ಮಂಗಳೂರಿಗೆ ಎನ್‌ಡಿಆರ್‌ಎಫ್‌ ತಂಡ ಆಗಮನ

By Kannadaprabha News  |  First Published Jun 3, 2020, 8:28 AM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ದುರಂತಗಳನ್ನು ನಿರ್ವಹಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್‌) ತಂಡ ಮಂಗಳವಾರ ಮಂಗಳೂರಿಗೆ ಆಗಮಿಸಿದೆ.


ಮಂಗಳೂರು(ಜೂ. 03): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ದುರಂತಗಳನ್ನು ನಿರ್ವಹಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್‌) ತಂಡ ಮಂಗಳವಾರ ಮಂಗಳೂರಿಗೆ ಆಗಮಿಸಿತು. ಸುಮಾರು 25 ಸದಸ್ಯರ ಈ ತಂಡವು ಪಿಲಿಕುಲ ಸ್ಕೌಟ್ಸ್‌ ಭವನದಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸನ್ನಿವೇಶ ಎದುರಿಸಲು ಜಿಲ್ಲಾಡಳಿತಕ್ಕೆ ಎನ್‌ಡಿಆರ್‌ಎಫ್‌ ನೆರವಾಗಲಿದೆ.

 ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ಎದುರಿಸಲು ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್‌ ನಿಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.

Tap to resize

Latest Videos

ಕೊಪ್ಪಳ: ವಿಜಯನಗರ ಕಾಲುವೆ ಅಭಿವೃದ್ಧಿಗೆ 24 ಕೋಟಿ ರು., ಶಾಸಕ ಹಿಟ್ನಾಳ

ಕಳೆದೆರಡು ವರ್ಷಗಳಲ್ಲಿ ನಡೆದ ದುರಂತಗಳನ್ನು ಆಧರಿಸಿ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಧಾರವಾಡ ಜಿಲ್ಲೆಯನ್ನು 4 ಕೇಂದ್ರವಾಗಿಸಿ ಎನ್‌ಡಿಆರ್‌ಎಫ್‌ ಬೆಟಾಲಿಯನ್‌ ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಟಾಲಿಯನ್‌ ಉಡುಪಿ ಮತ್ತು ಉತ್ತರ ಕನ್ನಡದ ಮೇಲೂ ನಿಗಾ ಇರಿಸಲಿದೆ. ಕೊಡಗಿನ ಬೆಟಾಲಿಯನ್‌ ಮೈಸೂರು, ಹಾಸನ ಮತ್ತು ಮಲೆನಾಡಿನ ಇತರ ಜಿಲ್ಲೆಗಳು, ಬೆಳಗಾವಿಯ ಬೆಟಾಲಿಯನ್‌ ಬಾಗಲಕೋಟೆ, ವಿಜಯಪುರ ಮತ್ತು ಪಕ್ಕದ ಜಿಲ್ಲೆಗಳು, ಧಾರವಾಡ ಬೆಟಾಲಿಯನ್‌ ಗದಗ, ಹಾವೇರಿ ಮತ್ತು ಪಕ್ಕದ ಜಿಲ್ಲೆಗಳ ಮೇಲೆ ನಿಗಾ ಇಡಲಿವೆ.

ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

ಮಳೆಗಾಲಕ್ಕೆ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಗೆ ಎನ್‌ಡಿಆರ್‌ಎಫ್‌ ತಂಡ ಆಗಮಿಸಲಿದೆ. ಭಾರಿ ಮಳೆಯ ಸಂದರ್ಭದಲ್ಲಿ ಈ ತಂಡ ವಿಶೇಷ ಕಾರ್ಯ ನಿರ್ವಹಿಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

click me!