ಚನ್ನಪಟ್ಟಣ (ಅ.12): ಚನ್ನಪಟ್ಟಣದ (Channapattana) ನೀರಿನ ಟ್ಯಾಂಕರ್ ನಲ್ಲಿ ಮಹಿಳೆ ಕಾಲು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಕೈ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣ ತಾಲೂಕು ಆಡಳಿತ, ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಚನ್ನಪಟ್ಟಣ ಕಾಂಗ್ರೆಸ್ (Congress) ನಿಂದ ತಹಶೀಲ್ದಾರ್ ಹಾಗೂ ಪೊಲೀಸ್ (Police) ಇಲಾಖೆಗೆ ನಿಯೋಗ ದೂರು ನೀಡಿದೆ.
ಚನ್ನಪಟ್ಟಣ ತಾಲೂಕು ಕಾಂಗ್ರೆಸ್ (Congress) ನಿಯೋಗದ ವತಿಯಿಂದ ಮನವಿ ಸಲ್ಲಿಕೆ ಮಾಡಿದ್ದು, ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ನಗರಸಭೆಯ ಅಧಿಕಾರಿಗಳು ಸಹ ನಿಷ್ಕ್ರಿಯರಾಗಿದ್ದಾರೆ. ಕ್ಷೇತ್ರದ ಶಾಸಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.
ಸರ್ಪದಿಂದ ಕಚ್ಚಿಸಿ ಪತ್ನಿ ಕೊಲೆ.. ಪಾಪಿ ಪತಿಗೆ 82 ದಿನದಲ್ಲೇ ಶಿಕ್ಷೆ!
ಚನ್ನಪಟ್ಟಣದ ಕಡೆಗೆ ಕುಮಾರಸ್ವಾಮಿ ಮುಖ ಮಾಡುತ್ತಿಲ್ಲ. ಅಧಿಕಾರಿಗಳ ಸಭೆ ನಡೆಸಿ ಎಷ್ಟೋ ತಿಂಗಳು ಕಳೆದಿವೆ. ಯಾವ ಇಲಾಖೆಯ ಅಧಿಕಾರಿಗಳು ಸಹ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನೀರಿನ ಟ್ಯಾಂಕರ್‌ನಲ್ಲಿ (Tanker) ಮಹಿಳೆಯ ಕಾಲು ಪತ್ತೆಯಾಗಿದೆ. ಕಾಲಿನ ಬದಲು ವಿಷ ಹಾಕಿದ್ದರೆ ಯಾರು ಜವಾಬ್ದಾರಿಯಾಗುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಸಾವು ನೋವಾಗಿದ್ದರೆ ಕ್ಷೇತ್ರದ ಜನರ ಬಗ್ಗೆ ಜವಾಬ್ದಾರಿ ಯಾರು ವಹಿಸುತ್ತಿದ್ದರು ಎಂದು ಕೇಳಿದ್ದಾರೆ.
ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರಸ್ತಾಪ ಅಸಮಾಧಾನ ಹೊರಹಾಕಲಾಗಿದೆ.
ಕುಡಿವ ನೀರಿನ ಟ್ಯಾಂಕಲ್ಲಿ ಮಹಿಳೆಯ ಕಾಲು ಪತ್ತೆ!
ಮಹಿಳೆಯೊಬ್ಬರ ಕಾಲೊಂದು ಪಟ್ಟಣದ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿತ್ತು. ಇದರಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ಹೊಸ ನ್ಯಾಯಾಲಯದ ಪ್ರದೇಶದಲ್ಲಿ ಕೆಲ ದಿನಗಳಿಂದ ಸೂಕ್ತವಾಗಿ ನೀರು ಬರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಜಲಮಂಡಳಿ ಸಿಬ್ಬಂದಿ ನೀರಿನ ಟ್ಯಾಂಕ್‌ನ ವಾಲ್‌್ವ ಅನ್ನು ಬಿಚ್ಚಿ ಪರಿಶೀಲಿಸಿದಾಗ ಕಾಲೊಂದು ಪತ್ತೆಯಾಗಿದೆ. ಟ್ಯಾಂಕ್ ಮೇಲೆ ಮಹಿಳೆಯ ಸೀರೆ ಹಾಗೂ ಚಪ್ಪಲಿ ದೊರೆತಿತ್ತು. . ಮಹಿಳೆಯ ಶವಕ್ಕಾಗಿ ಶೋಧ ಮುಂದುವರಿದಿತ್ತು.
ದ್ದು, ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಾಲು ದೊರೆತ ಹಿನ್ನೆಲೆಯಲ್ಲಿ ಟ್ಯಾಂಕನ್ನು ಪರಿಶೀಲಿಸಿದಾಗ, ಟ್ಯಾಂಕ್ ಮೇಲೆ ಮಹಿಳೆಯ ಸೀರೆ ಹಾಗೂ ಚಪ್ಪಲಿ ದೊರೆತಿದೆ. ಇದರಿಂದಾಗಿ ಮಹಿಳೆ ಟ್ಯಾಂಕ್‌ಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತಳ ಸಂಪೂರ್ಣ ಶವ ಇನ್ನೂ ಪತ್ತೆಯಾಗದ ಹಿನ್ನೆಯಲ್ಲಿ , ನಗರಸಭೆ, ಪೊಲೀಸ್ ಇಲಾಖೆ, ಜಲಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಶವ ಹುಡುಕುವ ಕಾರ್ಯ ಆರಂಭಿಸಿದ್ದಾರೆ.