, ಸೂಡಾ ಅಧ್ಯಕ್ಷ ನಾಗರಾಜ್‌, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್‌, ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್‌ಕುಮಾರ್‌, ಸ್ಮಾರ್ಚ್‌ಸಿಟಿ ಎಂಜಿನಿಯರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

click me!