ರಾಹುಲ್‌ ಪಾದಯಾತ್ರೆಯಲ್ಲಿ ಮಕ್ಕಳ ಬಳಕೆ: ಮಕ್ಕಳ ಆಯೋಗ ನೋಟಿಸ್‌

By Kannadaprabha News  |  First Published Oct 12, 2022, 10:00 AM IST

ಮಕ್ಕಳ ಆಯೋಗದಿಂದ ರಾಜಕೀಯ ಕಾರಣಕ್ಕೆ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ 


ಚಿತ್ರದುರ್ಗಅ.12):  ಭಾರತ್‌ ಜೋಡೋ ಯಾತ್ರೆಯಲ್ಲಿ ಮಕ್ಕಳ ದುರುಪಯೋಗ ಆರೋಪದ ಮೇರೆಗೆ ಮಕ್ಕಳ ಆಯೋಗದವರು ನೋಟಿಸ್‌ ನೀಡಿದ್ದಾರೆ. ಮಹಿಳಾ ಆಯೋಗದ ಈ ನಡೆ ಹಿಂದೆ ರಾಜಕೀಯ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೋಟಿಸ್‌ಗೆ ಈಗಾಗಲೇ ಪಕ್ಷದಿಂದ ಐವತ್ತು ಪುಟದ ಉತ್ತರ ನೀಡಲಾಗಿದೆ. ಭಾರತ್‌ ಜೋಡೋ ಯಾತ್ರೆಯಲ್ಲಿ ಪಕ್ಷ, ಜಾತಿ, ಧರ್ಮ ಇಲ್ಲ. ಮಕ್ಕಳೊಂದಿಗೆ ಬಂದು ಯಾರು ಬೇಕಾದರೂ ಭಾಗಿ ಆಗಬಹುದು. ಇಂದಿರಾಗಾಂಧಿ ಕುಟುಂಬದ ಮೊಮ್ಮಗನ ಯಾತ್ರೆಗೆ ಜನ ಬರುತ್ತಿದ್ದಾರೆ. ರಾಹುಲ್‌ ಜನರ ನೋವು, ನಲಿವು ಹಂಚಿಕೊಳ್ಳುತ್ತಿದ್ದಾರೆ ಎಂದರು. 

Latest Videos

undefined

ಭಾರತ್‌ ಜೋಡೋ ಯಾತ್ರೆ ಭವಿಷ್ಯದ ರಾಜಕಾರಣಕ್ಕೆ ದಿಕ್ಸೂಚಿ

ರಾಜಕಾರಣಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ. ಮಕ್ಕಳ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷ ಯೋಜನೆಗಳನ್ನು ರೂಪಿಸಿದೆ. ರಾಜಕೀಯಕ್ಕಾಗಿ ಮಕ್ಕಳ ಆಯೋಗದಿಂದ ದೂರು ದಾಖಲಿಸಲಾಗಿದೆ. ಜನ ತೋರುವ ಪ್ರೀತಿ ಸಹಿಸದೆ ಅಸೂಯೆಯಿಂದ ದೂರು ದಾಖಲು ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ರಾಹುಲ್ ಗಾಂಧಿ ನೋಡಲು ಮಕ್ಕಳು ನಿಂತಿದ್ದರು. ಇದನ್ನು ಕಂಡು 4 ಜನ ಮಕ್ಕಳನ್ನ ಕರೆದು ರಾಹುಲ್ ಮಾತನಾಡಿಸಿ ಮಕ್ಕಳ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ್ದರು. ಇನ್ನು ಇದೇ ವೇಳೆ ಮಕ್ಕಳ‌ನ್ನ ಕರೆದಾಗ ವ್ಯಕ್ತಿಯೊಬ್ಬ ರಾಹುಲ್ ಬಳಿಕ ಬರಲು ‌ಪ್ರಯತ್ನಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನ ತಡೆದು ಪಕ್ಕಕ್ಕೆ ಕಳಿಸಿದ್ದರು.  ರಾಹುಲ್ ಗಾಂಧಿ ನೋಡಲು ಚಿಕ್ಕ ಹುಡುಗನೊಬ್ಬ ಕಾಂಗ್ರೆಸ್ ಬಾವುಟ ಹಿಡಿದು ರಸ್ತೆ ಪಕ್ಕದಲ್ಲಿ ನಿಂತಿದ್ದನು. ಹುಡುಗ ನಿಂತಿರುವ ಜಾಗಕ್ಕೆ ಹೋಗಿ ಅವನನ್ನು ಕರೆದುಕೊಂಡು ಬಂದು ಕೊನೆಗೆ ಅವನ ಕೈ ಹಿಡಿದು ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ದರು. 

ಹರ್ತಿಕೋಟೆ ಬಳಿ ಮಕ್ಕಳೊಂದಿಗೆ ರಾಹುಲ್ ಹೆಜ್ಜೆ ಹಾಕಿತ್ತಿರುವಾಗ ಐದಾರು ಮಕ್ಕಳನ್ನು ರನ್ನಿಂಗ್ ರೇಸ್ ಮಾಡಿಸಿದ್ದರು. ರಾಹುಲ್ ಎದುರು ಸ್ಪರ್ಧೆಗೆ ಬಿದ್ದು ಮಕ್ಕಳು ಓಡಿದ್ದರು. ಮತ್ತೆ ಮಕ್ಕಳನ್ನು ಹತ್ತಿರ ಕರೆದು ರಾಹುಲ್‌ ಗಾಂಧಿ ಹೆಜ್ಜೆ ಹಾಕಿದ್ದರು. 
 

click me!